ನಗರಸಭೆ ವ್ಯಾಪ್ತಿಯಲ್ಲಿ ರೋಗ ನಿರೋಧಕ ಶಕ್ತಿ ಮಾತ್ರೆಗಳ ವಿತರಣೆಗೆ ಶಾಸಕರಿಂದ ಚಾಲನೆ

Puttur_Advt_NewsUnder_1
Puttur_Advt_NewsUnder_1
  • ಸಂಕಷ್ಟದಲ್ಲಿರುವವರಿಗೆ ಸಾವಿರಾರು ಕಿಟ್‌ಗಳನ್ನು ವಿತರಿಸಿದ ಪುತ್ತೂರು ಶಾಸಕರ ಆರೋಗ್ಯದ ಕಾಳಜಿ

ಪುತ್ತೂರು: ಕೋವಿಡ್ -19 ನಿಯಂತ್ರಣಕ್ಕೆ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರಿಗೆ ಶಾಸಕರ ವಾರ್ ರೂಮ್ ಮೂಲಕ ಸುಮಾರು 30 ಸಾವಿರ ಕುಟುಂಬಗಳಿಗೆ ಅಗತ್ಯವಸ್ತುಗಳ ಆಹಾರದ ಪೊಟ್ಟಣ ವಿತರಣೆ ಮಾಡಿದ ಶಾಸಕ ಸಂಜೀವ ಮಠಂದೂರು ಅವರು ಇದೀಗ ಕೊರೋನಾ ಸೋಂಕಿನಿಂದ ಪುತ್ತೂರು ಜನತೆ ಮುಕ್ತವಾಗಬೇಕೆಂಬ ನಿಟ್ಟಿನಲ್ಲಿ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಆಯುರ್ವೇದಿಕ್ ಮಾತ್ರೆಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

 

ಪ್ರಥಮ ಹಂತದಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೆ ಉಚಿತ ಮಾತ್ರೆಗಳ ವಿತರಣೆಗೆ ಜು. 20ರಂದು ಪುತ್ತೂರು ನಗರಸಭೆ ಮೀಟಿಂಗ್ ಹಾಲ್‌ನಲ್ಲಿ ಚಾಲನೆ ನೀಡಿದರು. ಬಳಿಕ ಕೆಲವೊಂದು ಆರ್ಥಿಕವಾಗಿ ಹಿಂದುಳಿದ ಮತ್ತು ವಯಸ್ಕರಿರುವ ಮನೆಗಳಿಗೆ ತೆರಳಿ ಅಲ್ಲಿ ಅವರಿಗೆ ಮಾತ್ರೆಗಳನ್ನು ವಿತರಣೆ ಮಾಡಿದರು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪ್ರಧಾನಿ ಸಂದೇಶ:
ಪರ್ಲಡ್ಕದಲ್ಲಿರುವ ಎಸ್‌ಡಿಪಿ ರೆಮಿಡೀಸ್ ಮತ್ತು ಸಂಶೋಧನಾ ಕೇಂದ್ರದ ಆಯುರ್ವೇದ ತಜ್ಞ ಡಾ. ಹರಿಕೃಷ್ಣ ಪಾಣಾಜೆ ಅವರ ಔಷಧ ಉತ್ಪದಾನ ಘಟಕದಲ್ಲಿ ಸಿದ್ದಗೊಂಡ ಆಯುಷ್ ಕ್ವಾತ ಮತ್ತು ಆರೋಗ್ಯ ರಕ್ಷಕ್ ಮಾತ್ರೆಗಳನ್ನು ನಗರಸಭಾ ಸದಸ್ಯರ ಮೂಲಕ ನಗರಸಭೆ ೩೧ ವಾರ್ಡ್‌ಗಳಿಗೆ ವಿತರಣೆಯ ಕಾರ್ಯಕ್ರಮದಲ್ಲಿ ಅವರು ಚಾಲನೆ ನೀಡಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾದ ನಿಯಂತ್ರಣಕ್ಕೆ ನಮ್ಮ ಪಾರಾಂಪರಿಕೆ ವೈದ್ಯ ಪದ್ಧತಿಗೆ ಹೋಗಬೇಕೆಂದು ಮಾಹಿತಿ ನೀಡಿದ್ದಾರೆ. ಅಂದರೆ ನಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ಪ್ರಧಾನಿಯವರು ಸೂಚಿಸಿದ್ದು ಇದಕ್ಕೆ ಪೂರಕ ಎಂಬಂತೆ ಕಾರ್ಯರೂಪಕ್ಕೆ ತರಲು ಜನಪ್ರತಿನಿಧಿಗಳು ಏನು ಮಾಡಬೇಕೋ ಅದನ್ನು ನಾವು ಮಾಡಿದ್ದೇವೆ. ಲಾಕ್‌ಡೌನ್‌ನಿಂದ ಆರೋಗ್ಯ ಕಾಪಾಡಿದ ಬಳಿಕ ಇದೀಗ ಮತ್ತೊಮ್ಮೆ ಆಯುರ್ವೇದ ಔಷಧ ವಿತರಣೆ ಮಾಡುವ ಜನರ ಅರೋಗ್ಯ ಕಾಪಾಡಲಿದ್ದೇವೆ. ಈಗಾಗಲೇ ರಾಜ್ಯಮಟ್ಟದಲ್ಲಿ ಡಾ. ಗಿರಿಧರ ಕಜೆ ಅವರು ಸಂಶೋಧಿಸಿದ ಔಷಧಿ ಸರಕಾರದ ಮಟ್ಟದಲ್ಲಿ ಅನುಷ್ಠಾನಕ್ಕೆ ಬರಲಿದೆ.

