Breaking News

ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಸುಳ್ಯದ ಬೆಡಗಿಗೆ `ಮಿಸೆಸ್ ಕರ್ನಾಟಕ’ ಕಿರೀಟ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೈಸೂರಿನ ಆರ್‌ಆರ್ ಗ್ರೂಪ್ ನಡೆಸಿದ `ಮಿಸೆಸ್ ಕರ್ನಾಟಕ 2020′ ಸ್ಪರ್ಧೆಯಲ್ಲಿ ಸುಳ್ಯದ ಬೆಡಗಿ ಪುತ್ತೂರು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಪ್ರಸ್ತುತ ಸುಳ್ಯದ ಬ್ಯಾಂಕ್ ಆಫ್ ಬರೋಡಾ ಉದ್ಯೋಗಿಯಾಗಿರುವ ಸುಪ್ರೀತಾ ಕೆ.ಎಸ್. ರವರು `ಮಿಸೆಸ್ ಕರ್ನಾಟಕ 2020′ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ನಡೆದ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಕರ್ನಾಟಕದ ಸುಮಾರು 20 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಅವರೆಲ್ಲರನ್ನೂ ಹಿಂದಿಕ್ಕಿ ಇವರು ಪ್ರಶಸ್ತಿ ಗಳಿಸಿಕೊಂಡಿದ್ದಾರೆ.

ರಾಜೇಶ್ ಸಿದ್ದಮಲ್ಲಪ್ಪವಂಶ ಆಡಳಿತ ನಿರ್ದೇಶಕರಾಗಿರುವ ರಾಕಿಂಗ್ ರಾಥೂ (ಆರ್‌ಆರ್) ಗ್ರೂಪ್ ಪ್ರತೀ ವರ್ಷ ಇಂತಹ ಮಿಸ್ಟರ್ & ಮಿಸೆಸ್ ಕರ್ನಾಟಕ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಇತ್ತೀಚೆಗೆ ನಡೆದ ಎಡಿಷನ್ -3 ಯಲ್ಲಿ ಸುಪ್ರೀತಾ ರವರು ಮಿಸೆಸ್ ಕರ್ನಾಟಕ ಆಗಿ ಹೊರಹೊಮ್ಮಿದ್ದಾರೆ.

ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಪುತ್ತೂರಿನ ಕೇಪುಳು ಕೆ. ಸುರೇಶ್ ಮತ್ತು ಸವಿತಾ ಸುರೇಶ್ ದಂಪತಿ ಪುತ್ರಿಯಾಗಿರುವ ಸುಪ್ರೀತಾರವರು ಪತಿ ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಅಜಿತ್ ಬಿ.ಟಿ. ಮತ್ತು ಪುತ್ರ ಈಶಾನ್ ಜೊತೆ ಸುಳ್ಯ ದಕ್ಷಿಣ ಬೀರಮಂಗಲದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಈಕೆ ನಿವೃತ್ತ ಶಿಕ್ಷಕಿ ಸೂರ್ಯಕಲಾ ತ್ರಿವಿಕ್ರಮರ ಸೊಸೆಯಾಗಿದ್ದಾರೆ. ಉಡುಪಿಯಲ್ಲಿ ಜನಿಸಿದ ಇವರು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣವನ್ನು, ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗವನ್ನು, ಮತ್ತು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಬಿಬಿಎಂ ಪದವಿ ಪೂರೈಸಿದ್ದಾರೆ. ಚಿತ್ರಕಲೆ, ಸಂಗೀತ, ಯೋಗ, ಅಕ್ವೇರಿಯಂ, ಕ್ರಾಫ್ಟಿಂಗ್‌ನಲ್ಲಿ ಹವ್ಯಾಸ ಹೊಂದಿರುವ ಇವರು ಯಕ್ಷಗಾನದಲ್ಲಿಯೂ ಆಸಕ್ತಿ ಹೊಂದಿ ತರಬೇತಿ ಪಡೆಯುತ್ತಿದ್ದಾರೆ.

ಬಿಬಿಎಂನಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿ
ಕಲಿಕೆಯಲ್ಲಿಯೂ ಹೆಚ್ಚು ಆಸಕ್ತಿ ಹೊಂದಿದ್ದ ಇವರು 2008 ರಲ್ಲಿ ವಿವೇಕಾನಂದ ಕಾಲೇಜಿನಲ್ಲಿ ಬಿಬಿಎಂ ಪದವಿ ಮುಗಿಸಿ ಅಂತಿಮ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.