ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆ-ಕುಂಬ್ರ ಜಂಕ್ಷನ್‌ನಲ್ಲಿ ಸಂಪ್ಯ ಪೊಲೀಸರಿಂದ ಟೈಟ್ ಸೆಕ್ಯೂರಿಟಿ | ಪ್ರತೀ ವಾಹನಗಳ ತಪಾಸಣೆ- ಅನಗತ್ಯ ವಾಹನಗಳ ಸಂಚಾರಕ್ಕೆ ಬ್ರೇಕ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜು.16ರಿಂದ ಒಂದು ವಾರ ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದು ಬಾನುವಾರದ ಸಂಪೂರ್ಣ ಲಾಕ್‌ಡೌನ್ ಯಥಾ ಪ್ರಕಾರ ಮುಂದುವರಿದಿದೆ. ಗ್ರಾಮಾಂತರ ಪ್ರದೇಶದ ಮುಖ್ಯ ಪೇಟೆಗಳಲ್ಲಿ ಒಂದಾಗಿರುವ ಕುಂಬ್ರ ಜಂಕ್ಷನ್‌ನಲ್ಲಿ ಬ್ಯಾರಿಕೇಡ್ ಅಳವಡಿಸಿರುವ ಸಂಪ್ಯ ಪೊಲೀಸರು ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದು ಅನಗತ್ಯ ವಾಹನಗಳ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಸಂಪ್ಯ ಠಾಣಾ ಎಎಸ್ಸೈ ಜಗನ್ನಾಥ್, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ವಿನಯಕುಮಾರ್ ಹಾಗೂ ಗಂಗಾಧರ್ ಅವರು ಕಾರ್ಯನಿರ್ವಹಿಸಿದ್ದು ಪ್ರತೀ ವಾಹನಗಳ ಓಡಾಟಗಳ ಮೇಲೂ ತೀವ್ರ ನಿಗಾ ವಹಿಸಿದ್ದಾರೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕುಂಬ್ರ ಜಂಕ್ಷನ್‌ನಲ್ಲಿ ಹೆಚ್ಚಿನ ನಿಗಾ ವಹಿಸಿರುವ ಪೊಲೀಸರು ಪ್ರತೀ ವಾಹನಗಳನ್ನು ತಪಾಸಣೆಗೊಳಪಡಿಸುತ್ತಿರುವ ದೃಶ್ಯ ಜು.19ರಂದು ಕಂಡು ಬಂದಿದೆ. ಅತೀ ಅಗತ್ಯ ಸಂದರ್ಭ ಹೊರತುಪಡಿಸಿ ಉಳಿದ ಯಾವುದೇ ವಾಹನಗಳ ಓಡಾಟಕ್ಕೂ ಅವಕಾಶ ನೀಡದೆ ಬಂದ ವಾಹನಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಅಲ್ಲದೇ ವಾಹನ ಸವಾರರಲ್ಲಿ ಕೊರೋನಾ ಲಾಕ್‌ಡೌನ್ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಜು.೧೮ಕ್ಕೆ ಹೋಲಿಸಿದರೆ ಜು.೧೯ರಂದು ಸಂಪೂರ್ಣ ಲಾಕ್‌ಡೌನ್ ಕಾರಣಕ್ಕೆ ವಾಹನಗಳ ಓಡಾಟ ವಿರಳವಾಗಿತ್ತು, ಆದರೂ ಕುಂಬ್ರದಲ್ಲಿ ಸಂಪ್ಯ ಪೊಲೀಸರ ಟೈಟ್ ಸೆಕ್ಯೂರಿಟಿಯಿಂದ ಅನಗತ್ಯವಾಗಿ ಮತ್ತು ಸಣ್ಣ ಪುಟ್ಟ ಅಗತ್ಯತೆಗಳಿಗೆ ಹೋಗುವ ವಾಹನ ಸವಾರರಿಗೆ ಅವಕಾಶ ನಿರಾಕರಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.