ಇಂತಹ ಸಂದರ್ಭದಲ್ಲಿ ನಗರ ಮತ್ತು ಪಟ್ಟಣಗಳಲ್ಲಿ ಜನ ಸಂಖ್ಯೆ ಹೆಚ್ಚಾಗಿದ್ದು, ಸೋಂಕು ಬೇಗ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಟ್ಟಣದ ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಆರಂಭದಲ್ಲಿ 1 ಲಕ್ಷ ಮಾತ್ರೆಗಳನ್ನು ನಗರಸಭೆ ವ್ಯಾಪ್ತಿಯೊಳಗೆ ನೀಡಲಾಗಿದೆ. ನಗರಸಭೆ ಸದಸ್ಯರು ಮನೆ ಮನೆ ತೆರಳಿ ಆರ್ಥಿಕವಾಗಿ ಹಿಂದುಳಿ, ವಯಸ್ಕರು, ಸಮಸ್ಯೆಯಲ್ಲಿರುವವರಿಗೆ ಈ ಮಾತ್ರೆ ವಿತರಣೆ ಮಾಡಬೇಕು. ಉಳಿದಂತೆ ಈ ಮಾತ್ರೆ ಮುಂದೆ ಎಲ್ಲಾ ಆಯುರ್ವೇದಿಕ ಔಷಧಿ ಅಂಗಡಿಗಳಲ್ಲಿ ಲಭ್ಯವಿದೆ ಎಂದು ವೈದ್ಯರು ನಮಗೆ ತಿಳಿಸಿದ್ದಾರೆ ಎಂದು ಹೇಳಿದ ಅವರು ಇವತ್ತಿನ ಪರಿಸ್ಥಿತಿಯಲ್ಲಿ ನಮ್ಮ ಮೂಲಭೂತ ಉದ್ದೇಶವೇ ಜೀವ ಉಳಿಸುವುದು ಮತ್ತು ಆರೋಗ್ಯ ಕಾಪಾಡುವುದು ಎಂದರು.

