ಉಪ್ಪಿನಂಗಡಿ: ನದಿ ನೀರ ಮಟ್ಟ ಹೆಚ್ಚಳ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ :ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡ ನೀರಿನ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದ್ದು, ಶಂಭೂರು ಅಣೆಕಟ್ಟಿನ ಲೆಕ್ಕಾಚಾರದಂತೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ 26.5 ರ ಸಮೀಪ ದಾಖಲಾಗಿದೆ.

ಕಂದಾಯ ಇಲಾಖಾ ಮಾಪಕದಲ್ಲಿ ಉಪ್ಪಿನಂಗಡಿಯಲ್ಲಿ ಅಪಾಯದಮಟ್ಟ 26.5 ಮೀ ಎಂದಾಗಿದ್ದರೆ, ಶಂಭೂರು ಅಣೆಕಟ್ಟಿನ ನೆಲೆಯಲ್ಲಿ ಉಪ್ಪಿನಂಗಡಿ ದೇವಳದ ಬಳಿ ನದಿಯಲ್ಲಿ ಹಾಕಲಾದ ಮಾಪಕದಲ್ಲಿ ಅಪಾಯದ ಮಟ್ಟ 30 ಮೀ ಎಂದಾಗಿದೆ.

ಜು.18ರಂದು ನದಿಯಲ್ಲಿ ನೀರಿನಹರಿವು ಗಣನೀಯ ಹೆಚ್ಚಳವಾಗಿದ್ದು, ಇದೇ ರೀತಿಯಲ್ಲಿ ಮಳೆ ಸತತವಾಗಿ ಸುರಿದರೆ ನೆರೆ ಭೀತಿ ಸಹಜವಾಗಿ ಕಾಡಲಿದೆ.

ಸುರಕ್ಷತೆಗೆ ದೋಣಿ ಸನ್ನದ್ದವಾಗಿರಿಸಲಾಗಿದೆ
ಇತ್ತ ನೆರೆ ಭೀತಿಯ ಉಪ್ಪಿನಂಗಡಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವ ಸಲುವಾಗಿ ಜಿಲ್ಲಾಡಳಿತ ಒದಗಿಸಿದ್ದ ಯಾಂತ್ರೀಕೃತ ದೋಣಿಯನ್ನು ಕಾರ್ಯಾಚರಣೆಗೆ ಸನ್ನದ್ದಗೊಳಿಸುವ ಕಾರ್ಯ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ರವರ ಉಪಸ್ಥಿತಿಯಲ್ಲಿ ಶುಕ್ರವಾರದಂದು ನಡೆಯಿತು. ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಪ್ರಮುಖ್ ದಿನೇಶ್ ಬಿ ರವರು ದೋಣಿಯ ಸುಸ್ಥಿತಿಯನ್ನು ಚಾಲನೆಗೊಳಪಡಿಸಿ ದೃಢೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.