Breaking News

ಆಲಂಕಾರು, ಕುಂತೂರು, ರಾಮಕುಂಜ, ಕೊಯಿಲ, ಕೆಮ್ಮಾರ ಸಂಪೂರ್ಣ ಸ್ತಬ್ದ | ಪೊಲೀಸರಿಂದ ಬಿಗಿ ಬಂದೋಬಸ್ತ್

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಕೋರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಮೆಡಿಕಲ್ ಹೊರತು ಪಡಿಸಿ ಆಲಂಕಾರು, ಕುಂತೂರು, ರಾಮಕುಂಜ, ಕೊಯಿಲ, ಕೆಮ್ಮಾರ ಸಂಪೂರ್ಣ ಸ್ತಬ್ದಗೊಂಡಿದೆ.

ಬೆಳಿಗ್ಗೆಯಿಂದಲ್ಲೇ ಪೇಟೆಯಲ್ಲಿ ಜನ ವಿರಳವಾಗಿದ್ದು ಆಲಂಕಾರು ಪೇಟೆಯಲ್ಲಿ ಹಾಗೂ ರಾಮಕುಂಜದಲ್ಲಿ ಬೆಳಿಗ್ಗೆಯಿಂದಲೇ ಕಡಬ ಪೋಲಿಸರು ಬ್ಯಾರಿಕೇಡ್ ಅಳವಡಿಸಿ ಬಂದೊ ಬಸ್ತ್ ಮಾಡಿದರು. ಅಗತ್ಯ ವಾಹನಗಳು ಓಡಾಟ ನಡೆಸುತ್ತಿತ್ತು. ಬೆಳಿಗ್ಗೆ ದಿನಸಿ, ತರಕಾರಿ, ಮಾಂಸದ ಅಂಗಡಿಗಳು ಬೆಳಿಗ್ಗೆ 11 ಗಂಟೆಯವರೆಗೆ ತೆರೆದಿದ್ದರು.

ಪೇಟೆಯಲ್ಲಿ ಜನ ವಿರಳ ವಾಗಿ ಜನತಾ ಕಪ್ಯೂ೯ನಂತೆ ಕಾಣುತ್ತಿತ್ತು. ಒಂದು ಕಡೆ ಕೊರೋನಾ ಮಹಾಮಾರಿಗೆ ಸರಕಾರ ದಿಟ್ಟ ಕ್ರಮ ಕೈಗೊಂಡು ಲಾಕ್ ಡೌನ್ ಮಾಡಿದರೆ ಇದಕ್ಕೆ ಸಾಥ್ ಆಗಿ ಮಳೆಯು ಬೆಂಬಿಡದೆ ಸುರಿಯುತ್ತಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.