ಶಾಂತಿಗೋಡಿನ ಸೋಂಕಿತೆಯ ಬಡ ಕುಟುಂಬಕ್ಕೆ ಆಸರೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊವೀಡ್-19ನಿಂದಾಗಿ ಸಾಕಷ್ಟು ಮಂದಿಯ ಜೀವನವೇ ತತ್ತರಿಸಿ ಹೋಗಿದೆ. ಸೋಂಕು ತಗಲಿದ ಕುಟುಂಬಗಳ ಕಣ್ಣೀರನ್ನು ಒರೆಸುವ ಕಾರ್ಯಕ್ಕೆ ಜಿಲ್ಲೆಯ ಸಾಮಾಜಿಕ ಮುಖಂಡರು ಹೆಜ್ಜೆಯಿಟ್ಟಿದ್ದಾರೆ. ಇಂತಹ ಒಂದು ಸನ್ನೀವೇಶ ತಾಲೂಕಿನಲ್ಲೂ ಸಾಕ್ಷಿಯಾಗಿದೆ.

ಶಾಂತಿಗೋಡು ನಿವಾಸಿಯೊರ್ವರಿಗೆ ಜು.1ರಂದು ಸೋಂಕು ದೃಢಪಟ್ಟಿತ್ತು, ಇವರು ತಾಲೂಕು ಸರಕಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಂಕಿತ ಬಡ ಮಹಿಳೆಯ ಪುತ್ರಿ ಉಷಾರವರು ಖಾಸಗಿ ಸುದ್ದಿ ವಾಹಿನಿ ಪಬ್ಲಿಕ್ ಟಿವಿಯ ಮನೆ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿ, ನನ್ನ ತಾಯಿಗೆ ಕರ್ತವ್ಯದಲ್ಲಿದ್ದಾಗ ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಪಡೆದು ಹೋಂ ಕ್ವಾರೆಂಟೈನ್‌ನಲ್ಲಿದ್ದರು. ಎರಡು ತಿಂಗಳಿಂದ ವೇತನವಾಗಿರಲಿಲ್ಲ, ತಂದೆಗೂ ಉದ್ಯೋಗವಿಲ್ಲದೇ ಜೀವನದ ನಿರ್ವಹಣೆಗೆ ಸಂಕಷ್ಟ ಎದುರಿಸಬೇಕಾಗಿದೆ ಅಲ್ಲದೇ ಕೊರೋನಾ ಭೀತಿಯಿಂದಾಗಿ ಸ್ಥಳೀಯರು ಹತ್ತಿರ ಯಾರು ಬರುತ್ತಿಲ್ಲ ಎಂದು ತನ್ನ ಆಳಲನ್ನು ತೊಡಿಕೊಂಡಿದ್ದರು. ಇದೀಗ ಕಡಬದ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಕೊಡಾಜೆಯವರು ತೀರ ಬಡತನದಲ್ಲಿರುವ ಕುಟುಂಬದ ಮನೆಗೆ ತೆರಳಿ ಅಗತ್ಯ ದಿನಸಿ ತಿಂಗಳಿಗಾಗುವಷ್ಟು ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯವನ್ನು ತುಂಬಿದ್ದಾರೆ. ಅಲ್ಲದೆ ಖಾಸಗಿ ವಾಹಿನಿ ಪಬ್ಲಿಕ್ ಟಿವಿ ಪ್ರತಿನಿಧಿಯೊರ್ವರು ಮಧ್ಯ ಪ್ರವೇಶದಿಂದ ಅಡುಗೆ ಗುತ್ತಿಗೆದಾರರು ಒಂದು ತಿಂಗಳ ವೇತನ ನೀಡಿದ್ದು, ಬಾಕಿ ಹಣವನ್ನು ಶೀಘ್ರವೇ ನೀಡುವುದಾಗಿ ಭರವಸೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.