HomePage_Banner
HomePage_Banner
HomePage_Banner
HomePage_Banner

ನಿತ್ಯ ಕರಸೇವಾ ಪ್ರಮುಖ್ ಹರೀಶ್ ಪೈ ಗೆ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
  • ಕರಸೇವೆಗೆ ಹೊಸ ರೂಪ ಕೊಟ್ಟವರು – ಪಿ.ಜಿ.ಜಗನ್ನಿವಾಸ ರಾವ್
  • ಹರೀಶ್ ಪೈ ಶಿವನ ಪಾದಕ್ಕೆ ಸೇರಿದ್ದಾರೆ – ಕೆ.ಪ್ರೀತಂ ಪುತ್ತೂರಾಯ
  • ಅಭಿನಂದನಾರ್ಹರಾದವರಿಗೆ ಶ್ರದ್ದಾಂಜಲಿ – ಶೇಖರ್ ನಾರಾವಿ
  • ಸದಾ ದೇವಸ್ಥಾನದ ಕಾರ್ಯದಲ್ಲಿ ಹರೀಶ್ ಪೈ – ಭಾಸ್ಕರ್ ಬಾರ್ಯ
  • ಕರಸೇವೆ ಮಾತ್ರವಲ್ಲ, ಕೋವಿಡ್ ಕಿಟ್‌ಗೂ ಸಹಕಾರ-ರಾಜೇಶ್ ಬನ್ನೂರು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಿತ್ಯ ಕರಸೇವಕರಾಗಿದ್ದ ಹರೀಶ್ ಪೈ ಅವರಿಗೆ ಇಲ್ಲಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ದೇವಳದ ನೌಕರರು ಮತ್ತು ನಿತ್ಯ ಕರಸೇವಕರಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಜು.೧೫ರಂದು ಸಂಜೆ ನಡೆಯಿತು. ಕೋವಿಡ್ -೧೯ ಹಿನ್ನಲೆಯಲ್ಲಿ ಸರಳ ರೀತಿಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡು ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಕರಸೇವೆಗೆ ಹೊಸ ರೂಪ ಕೊಟ್ಟವರು:
ದೇವಳದ ನಿತ್ಯಕರಸೇವಕರ ಮಾರ್ಗದರ್ಶಕರಾಗಿರುವ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ದೇವರು ಯಾರನ್ನು ಅತಿಯಾಗಿ ಪ್ರೀತಿಸುತ್ತಾರೋ ಅವರನ್ನು ಯವ್ವನದಲ್ಲೇ ಕರೆಸಿಕೊಳ್ಳುತ್ತಾರೆ ಎಂಬುದಕ್ಕೆ ಹರೀಶ್ ಪೈ ಅವರೇ ಸಾಕ್ಷಿಯಾಗಿದ್ದಾರೆ. ದೇವರ ಕೆಲಸದಲ್ಲಿ ನಿತ್ಯ ಮುಂಚೂಣಿಯಲ್ಲಿದ್ದ ಅವರು ಕರಸೇವೆಗೆ ಹೊಸ ರೂಪವನ್ನು ಕೊಟ್ಟವರಾಗಿದ್ದಾರೆ ಎಂದು ಹೇಳಿದರು.

ಹರೀಶ್ ಪೈ ಶಿವನ ಪಾದಕ್ಕೆ ಸೇರಿದ್ದಾರೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮವಾಹಕ ಕೆ ಪ್ರೀತಂ ಪುತ್ತೂರಾಯ ಅವರು ಮಾತನಾಡಿ ಶಿವನ ಪಾದಕ್ಕೆ ಸೇರುವ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ಆದರೆ ಅದು ಹರೀಶ್ ಪೈಗಳಿಗೆ ಸಿಕ್ಕಿದೆ. ದೇವಳದ ಕೆಲಸ ಕಾರ್ಯದಲ್ಲಿ ಒಂದು ಉತ್ತಮ ತಂಡವನ್ನು ರಚನೆ ಮಾಡಿ ಕೆಲಸ ಮಾಡಿದ ಕೀರ್ತಿ ಅವರದ್ದು ಎಂದು ಹೇಳಿದರು.

