ಕೌಕ್ರಾಡಿ: ಮಳೆಗೆ ಮನೆ ಕುಸಿತ, ಮನೆಯವರು ಅಪಾಯದಿಂದ ಪಾರು

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಕೌಕ್ರಾಡಿ ಗ್ರಾಮದ ಪಟ್ಲಡ್ಕ ಎಂಬಲ್ಲಿ ವೃದ್ಧರೋರ್ವರ ಮನೆಯ ಮಾಡು ಕುಸಿತಗೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಮನೆಯವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಪಟ್ಲಡ್ಕ ನಿವಾಸಿ ಶಂಕರ ಪೂಜಾರಿ(೭೫ವ.)ಎಂಬವರ ಮನೆಯ ಮಾಡು ಭಾರೀ ಮಳೆಗೆ ಕುಸಿತಗೊಂಡಿದೆ. ಮಣ್ಣಿನ ಗೋಡೆಯ ಹಾಗೂ ಬಿದಿರಿನಿಂದ ಕೂಡಿದ ಹಂಚಿನ ಮನೆ ಇದಾಗಿದ್ದು ಭಾರೀ ಮಳೆಯಿಂದಾಗಿ ಮನೆಯ ಮಾಡಿನ ಹಿಂಬದಿ ಭಾಗ ಕುಸಿತಗೊಂಡಿದೆ. ಘಟನೆಯ ವೇಳೆ ಮನೆಯವರೆಲ್ಲರೂ ಮನೆಯ ಮುಂಭಾಗದಲ್ಲಿದ್ದು ಅಪಾಯದಿಂದ ಪಾರಾಗಿದ್ದಾರೆ. ಶಂಕರ ಪೂಜಾರಿಯವರು ತೀರಾ ಬಡವರಾಗಿದ್ದು ವಿಧವೆ ಪುತ್ರಿ ಹಾಗೂ ಅವರ ಮಕ್ಕಳೊಂದಿಗೆ ಈ ಹಳೆಯ ಮನೆಯಲ್ಲಿಯೇ ವಾಸವಾಗಿದ್ದಾರೆ. ಕುಸಿತಗೊಂಡ ಮನೆಗೆ ಟರ್ಪಾಲು ಹಾಕಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಘಟನಾ ಸ್ಥಳಕ್ಕೆ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಕೌಕ್ರಾಡಿ ಗ್ರಾ.ಪಂ. ಮಾಜಿ ಸದಸ್ಯ ಮಹೇಶ್, ಕೌಕ್ರಾಡಿ ಗ್ರಾಮಕರಣಿಕ ಮಹೇಶ್, ಗ್ರಾಮ ಸಹಾಯಕ ಕಿರಣ್‌ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.