ಕೊಯಿಲ-ಕೊನೆಮಜಲು ಯುವಕನಿಗೆ ಕೋವಿಡ್-19

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊಯಿಲ ಗ್ರಾಮದ ಕೊನೆಮಜಲು ನಿವಾಸಿ ಯುವಕನೋರ್ವನಿಗೆ ಕೋವಿಡ್-19 ದೃಢಪಟ್ಟಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

23 ವರ್ಷ ಪ್ರಾಯದ ಯುವಕ ಮಾರ್ಚ್ 31ರ ತನಕ ರಾಮಕುಂಜ ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ಇರುವ ಬ್ಯಾಂಕ್‌ನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ  ಮಾಡುತ್ತಿದ್ದರೆನ್ನಲಾಗಿದೆ. ತದ ನಂತರ ತನ್ನ ಸಂಬಂಧಿಯೊಂದಿಗೆ ಪೂಜೆ ಕೆಲಸಗಳಿಗೆ ಹೋಗುತ್ತಿದ್ದು, 3 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ಉಪ್ಪಿನಂಗಡಿ ಖಾಸಗಿ ಆಸ್ಪತ್ರೆಗೆ ಹೋಗಿದ್ದು, ಅವರ ಸೂಚನೆಯಂತೆ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಪೊಸಿಟಿವ್ ವರದಿ ಬಂದಿರುತ್ತದೆ.

ಮನೆ ಸೀಲ್‌ಡೌನ್:
ಕೊನೆಮಜಲುನಲ್ಲಿರುವ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಮತ್ತು ಆರೋಗ್ಯ ಸಹಾಯಕಿ, ಆಶಾ ಕಾರ್‍ಯಕರ್ತೆ ಮನೆಗೆ ಭೇಟಿ ನೀಡಿ ಮುಂಜಾಗ್ರತೆ ಮಾಹಿತಿ ಸೀಲ್‌ಡೌನ್ ಪ್ರಕ್ರಿಯೆ ನಡೆಸಿದರು.
 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.