Breaking News

2ನೇ ದಿನದ ಸಂಡೆ ಲಾಕ್ ಡೌನ್ – ಪುತ್ತೂರಿನಲ್ಲಿ ಉತ್ತಮ ಪ್ರತಿಕ್ರಿಯೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಂದು ವಾರದ ಲಾಕ್‌ಡೌನ್‌ನಲ್ಲಿ ಬೆಳಿಗ್ಗೆ 8 ಗಂಟೆಯಿಂದ 11 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗಾಗಿ ಇದ್ದ ಸಡಿಲಿಕೆಗೆ ಜು. 19ರ 2ನೇ ಆದಿತ್ಯವಾರದ ಲಾಕ್‌ಡೌನ್‌ನಲ್ಲಿ ಕಡಿವಾಣ ಹಾಕಲಾಗಿದ್ದು, ಸಂಡೇ ಲಾಕ್‌ಡೌನ್‌ಗೆ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ಇತ್ತು.

ಹಾಲು, ಪತ್ರಿಕೆ, ಮೆಡಿಕಲ್ ಅಂಗಡಿಗಳನ್ನು ಬಿಟ್ಟರೆ ವಾರದ ಲಾಕ್‌ಡೌನ್‌ನಲ್ಲಿ ರಿಯಾಯಿತಿ ಇದ್ದ ಜಿನಸು, ತರಕಾರಿ, ಹೊಟೇಲ್ ಪೂರ್ಣ ಬಂದ್ ಆಗಿತ್ತು. ಅಲ್ಲಿ ಇಲ್ಲಿ ತುರ್ತು ಅಗತ್ಯಕ್ಕಾಗಿ ದ್ವಿಚಕ್ರ ಮತ್ತು ಇತರ ವಾಹನಗಳು ಓಡಾಡುತ್ತಿರುವುದು ಕಂಡು ಬಂದಿದೆ.

ಮುಖ್ಯರಸ್ತೆಗೆ ಎಂಟ್ರಿಯಾಗುವ ಒಳರಸ್ತೆಗಳು ಬಂದ್:
ಪುತ್ತೂರು ಪೇಟೆಯಲ್ಲಿ ಮುಖ್ಯರಸ್ತೆಗೆ ಪ್ರವೇಶಕ್ಕೆ ಅವಕಾಶ ಇರುವ ಒಳರಸ್ತೆಗಳನ್ನು ವಾರದ ಲಾಕ್‌ಡೌನ್ ಸಮಯದಲ್ಲಿ ಬೆಳಿಗ್ಗೆ ಗಂಟೆ ೧೧ ರಿಂದ ಬಂದ್ ಮಾಡಲಾಗುತ್ತಿದ್ದಾರೂ ಆದಿತ್ಯವಾರದ ಲಾಕ್‌ಡೌನ್‌ನಲ್ಲಿ ಬೆಳಿಗ್ಗಿನಿಂದಲೇ ಒಳರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಪೇಟೆಯ ಮುಖ್ಯರಸ್ತೆಗೆ ಎಂಟ್ರಿಯಾಗುವ ವಾಹನಗಳು ಹಾರಾಡಿ, ಮಂಜಲ್ಪಡ್ಪು, ದರ್ಬೆ ಕಡೆಯಿಂದ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.