Breaking News

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: 2019-20ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಶೇ. 96 ಫಲಿತಾಂಶ ಬಂದಿದ್ದು ವಿಜ್ಞಾನ , ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಅತ್ಯಧಿಕ ಅಂಕಗಳೊಂದಿಗೆ ಉತ್ತಮ ಫಲಿತಾಂಶ ಬರಲು ಸಹಕಾರಿಯಾದ ವಿದ್ಯಾರ್ಥಿಗಳ ಮನೆಗೆ ತೆರಳಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ಆರನೇ ರ‍್ಯಾಂಕ್ ಮತ್ತು ತಾಲೂಕಿಗೆ ಹಾಗೂ ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ ವಿಜಿತ್ ಕೃಷ್ಣ ,ಏಳನೇ ರ‍್ಯಾಂಕ್ ಮತ್ತು ಕಾಲೇಜಿನಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ ಅಂಕಿತಾ ಸಿ, ಎಂಟನೇ ರ‍್ಯಾಂಕ್ ಗಳಿಸಿದ ಅಕ್ಷಯ್ ಪಾಂಗಳ್, ಒಂಭತ್ತನೇ ರ‍್ಯಾಂಕ್ ಗಳಿಸಿದ ನಿಶಾ, ಹತ್ತನೇ ರ‍್ಯಾಂಕ್ ಗಳಿಸಿದ ಅಂಕಿತಾ ಕೆ,ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿ ಎಂಟನೇ ರ‍್ಯಾಂಕ್ ಹಾಗೂ ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ ವರಲಕ್ಷ್ಮಿ ಪಿ ಎಸ್, ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಗಳಿಸಿದ ಸಹನ ಎ ಸಿ, ತೃತೀಯ ಸ್ಥಾನ ಪಡೆದ ಶ್ರೀ ವಿದ್ಯಾ ಮತ್ತು ಗ್ರೀಷ್ಮಾ, ಕಲಾ ವಿಭಾಗದಲ್ಲಿ ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಗಳಿಸಿದ ನಯನಾ, ತೃತೀಯ ಸ್ಥಾನ ಪಡೆದ ಶ್ರೀಜನಿ ಮತ್ತು ಸುಶ್ಮಿತಾ ಇವರ ಮನೆಗೆ ತೆರಳಿ ಶಾಲು ಹೊದಿಸಿ, ಪುಸ್ತಕ ಮತ್ತು ಸಿಹಿನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯ ಅಚ್ಯುತ್ ನಾಯಕ್, ಸಚಿನ್ ಶೆಣೈ, ವಿವೇಕಾನಂದ ವಿದ್ಯಾವರ್ಧಕ ಶಾಲೆಗಳ ಪರಿವೀಕ್ಷಕ ವೆಂಕಟ್ರಮಣ ರಾವ್ ಮಂಕುಡೆ, ಕನ್ಯಾನ ಭಾರತ ಸೇವಾಶ್ರಮದ ಅಧ್ಯಕ್ಷ ಈಶ್ವರ್ ಭಟ್, ನೇರಳಕಟ್ಟೆ ಸಿ ಎ ಬ್ಯಾಂಕ್ ಉಪಾಧ್ಯಕ್ಷ ತನಿಯಪ್ಪ ಗೌಡ, ಸಾಮಾಜಿಕ ಮುಂದಾಳುಗಳಾದ ಚೆನ್ನಪ್ಪ ಗೌಡ, ಪ್ರಮೋದ್, ಮನೋಜ್, ಅಶೋಕ್ ರೈ ,ನಲಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ರಾಜಶೇಖರ ಪೆರ್ಲ, ಕೇಶವ ಶರ್ಮ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ,ಉಪನ್ಯಾಸಕರಾದ ಪಿ.ಕೆ ಪರಮೇಶ್ವರ ಶರ್ಮಾ, ಹರೀಶ್ ಶಾಸ್ತ್ರಿ, ದೇವಿಚರಣ್ ರೈ, ಶ್ರೀಪತಿ, ಭೀಮ ಭಾರದ್ವಾಜ್, ಅಜಯ್ ಶಾಸ್ತ್ರಿ, ವಿದ್ಯಾರ್ಥಿಗಳ ಹೆತ್ತವರು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.