ರೋಗ ನಿರೋಧಕ ಶಕ್ತಿ ವೃದ್ಧಿಸಲು ನಮ್ಮಲ್ಲಿ ಧೈರ್ಯವಿರಬೇಕು:
ಮಾತ್ರೆಗಳ ಉತ್ಪಾದನೆ ಮಾಡಿದ ಎಸ್‌ಡಿಪಿ ರೆಮಿಡೀಸ್ ಮತ್ತು ಸಂಶೋಧನಾ ಕೇಂದ್ರದ ಆಯುರ್ವೇದ ತಜ್ಞ ಡಾ. ಹರಿಕೃಷ್ಣ ಪಾಣಾಜೆ ಅವರು ಮಾತನಾಡಿ ಕೋವಿಡ್-೧೯ಗೆ ಹೆದರುವ ಅಗತ್ಯವಿಲ್ಲ. ಧೈರ್ಯ ಬಂದಾಗ ರೋಗ ನಿರೋಧಕ ಶಕ್ತಿ ತನ್ನಿಂದ ತಾನೆ ಹೆಚ್ಚುತ್ತದೆ. ಆಗಾಗ ಬಿಸಿ ನೀರು ಕುಡಿಯಿರಿ. ಬೆಳಿಗ್ಗೆ ಪ್ರಾಣಾಯಾಮ ಮಾಡಿ. ಇದರ ಜೊತೆಗೆ ರೋಗ ನಿರೋಧಕ ಮಾತ್ರೆ ತೆಗೆದು ಕೊಳ್ಳಿ ಎಂದ ಅವರು ಮಾತ್ರೆ ಸೇವಿಸುವ ವಿಧಾನದ ಕುರಿತು ವಿವರಿಸಿದರು. ನಗರಸಭೆ ಸದಸ್ಯರಾಗಿರುವ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ತಹಸೀಲ್ದಾರ್ ರಮೇಶ್ ಬಾಬು ಟಿ, ಪೌರಾಯುಕ್ತೆ ರೂಪಾ ಟಿ ಶೆಟ್ಟಿ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು. ನಗರಸಭೆ ಕಂದಾಯ ನಿರೀಕ್ಷಕ ರಾಧಾಕೃಷ್ಣ ಗೌಡ ಬನ್ನೂರು ಸ್ವಾಗತಿಸಿ, ವಂದಿಸಿದರು. ನಗಸರಭೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಆಯುರ್ವೇದ ಮಾತ್ರೆಗಳನ್ನು ಪಡೆದು ಕೊಂಡು ತಮ್ಮ ವಾರ್ಡ್‌ಗಳಲ್ಲಿ ವಿತರಣೆ ಕಾರ್ಯ ಮಾಡಿದರು.

ಮನೆಮನೆಗೆ ತೆರಳಿ ಮಾತ್ರೆ ವಿತರಿಸಿದ ಶಾಸಕರು
ನಗರಸಭೆ ಸದಸ್ಯರ ಮೂಲಕ ಸಾಂಕೇತಿಕವಾಗಿ ಮಾತ್ರೆ ವಿತರಣೆ ಚಾಲನೆ ನೀಡಿದ ಶಾಸಕ ಸಂಜೀವ ಮಠಂದೂರು ಅವರು ನಗರಸಭೆ ವ್ಯಾಪ್ತಿಯ ಭಾಮಿ ಅಶೋಕ್ ಶೆಣೈ ಅವರ ವಾರ್ಡ್‌ನಲ್ಲಿ ಕೆಲವೊಂದು ಮನೆಗಳ ಭೇಟಿ ಮಾಡಿ ವಯೋವೃದ್ಧರಿಗೆ ಮಾತ್ರೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಭಾಮಿ ಅಶೋಕ್ ಶೆಣೈ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಗರ ಮಂಡಲದ ಕಾರ್ಯದರ್ಶಿ ಯುವರಾಜ ಪರಿಯಲ್ತೋಡಿ, ಹರೀಶ್‌ ಬೆದ್ರಾಳ, ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ನಿಕಟಪೂರ್ವ ಮಂಡಲದ ಕಾರ್ಯದರ್ಶಿ ರಾಮ್‌ದಾಸ್ ಶೆಣೈ, ವಿಶ್ವನಾಥ ಕುಲಾಲ್, ರಂಜಿತ್, ಅಶೋಕ್ ರಾವ್, ಭರತ್ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.