ಲಾಕ್‌ಡೌನ್ ವೇಳೆ ವಾಹನ ಸಂಚಾರ ನಿರಂತರ | ವಾಹನ ಸಂಚಾರಕ್ಕೆ ಕಡಿವಾಣವಿಲ್ಲವೇಕೆ: ಸಾರ್ವಜನಿಕರ ಪ್ರಶ್ನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಾಕ್‌ಡೌನ್ ವೇಳೆ ಯಾವುದೇ ತುರ್ತು ವಾಹನಗಳು ಹೊರತುಪಡಿಸಿ ಯಾವುದೇ ವಾಹನಗಳು ರಸ್ತೆಗೆ ಇಳಿಯಬಾರದು ಎಂಬ ನಿಯಮವನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದಾರೆ. ಲಾಕ್‌ಡೌನ್ ಯಶಸ್ವಿಯಾಗಲು ಕೇವಲ ಅಂಗಡಿ ಮಾತ್ರ ಮುಚ್ಚಿದರೆ ಸಾಲದು ವಾಹನಗಳ ಸಂಚಾರಕ್ಕೂ ಬ್ರೇಕ್ ಹಾಕಬೇಕಿತ್ತು. ಆದರೆ ಮಾಣಿ- ಮೈಸೂರು ರಾ. ಹೆದ್ದಾರಿಯಲ್ಲಿ ವಾಹನಗಳು ಎಂದಿನಂತೆ ಸಂಚರಿಸುತ್ತಲೇ ಇದೆ. ಬೆಳಿಗ್ಗೆ 11 ಗಂಟೆಯ ಬಳಿಕ ರಿಕ್ಷಾ ಮಾತ್ರ ರಸ್ತೆಯಲ್ಲಿ ಓಡುತ್ತಿಲ್ಲ ಉಳಿದಂತೆ ಎಲ್ಲಾ ವಾಹನಗಳು ಖಾಸಗಿ, ಟೂರಿಸ್ಟ್ ವಾಹನಗಳು ಓಡಾಡುತ್ತಲೇ ಇದೆ. ಲಾಕ್‌ಡೌನ್ ಆರಂಭವಾದ ಜುಲೈ 16ರಂದು ವಾಹನ ಸಂಚಾರ ಇರಲಿಲ್ಲ. ಎರಡನೇ ದಿನ ವಾಹನ ಸಂಚಾರ ಕನಿಷ್ಠ ಪ್ರಮಾಣದಲ್ಲಿತ್ತು ಆದರೆ ಮೂರನೇ ದಿನ ಶನಿವಾರ ವಾಹನಗಳು ಎಂದಿನಂತೆ ಸಂಚರಿಸುತ್ತಿರುವುದು ಸಾರ್ವಜನಿಕರನ್ನು ಆಕ್ರೋಶಿತರನ್ನಾಗಿಸಿದೆ.

ಸಾಂದರ್ಬಿಕ ಚಿತ್ರ

ಬ್ಯಾರಿಕೇಡ್ ಅಳವಡಿಕೆ ಇಲ್ಲ
ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ ಲಾಕ್‌ಡೌನ್ ವೇಳೆ ಹೈವೇಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸವಾರರರನ್ನು ನಿಯಂತ್ರಣ ಮಾಡುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಿತ್ತು. ಆದರೆ ಜುಲೈ ೧೬ ರಿಂದ ಆರಂಭಗೊಂಡ ಲಾಕ್‌ಡೌನ್ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬ ಆರೋಪಗಳೂ ಕೇಳಿ ಬರುತ್ತಿದೆ. ಕೇವಲ ಅಂಗಡಿ ಮಳಿಗೆಗಳು ಮಾತ್ರ ಬಾಗಿಲು ಮುಚ್ಚಿದ್ದು ಸಾರ್ವಜನಿಕರು ತಮ್ಮ ವಾಹನದಲ್ಲಿ ಎಗ್ಗಿಲ್ಲದೆ ಸುತ್ತಡುತ್ತಿದ್ದಾರೆ. ಪೊಲೀಸರಿಂದ ಯಾವುದೇ ತಪಾಸಣೆಯೂ ನಡೆಯದೇ ಇರುವುದೇ ಇದಕ್ಕೆಲ್ಲಾ ಕಾರಣ ಎಂಬ ಮಾತುಗಳೂ ಕೇಳಿ ಬಂದಿದೆ.
ಪೇಟೆಗಳಿಗೆ ಜನ ಬಾರದೇ ಇರಬಹುದು ಆದರೆ ಜನ ವಾಹನದಲ್ಲಿ ಸಂಚಾರ ಮಾಡುತ್ತಿದ್ದರೆ ಲಾಕ್‌ಡೌನ್ ಪರಿಣಾಮಕಾರಿಯಾಗಲು ಸಾಧ್ಯವೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ.

