ಪುತ್ತೂರು ಜು.20ರ ಕೊರೋನಾ ಅಪ್‌ಡೇಟ್ | ತಾಲೂಕಿನಲ್ಲಿ ಪೊಲೀಸ್ ಸೇರಿದಂತೆ 3 ಮಂದಿಗೆ ಕೊರೋನಾ ಸೋಂಕು ದೃಢ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕಿನಲ್ಲಿ ಒಂದೇ ದಿನ 16ಕ್ಕೆ ಏರಿಕೆಯಾಗಿದ್ದ ಕೊರೋನಾ ಪ್ರಕರಣ ಇದೀಗ ಸ್ವಲ್ಪಮಟ್ಟಿಗೆ ಕಡಿಮೆ ಆಗಿದ್ದು, ಜು.20ರಂದು ಪುತ್ತೂರು ನಗರ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಗೆ ಸೇರಿದಂತೆ ತಾಲೂಕಿನಲ್ಲಿ 4 ಕೊರೋನಾ ಸೋಂಕು ದೃಢಗೊಂಡಿದೆ. 

ಪುತ್ತೂರು ನಗರ ಪೊಲೀಸ್ ಠಾಣೆಯ 33 ವರ್ಷದ ಮಹಿಳಾ ಪೊಲೀಸ್ ಸಿಬ್ಬಂದಿ, ಪಡ್ನೂರು ಗ್ರಾಮದ 51 ವರ್ಷದ ವ್ಯಕ್ತಿ, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಉಪ್ಪಿನಂಗಡಿ ರಥಬೀದಿಯ 58 ವರ್ಷ ಪ್ರಾಯದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ದೃಢಪಟ್ಟಿದೆ.  ವಿದೇಶದಿಂದ ಬಂದು ಪುನಃ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಪರ್ಲಡ್ಕ ಕೋಡಿಜಾಳು ನಿವಾಸಿ 37 ವರ್ಷದ ಯುವಕನಿಗೆ ಕೊರೋನಾ ದೃಢಪಟ್ಟಿದೆ. ಪುತ್ತೂರು ನಗರ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಸುಬ್ರಹ್ಮಣ್ಯ ಕೋವಿಡ್ ಚಿಕಿತ್ಸಾ ಕೆಂದ್ರಕ್ಕೆ ಹೋಗಲಿದ್ದಾರೆ ಎಂದು ತಿಳಿದು ಬಂದಿದೆ. ಉಳಿದಂತೆ ಇತ್ತೀಚೆಗೆ ಗಂಟಲು ದ್ರವ ಪರೀಕ್ಷೆ ನಡೆಸಿದ ಪುತ್ತೂರು ಪೊಲೀಸರಲ್ಲಿ ಕೋವಿಡ್ ನೆಗೆಟಿವ್ ವರದಿ ಬಂದಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.