ಎರಡನೇ ದಿನದ  ಲಾಕ್ ಡೌನ್ ಗೂ ಅಜ್ಜಿನಡ್ಕ ಪರಿಸರದಲ್ಲಿ ಉತ್ತಮ ಪ್ರತಿಕ್ರಿಯೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೋನಾ ಸೋಂಕಿನ ಪ್ರಕರಣ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲೆಯಲ್ಲಿ ಜು. 16 ರಿಂದ ಜಾರಿಗೊಂಡಿರುವ ಲಾಕ್ ಡೌನ್ ಗೆ ಪುಣಚ ಗ್ರಾಮದ  ಅಜ್ಜಿನಡ್ಕ‌ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಿಗ್ಗಿಯಿಂದಲೇ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಆಗಮಿಸುತ್ತಿದ್ದು ಕಂಡು ಬರುತ್ತಿತ್ತು. 11 ಗಂಟೆಯ ಬಳಿಕ ಪರಿಸರದ ಎಲ್ಲಾ ‌ಅಗತ್ಯವಸ್ತುಗಳ ಅಂಗಡಿಗಳನ್ನು ಬಂದ್ ಮಾಡಲಾಯಿತು.

ವಿಟ್ಲ ಪೊಲೀಸ್ ಠಾಣೆಯ ಪುಣಚ ವ್ಯಾಪ್ತಿಯ ಬೀಟ್ ಪೊಲೀಸ್  ಹೇಮರಾಜ್ ಎಚ್.ಪಿ ರವರು ಗ್ರಾಮದ ಪ್ರತಿ ವ್ಯಾಪ್ತಿಯಲ್ಲಿ ಸಂಚರಿಸಿಕೊಂಡು  ಖಡಕ್ ಆದೇಶ ನೀಡುವ ಮೂಲಕ ಗ್ರಾಮದ  ಪ್ರದೇಶದಲ್ಲಿ  ಅನಗತ್ಯ ಸುತ್ತಾಟ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕುತ್ತಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಸರಕಾರದ ಆದೇಶದ ಲಾಕ್ ಡೌನ್ ಗೆ ಅಜ್ಜಿನಡ್ಕ ಪ್ರದೇಶ ಸಂಪೂರ್ಣ ಸ್ಥಗಿತಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.