ಕಾಣಿಯೂರು ಗ್ರಾಮ ಪಂಚಾಯತ್ ಕೋವಿಡ್ 19 ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

  • ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಅಗತ್ಯ
  • ಸಮಾರಂಭಗಳಿಗೆ ಗ್ರಾ.ಪಂ, ಅನುಮತಿ ಕಡ್ಡಾಯ
  • ಮೊಬೈಲ್ ನಂಬ್ರ, ವಿಳಾಸ ನೋಟ್ ಮಾಡಿಕೊಳ್ಳಿ

ಕಾಣಿಯೂರು: ಕಾಣಿಯೂರು ಗ್ರಾ.ಪಂ, ವತಿಯಿಂದ ರಚನೆಗೊಂಡಿರುವ ಕೋವಿಡ್ 19 ಕಾರ್ಯಪಡೆ ಸಭೆ ಜು.16ರಂದು ಕಾಣಿಯೂರು ಗ್ರಾ.ಪಂ, ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ,ಪಂ ಆಡಳಿತಾಧಿಕಾರಿ ಗುರುಮೂರ್ತಿ ಅವರು ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುವ ಮದುವೆ, ಇನ್ನಿತರ ಸಮಾರಂಭಗಳಿಗೆ ಗ್ರಾಮ ಪಂಚಾಯತ್‌ನಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು. ಸರಕಾರದ ನಿಯಮದಂತೆ ೫೦ಕ್ಕಿಂತ ಹೆಚ್ಚು ಜನ ಸೇರಬಾರದು. ಕೊರೋನಾ ವೈರಸ್ ವ್ಯಾಪಾಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಧರಿಸಿಕೊಂಡೇ ವ್ಯವಹಾರ ನಡೆಸಬೇಕು. ಈ ಬಗ್ಗೆ ಅಂಗಡಿ ಮಾಲಕರು ಗ್ರಾಹಕರಿಗೆ ಮಾಹಿತಿ ನೀಡಬೇಕು. ಹೊರ ಜಿಲ್ಲೆ, ಹೊರ ರಾಜ್ಯದಿಂದ ಬರುವವರನ್ನು ಗಮನಿಸಿ, ಅವರ ಬಗ್ಗೆ ನಿಗಾ ವಹಿಸಿಕೊಳ್ಳಬೇಕು ಎಂದರು. ಗ್ರಾ.ಪಂ, ಮಾಜಿ ಸದಸ್ಯ ಗಣೇಶ್ ಉದನಡ್ಕ ಮಾತನಾಡಿ, ಕಾಣಿಯೂರು ಪಕ್ಕದ ಕುದ್ಮಾರು ಎಂಬಲ್ಲಿ ಯುವಕನೊರ್ವರಿಗೆ ಕೊರೋನಾ ದೃಢ ಪಟ್ಟಿರುವ ಹಿನ್ನಲೆಯಲ್ಲಿ ಕಾಣಿಯೂರಿನ ಜನತೆ ಭಯಭೀತಿತರಾಗಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ, ಭವಿಷ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿಕೊಂಡು ವ್ಯವಹರಿಸುವುದು ಒಳ್ಳೆಯದು. ಅಲ್ಲದೇ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವವರ ಮಾಹಿತಿಯನ್ನು ಪಡೆದುಕೊಳ್ಳಬೇಕು. ಅವರ ಮೇಲೆ ಹೆಚ್ಚಿನ ನಿಗಾ ಅಗತ್ಯ ಎಂದರು.

ಮೊಬೈಲ್ ನಂಬ್ರ, ವಿಳಾಸ ನೋಟ್ ಮಾಡಿ-ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಜನರು ವ್ಯವಹಾರಕ್ಕಾಗಿ ಅಂಗಡಿಗಳಿಗೆ ಬರುತ್ತಿದ್ದು, ಈ ಸಂದರ್ಭದಲ್ಲಿ ತಮ್ಮ ತಮ್ಮ ಅಂಗಡಿಯವರು ಗ್ರಾಹಕರ ಮೊಬೈಲ್ ನಂಬ್ರ, ವಿಳಾಸವನ್ನು ನೋಟ್ ಮಾಡಿಕೊಳ್ಳುವುದು ಒಳ್ಳೆಯದು ಎಂದು ಕಾಣಿಯೂರಿನ ವಿನಾಯಕ ಮೆಡಿಕಲ್‌ನ ಮಾಲಕರಾದ ಶುಭಕಿರಣ ಆರ್ ನೋಂಡ ಅವರು ಅಭಿಪ್ರಾಯ ಪಟ್ಟರು.

ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಿದ್ಯಾ ಮಾಹಿತಿ ನೀಡಿದರು. ಕಾಣಿಯೂರು ಗ್ರಾಮ ಲೆಕ್ಕಾಧಿಕಾರಿ ಸತೀಶ್, ಗ್ರಾ.ಪಂ, ಮಾಜಿ ಸದಸ್ಯರಾದ ಗಣೇಶ್ ಉದನಡ್ಕ, ಸುರೇಶ ಓಡಬಾಯಿ, ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಪಾರ್ವತಿ, ಪರಮೇಶ್ವರ ಗೌಡ ಅನಿಲ, ಮಮತಾ ಲೋಕೇಶ್, ಶುಭಾಕಿರಣ ನೋಂಡ, ಪರಮೇಶ್ವರ ಗೌಡ ಇಡ್ಯಡ್ಕ, ಬಾಲಕೃಷ್ಣ ಕೆ.ಕಾಣಿಯೂರು, ಸತೀಶ್ ಮರಕ್ಕಡ, ನಿತಿನ್, ಸಲೀಂ ಬನಾರಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.