ಕಬಕ ಗ್ರಾಮ ಪಂಚಾಯತ್ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
  • ಸಾಂಕ್ರಾಮಿಕ ರೋಗ ತಡೆಯಲು ಮನೆ ಮನೆಗೆ ಜಾಗೃತಿ ಕರಪತ್ರ ವಿತರಣೆ-ಆಡಳಿತಾಧಿಕಾರಿ ತ್ರಿವೇಣಿ ರಾವ್

ಪುತ್ತೂರು:ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ತಡೆಯುವ ನಿಟ್ಟಿನಲ್ಲಿ ಕರಪತ್ರ ಮುದ್ರಿಸಿ ಮನೆ ಮನೆಗೆ ವಿತರಿಸಿ ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದು ಕಬಕ ಗ್ರಾ.ಪಂ ಕಾರ್ಯಪಡೆ ಸಭೆಯಲ್ಲಿ ಆಡಳಿತಾಧಿಕಾರಿ ತ್ರಿವೇಣಿ ರಾವ್ ಹೇಳಿದರು.

ಸಭೆಯು ಜು.17ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮದ ಜನರಿಗೆ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿಯ ಕೊರತೆಯಿದೆ. ಹೀಗಾಗಿ ಅವರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದಿಲ್ಲ. ಹಾಗಾಗಿ ರೋಗಗಳು ಹರಡುತ್ತಾ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಒಳಗೊಂಡಿರುವ ಕರಪತ್ರಗಳನ್ನು ಪ್ರತಿ ಮನೆಗಳಿಗೆ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸೆಕ್ಯೂರಿಟಿ ಕಿಟ್‌ ನೀಡಿ;
ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಅವರ ಆರೋಗ್ಯ ಸುರಕ್ಷಾ ದೃಷ್ಟಿಯಿಂದ ರಕ್ಷಣಾ ಕಿಟ್ ಗಳನ್ನು‌ ವಿತರಿಸುವಂತೆ ಜಯರಾಮ ನೆಕ್ಕರೆ ಆಗ್ರಹಿಸಿದರು. ಇಲಾಖೆಯಿಂದ ಕಿಟ್‌ ಗಳನ್ನು ವಿತರಿಸುವುದಿಲ್ಲ ಪಂಚಾಯತ್‌ ಮುಖಾಂತರ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿ ತ್ರಿವೇಣಿ ರಾವ್‌ ತಿಳಿಸಿದರು.

ವಾಟ್ಸಪ್ ಗ್ರೂಪ್;
ಪಂಚಾಯತ್ ನ ಕಾರ್ಯಪಡೆಯ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿಚಾರಗಳ‌ ವಿನಿಮಯಕ್ಕಾಗಿ‌ ಕಾರ್ಯಪಡೆ ಸದಸ್ಯರನ್ನೊಳಗೊಂಡ ವಾಟ್ಸಪ್‌ ಗ್ರೂಪ್ ರಚಿಸಲಾಗುವುದು. ಮಳೆಗಾಲವಾಗಿರುವುದರಿಂದ ಕಾರ್ಯ ಪಡೆಯ ಸದಸ್ಯರಿಗೆ ಸಭೆಗಳಿಗೆ ಹಾಜರಾಗಲು ಅಸಾಧ್ಯವಾದ ಸಂದರ್ಭದಲ್ಲಿ ವಾಟ್ಸಪ್‌ ಗ್ರೂಪ್ ಅನುಕೂಲವಾಗಲಿದೆ ಎಂದು ಆಡಳಿತಾಧಿಕಾರಿ ತ್ರಿವೇಣಿ ರಾವ್ ಹೇಳಿದರು.

