ಇಡ್ಕಿದು ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ಸೇನಾನಿಗಳ ನೇಮಕ | ಸೂಚನೆ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲು ನಿರ್ಣಯ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಗ್ರಾಮ ಪಂಚಾಯತ್‌ಗಳ ಆಡಳಿತಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದು, ಇಡ್ಕಿದು ಗ್ರಾಮ ಪಂಚಾಯತ್ ಮಟ್ಟದ ಕಾರ್ಯಪಡೆಯನ್ನು ಪುನರ್ ರಚಿಸುವ ಹಿನ್ನೆಲೆಯಲ್ಲಿ, ಆಡಳಿತಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಪರಿಷ್ಕ್ರತ ಕಾರ್ಯಪಡೆಯ ಸಭೆಯನ್ನು ಇಡ್ಕಿದು ಗ್ರಾ.ಪಂ. ಸಭಾಭವನದಲ್ಲಿ ನಡೆಸಲಾಯಿತು.

ಕೋವಿಡ್ ಲಕ್ಷಣಗಳ ಬಗ್ಗೆ ಕಿರಿಯ ಆರೂಗ್ಯ ಸಹಾಯಕಿ ಕವಿತಾರವರು ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅವರೆಲ್ಲರೂ ಚಿಕಿತ್ಸೆ ಪಡೆದು ಮನೆಯಲ್ಲಿ ನಿಗಾದಲ್ಲಿದ್ದಾರೆ. ಗ್ರಾಮದಲ್ಲಿ ಮತ್ತಷ್ಟು ಪ್ರಕರಣಗಳು ಮರುಕಳಿಸದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಳ್ಳಲು ನಿರ್ಣಯಿಸಲಾಯಿತು. ಜಿಲ್ಲಾಡಳಿತದ ಆದೇಶದಂತೆ ಲಾಕ್‌ಡೌನ್ ನಿಯಮಗಳನ್ನು ಪಾಲನೆ ಮಾಡಲು ವರ್ತಕರುಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಅದನ್ನು ಉಲ್ಲಂಘನೆ ಮಾಡಿದಲ್ಲಿ ಪ್ರಕರಣವನ್ನು ದಾಖಲು ಮಾಡುವ ಬಗ್ಗೆ ನಿರ್ಣಯಿಸಲಾಯಿತು. ಲಾಕ್‌ಡೌನ್ ಅವಧಿಯಲ್ಲಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಕೊರೋನಾ ಸೇನಾನಿಗಳನ್ನು ನೇಮಿಸಲಾಯಿತು. ಮಿತ್ತೂರು ಭಾಗಕ್ಕೆ ಎಂ.ಸುಧೀರ್ ಕುಮಾರ್ ಶೆಟ್ಟಿ, ಈಶ್ವರ ಗೌಡ ಕುವೆತ್ತಿಲ, ರಮೇಶ ಭಟ್ ಮಿತ್ತೂರು, ಸೂರ್ಯ ಭಾಗಕ್ಕೆ ಪುರುಷೋತ್ತಮ ಕೋಲ್ಪೆ ಮತ್ತು ಸತೀಶ ಕೆಂರ್ದೆಲು, ಕೋಲ್ಪೆ-ಅಳಕೆಮಜಲು-ವಡ್ಯರ್ಪೆ ಭಾಗಕ್ಕೆ ಅಬ್ದುಲ್ ಲತೀಫ್, ಶಾಕೀರ್ ಮತ್ತು ಚಿದಾನಂದ ಪೆಲತ್ತಿಂಜ, ಅರ್ಕೆಚ್ಚಾರು ಪ್ರದೇಶಕ್ಕೆ ಹಿಮಾಕರ ಗಾಣಿಗ, ಉರಿಮಜಲು ಭಾಗಕ್ಕೆ ರಮೇಶ ಆಳ್ವ, ಕುಂಡಡ್ಕ ಭಾಗಕ್ಕೆ ಪ್ರಶಾಂತ ಶೆಟ್ಟಿ ಬರೆ, ಸುಂದರ ಗೌಡ ಪಾಂಡೇಲು , ಕಾರ್ಯಾಡಿ ಭಾಗಕ್ಕೆ ಜಯರಾಮ ಕಾರ್ಯಾಡಿ , ಕಲ್ಲಂದಡ್ಕ ಭಾಗಕ್ಕೆ ಕೃಷ್ಣಪ್ಪ ಗೌಡ ಅಡ್ಯಾಲು, ಹಾರೀಸ್ ನೀರಪಳಿಕೆ, ರಾಮ್ ಭಟ್ ನೀರಪಳಿಕೆಯವರನ್ನು ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೋಕುಲ್ ದಾಸ್ ಭಕ್ತರವರು ಸ್ವಾಗತಿಸಿ, ವಂದಿಸಿದರು.