ಅಭಿನಂದಿಸುವ ಸಂದರ್ಭದಲ್ಲಿ ಶ್ರದ್ದಾಂಜಲಿ:
ದಸ್ತಾವೇಜು ಬರಹಗಾರ ಶೇಖರ್ ನಾರಾವಿ ಅವರು ಮಾತನಾಡಿ ಹರೀಶ್ ಪೈ ಅವರು ಮಾಡಿ ಕಾರ್ಯಗಳಿಗೆ ನಾವು ಅವರನ್ನು ಯಾವತ್ತೋ ಅಭಿನಂದಿಸಸಬೇಕಾಗಿತ್ತು. ಇಂತಹ ಒಂದು ಅಭಿಪ್ರಾಯ ಇರುವ ಸಂದರ್ಭದಲ್ಲೆ ಅವರು ನಮ್ಮನು ಅಗಲಿದ್ದಾರೆ. ಇವತ್ತು ಅವರಿಗೆ ಶ್ರದ್ದಾಂಜಲಿ ಮಾಡುವ ಮೂಲಕ ಅವರ ಅತ್ಮಕ್ಕೆ ಭಗವಂತನು ಚಿರಶಾಂತಿ ಕೊಡುವಂತೆ ಪ್ರಾರ್ಥಿಸುತ್ತಿದ್ದೇವೆ ಎಂದರು.

ಸದಾ ದೇವಸ್ಥಾನದ ಕಾರ್ಯದಲ್ಲಿ ಹರೀಶ್ ಪೈ:
ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅವರು ಮಾತನಾಡಿ ಹರೀಶ್ ಪೈ ಅವರು ಹೆಚ್ಚಾಗಿ ಕಾಣಸಿಗುವುದು ದೇವಸ್ಥಾನದಲ್ಲಿ ಮಾತ್ರ. ಅವರ ಪೈಂಟ್ ಅಂಗಡಿಯಲ್ಲೂ ಅವರು ಸಿಗುವುದಿಲ್ಲ. ಯಾಕೆಂದರೆ ಅವರಿಗೆ ದೇವರ ಸೇವೆಯೇ ಪ್ರಮುಖವಾಗಿತ್ತು ಎಂದರು.

ಕರಸೇವೆ ಮಾತ್ರವಲ್ಲ, ಕೋವಿಡ್ ಕಿಟ್‌ಗೂ ಸಹಕಾರ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಕರಸೇವಾ ಪ್ರಮುಖ್ ಆಗಿದ್ದ ರಾಜೇಶ್ ಬನ್ನೂರು ಅವರು ಮಾತನಾಡಿ ಕರಸೇವೆಯ ಮೂಲಕವೂ ದೇವಸ್ಥಾನ ಕಟ್ಟಲು ಸಾಧ್ಯ ಎಂದು ತೋರಿಸಿಕೊಟ್ಟ ಹರೀಶ್ ಪೈ ಅವರು ಕೇವಲ ಕರಸೇವೆ ಮಾತ್ರವಲ್ಲ ಕೊರೋನಾ ಸಂದರ್ಭದಲ್ಲಿ ಕಿಟ್ ತಯಾರು ಮಾಡುವ ಕೆಲಸದಲ್ಲಿ ತಮ್ಮ ತಂಡದೊಂದಿಗೆ ಪ್ರಮುಖ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಹರೀಶ್ ಪೈ ಒಡನಾಡಿ ವೇಣುಗೋಪಾಲ ಉಪಸ್ಥಿತರಿದ್ದರು. ಸಭೆಯಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಮತ್ತು ಹರೀಶ್ ಪೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ನಿತ್ಯ ಕರಸೇವರು, ದೇವಳದ ನೌಕರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.