Breaking News

ಕಡಬ ಎಸ್.ಐ.ಸಿಬ್ಬಂದಿಗಳ ಪರೀಕ್ಷಾ ವರದಿ ನೆಗೆಟಿವ್ | ಕ್ವಾರಂಟೈನ್ ಮುಗಿಸಿ ಬೆಳ್ಳಂ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದ ಕಡಬ ಎಸ್.ಐ ರುಕ್ಮ ನಾಯ್ಕ್

Puttur_Advt_NewsUnder_1
Puttur_Advt_NewsUnder_1

ಕಡಬ: ಕಳೆದರಡು ದಿನಗಳ ಹಿಂದೆ ಕಡಬದ ಗೃಹರಕ್ಷಕ ದಳದ ಸಿಬ್ಬಂದಿ ಸಬ್ ಇನ್ಸ್ ಪೆಕ್ಟರ್ ರ ವಾಹನದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರಿಗೆ ಕೊರೋನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಕಡಬ ಎಸ್.ಐ ಸೇರಿದಂತೆ ಸಿಬ್ಬಂದಿಗಳ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು ,ಪರೀಕ್ಷಾ ವರದಿ ಬಂದಿದ್ದು ಬಹುತೇಕ ಎಲ್ಲರ ವರದಿ ನೆಗೆಟಿವ್ ಬಂದಿದೆ.ಈ ಹಿನ್ನೆಲೆಯಲ್ಲಿ ಎಸ್.ಐ.ರುಕ್ಮ ನಾಯ್ಕ್ ಕರ್ತವ್ಯಕ್ಕೆ ಹಾಜರಾಗಿದ್ದು ಸಂಡೆ ಸಂಪೂರ್ಣ ಲಾಕ್ ಡೌನ್ ಆಗಿರುವ ಕಾರಣ ರಸ್ತೆಯಲ್ಲಿ ವಾಹನ ತಪಾಸಣೆ ಯಲ್ಲಿ ತೊಡಗಿದ್ದಾರೆ.

 

ಜು.18ರಂದು ಎಸ್.ಐ ಯವರು ಕ್ವಾರಂಟೈನ್ ನಲ್ಲಿದ್ದ ಕಾರಣ ಕಡಬದಲ್ಲಿ ಹನ್ನೊಂದು ಗಂಟೆ ಕಳೆದರೂ ಜನ ಸಂಚಾರ ಮಾತ್ರ ನಿಂತಿರಲಿಲ್ಲ. ಇಂದು ಕಾನೂನು ಮೀರುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.ದಿನದ 24 ಸದಾ ಜಾಗೃತಿ ಯಲ್ಲಿರಬೇಕಾದ ಪೊಲೀಸ್ ಅಧಿಕಾರಿಗಳಿಗೆ ಕೊರೋನಾ ಸೋಂಕು ತಗುಲುವುದು ಆತಂಕದ ಬೆಳವಣಿಗೆಯಾಗಿದೆ, ಇದೀಗ ಕಡಬ ಪೊಲೀಸರ ವರದಿ ನೆಗೆಟಿವ್ ಬಂದಿರುವುದು ಎಲ್ಲರಿಗೂ ಸಮಾಧಾನ ತಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.