ಪಿಡಿಓ ಆಶಾ ಮಾತನಾಡಿ, ನೂತನ ಕಾರ್ಯಪಡೆಯ ಸುತ್ತೋಲೆ ಹಾಗೂ ನೂತನ ಸಮಿತಿಯ ವಿವರಗಳನ್ನು ಸಭೆಗೆ‌ ತಿಳಿಸಿದರು. ತಾ.ಪಂ ಸದಸ್ಯೆ ದಿವ್ಯಾ ಪುರುಷೋತ್ತಮ, ಗ್ರಾಮಕರಣಿಕ ಗೋಪಿಲಾಲ್, ಗ್ರಾ.ಪಂ ಮಾಜಿ ಸದಸ್ಯರಾದ ವಿನಯ ಕುಮಾರ್, ವಸಂತ ನೆಕ್ರಾಜೆ, ಮನೋಹರ, ಸುರೇಶ್, ಶೋಭಾ, ಝೀನತ್ ಬಾನು, ರಾಜೇಶ್ವರಿ ಯನ್.ಯಸ್, ಅಮಿತಾ ಕೆ.ಆರ್, ಶೀಲಾವತಿ, ವಾಣಿ, ಗೀತಾ, ಚಂದ್ರಾವತಿ ಹಾಗೂ ಇಂದಿರಾ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೇಶ್, ಸ್ವಾಗತಿಸಿದರು. ಪಿಡಿಓ ಆಶಾ ವಂದಿಸಿದರು. ಸಿಬಂದಿಗಳು ಸಹಕರಿಸಿದರು.

About The Author

Related posts

2 Comments

  1. ಸುದರ್ಶನ್

    ಆಶಾ ಕಾರ್ಯಕರ್ತೆ ಯರಿಗೆ ಅರೋಗ್ಯ ಇಲಾಖೆಯಿಂದ ಸುರಕ್ಷಾ ಸಾಧನ ವಿತರಿಸಿರುತ್ತಾರೆ. ಜಯರಾಂ ನೆಕ್ಕರೆಯವರ ಬೇಡಿಕೆಯಂತೆ ಪಂಚಾಯತ್ ಕೊರೋನಾ ವಾರಿರ್ಸ್ ಗೆ ಸೇಪ್ಟಿ ಕಿಟ್ ನೀಡಿರುವುದಿಲ್ಲ.
    ಸೇಪ್ಟಿ ಕಿಟ್ ನಲ್ಲಿ ಏನಿರಬೇಕು ಮತ್ತು ಏನಿರುತ್ತದೆ. ವರದಿಗಾರ ಗೊಂದಲ ಸೃಷ್ಟಿಸಿದ್ದಾನೆ. ಹೆಚ್ಚಿನ ಸ್ಪಷ್ಟೀಕರಣ ಆಡಳಿತಾಧಿಕಾರಿಯಿಂದ ಪಡೆದು ವರದಿ ಪ್ರಕಟಿಸಬೇಕಿತ್ತು.

    Reply
  2. ಸುದರ್ಶನ್

    ಕಮೆಂಟ್ 1 ರ ಬಳಿಕ ವರದಿ ಸರಿಪಡಿಸಿರುವುದಕ್ಕೆ ಕೃತಜ್ಞತೆ ಗಳು. ಅರೋಗ್ಯ ಇಲಾಖೆ ಅಗತ್ಯವಿರುವ ಅರೋಗ್ಯ ಸುರಕ್ಷಾ ಸಾಧನಗಳನ್ನು ಆಶಾ+ಆರೊಗ್ಯ ಕಾರ್ಯ ಕರ್ತರಿಗೆ ಹಂಚಲಾಗಿತ್ತು. ಮೊದಲನೇ ವರದಿಯಲ್ಲಿ ಆರೋಗ್ಯ ಇಲಾಖೆ ಒದಗಿಸಿರುವುದಿಲ್ಲ ಎಂದು ಜಯರಾಂ ನೆಕ್ಕರೆ ಆಕ್ಷೇಪಿಸಿದ್ದಾರೆಂದು ಬರೆಯಲಾಗಿತ್ತು. ಜಯರಾಂ ನೆಕ್ಕರೆ ಈ ಹೇಳಿಕೆ ಹೇಳಿಯೇ ಇರಲಿಲ್ಲವಂತೆ. ಆಡಳಿತಾಧಿಕಾರಿ ಇದನ್ನು ಸ್ಪಷ್ಟ ಪಡಿಸಿದ ನಂತರ ಅವರ ಸ್ಪಷ್ಟೀಕರಣವನ್ನು ವರದಿ ಮಾಡಿರುವುದು ಸರಿಯಾದ ವಿಚಾರ. ವರದಿಗಾರರಿಗೆ ಕೃತಜ್ಞತೆ ಗಳು. ಸಾಮಾಜಿಕ ಕಳಕಲಿಯಿಂದ ಈ ಪ್ರತಿಕ್ರಿಯೆ ಪ್ರಕಟಿಸಲಾಗಿದೆ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.