ಆಲಂಕಾರಿನ ಎಂಡೋ ಸಂತ್ರಸ್ತೆ ರೇವತಿ ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದು ತೇರ್ಗಡೆ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಆಲಂಕಾರು ಗ್ರಾಮದ ಬರೆಪುದೆಲು ನಿವಾಸಿ ಬಾಬು ಮತ್ತು ಲೀಲಾ ದಂಪತಿಯ ಪುತ್ರಿಯಾಗಿರುವ ರೇವತಿಯವರು ತನ್ನ ತೀವ್ರ ತರದ ದೈಹಿಕ ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಖಾಸಗಿಯಾಗಿ ಪರೀಕ್ಷೆ ಬರೆದು ಪಿ.ಯು.ಸಿ ಕಲಾ ವಿಭಾಗದಲ್ಲಿ 319 ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ.

ಸರಕಾರದಿಂದ ನಡಸಲ್ಪಡುವ ಕೊಯಿಲ ಎಂಡೋ ಪಾಲನಾ ಕೇಂದ್ರದ ನಿರ್ವಹಣೆಯನ್ನು ಸಿಯೋನ್ ಆಶ್ರಮದವರು ಮಾಡುತ್ತಿದ್ದಾರೆ. ಈಕೆಗೆ ಪಾಲನಾ ಕೇಂದ್ರದ ಸಿಬ್ಬಂದಿಯಾದ ಶೈಲೇಶ್ ಹಾಗೂ ಶಿಕ್ಷಕಿ ನಮಿತಾರವರು ಮಾರ್ಗದರ್ಶನ ನೀಡಿರುತ್ತಾರೆ. ಕೈಗಳ ಸ್ವಾಧೀನತೆ ಇಲ್ಲದ ಇವರು ಬೇರೊಬ್ಬರ ಸಹಾಯದಿಂದ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖಾಸಗಿ ಯಾಗಿ ಪರೀಕ್ಷೆ ಬರೆದಿರುತ್ತಾರೆ. ಇವರ ಈ ಸಾಧನೆ ಇತರರಿಗೆ ಮಾದರಿಯಾಗಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.