 

ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿ… ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ನಮ್ಮ ಗ್ರಾಮದಲ್ಲಿಯೂ ಕೊರೋನಾ ಸೋಂಕು ಪತ್ತೆಯಾಗಿದ್ದು, ಅವರೆಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೂ ನಾವೆಲ್ಲರೂ ಅತೀ ಜಾಗರೂಕತೆಯಿಂದ ಇರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಮಸ್ಥರು ಅನಗತ್ಯವಾಗಿ ವಾಹನಗಳಲ್ಲಿ ಸಂಚಾರ ಮಾಡುವುದು, ಅಂಗಡಿ ಮುಂಭಾಗದಲ್ಲಿ ಕುಳಿತುಕೊಳ್ಳುವುದು ಮಾಡಬೇಡಿ ಅತೀ ಅಗತ್ಯವಿದ್ದರೆ ಮಾತ್ರ ಮನೆಗಳಿಂದ ಹೊರಗೆ ಬನ್ನಿ. ಜಿಲ್ಲಾಧಿಕಾರಿಗಳು ನೀಡಿರುವ ಸೂಚನೆಗಳನ್ನು ಉಲ್ಲಂಸಬೇಡಿ. ಒಂದು ವೇಳೆ ಉಲ್ಲಂಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ನಿಮ್ಮ ಆರೋಗ್ಯ ರಕ್ಷಣೆಯನ್ನೂ ನೀವುಗಳೇ ಮಾಡಿಕೊಂಡು ಸುರಕ್ಷಿತವಾಗಿರಿ. – ಗೋಕುಲ್ ದಾಸ್ ಭಕ್ತ ಅಭಿವೃದ್ಧಿ ಅಧಿಕಾರಿ, ಇಡ್ಕಿದು ಗ್ರಾಮ ಪಂಚಾಯತ್

 

 

ಕ್ರ.ಸಂ ಸೇನಾನಿಗಳ ಹೆಸರು ದೂರವಾಣಿ ಸಂಖ್ಯೆ
೧. ಗೋಕುಲ್ ದಾಸ್ ಭಕ್ತ 9480862283
೨. ಎಂ.ಸುಧೀರ್ ಕುಮಾರ್ ಶೆಟ್ಟಿ 9743826536
೩. ಈಶ್ವರ ಗೌಡ ಕುವೆತ್ತಿಲ 9980340759
೪. ರಮೇಶ ಭಟ್ ಮಿತ್ತೂರು 9448300871
೫. ಪುರುಷೋತ್ತಮ ಕೋಲ್ಪೆ 9480160270
೬. ಸತೀಶ ಕೆಂರ್ದೆಲು 9663103309
೭. ಅಬ್ದುಲ್ ಲತೀಫ್ 9448858526
೮. ಶಾಕೀರ್ 9980205212
೯. ಚಿದಾನಂದ ಪೆಲತ್ತಿಂಜ 9449903639
೧೦. ಹಿಮಾಕರ ಗಾಣಿಗ 9900943443
೧೧. ರಮೇಶ ಆಳ್ವ, 9481767444
೧೨. ಪ್ರಶಾಂತ ಶೆಟ್ಟಿ ಬರೆ, 9901877693
೧೩. ಸುಂದರ ಗೌಡ ಪಾಂಡೇಲು 9449452173
೧೪. ಜಯರಾಮ ಕಾರ್ಯಾಡಿ 7259388694
೧೫. ಕೃಷ್ಣಪ್ಪ ಗೌಡ ಅಡ್ಯಾಲು 9880943660
೧೬. ಹಾರೀಸ್ ನೀರಪಳಿಕೆ 9980980183
೧೭. ರಾಮ್ ಭಟ್ ಭಟ್ ನೀರಪಳಿಕೆ 9483919419

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.