ಖಡಕ್ ಆದೇಶ ಠುಸ್..!
ಲಾಕ್‌ಡೌನ್ ಮುನ್ನಾದಿನ ಪುತ್ತೂರಿನ ಅಧಿಕಾರಿಗಳಿಗೆ ಶಾಸಕರು ಖಡಕ್ ಸೂಚನೆಯನ್ನು ನೀಡಿ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಲಾಕ್‌ಡೌನ್ ಯಶಸ್ವಿಯಾಗಬೇಕೆಂದು ಅಧಿಕಾರಿ ವರ್ಗಕ್ಕೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಶಾಸಕರ ಎಚ್ಚರಿಕೆ ಈ ಬಾರಿ ಫಲಪ್ರದವಾಗಿಲ್ಲ ಎಂಬುದು ಮೋಲ್ನೋಟಕ್ಕೆ ಸಾಬೀತಾಗಿದೆ. ಅನಗತ್ಯವಾಗಿ ತಿರುಗಾಡುವ ವಾಹನಗಳಿಗೆ ಬ್ರೇಕ್ ಹಾಕದೇ ಇದ್ದಲ್ಲಿ ಲಾಕ್‌ಡೌನ್ ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಯಾಕೆ ಹೀಗಾಯ್ತು ಎಂಬ ಸಾರ್ವಜನಿಕರ ಪ್ರಶ್ನೆಗೆ ಸಂಬಂಧಿಸಿದ ಅಧಿಕಾರಿಗಳೇ ಉತ್ತರಿಸಬೇಕಿದೆ.

ಮನೆಯಲ್ಲಿರುವುದು ರಿಕ್ಷಾ ಚಾಲಕರು ಮಾತ್ರ
ಲಾಕ್‌ಡೌನ್ ನಿಂದ ರಿಕ್ಷಾ ಚಾಲಕರು ರಸ್ತೆಗೆ ಇಳಿಯುತ್ತಿಲ್ಲ. ರಿಕ್ಷಾ ಚಾಲಕರು ಮಾತ್ರ ಲಾಕ್‌ಡೌನ್ ವೇಳೆ ಯಾವುದೇ ಬಾಡಿಗೆಯನ್ನು ಮಾಡದೆ ಮನೆಯಲ್ಲೇ ಕಾಲಕಳೆಯುತ್ತಿದ್ದಾರೆ. ಉಳಿದ ಎಲ್ಲಾ ವಾಹನಗಳು ಅನಗತ್ಯವಾಗಿ ರಸ್ತೆಯಲ್ಲಿ ಸಂಚಾರವನ್ನು ಮಾಡುತ್ತಿರುವುದು ಬಡ ರಿಕ್ಷಾ ಚಾಲಕರನ್ನು ಕೆರಳುವಂತೆ ಮಾಡಿದೆ.

About The Author

Related posts

1 Comment

  1. ಸುದರ್ಶನ್

    ಲಾಕ್ ಡೌನ್ ವೇಳೆ ಅಗತ್ಯ ವಸ್ತು ಖರೀದಿ ಗೆ ಮುಂಜಾನೆ ಒಂದು ಗಂಟೆಗಿಂತ ಹೆಚ್ಚು ಸಮಯ ನೀಡಬಾರದು ಎಂದು ಸಲಹೆ ಮಾಡಿದ್ದರೂ ಜನಪ್ರತಿನಿಧಿಗಳು,ಜಿಲ್ಲಾಧಿಕಾರಿಗಳು ಬೆಳಿಗ್ಗೆ 11ರ ತನಕ ಜನರಿಗೆ ರಜಾತಿತ್ಯ ನೀಡಿದ್ದೇ ಈ ಎಡವಟ್ಟಿಗೆ ಕಾರಣ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.