ವಾರದೊಳಗೆ ಡಾ. ಗಿರಿಧರ ಕಜೆ ಅವರಿಂದ ಔಷಧಿ ವಿತರಣೆಗೆ ಮಾತುಕತೆ – ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈಗಾಗಲೇ ರಾಜ್ಯಮಟ್ಟದಲ್ಲಿ ಡಾ. ಗಿರಿಧರ ಕಜೆ ಅವರು ಸಂಶೋಧಿಸಿದ ಔಷಧಿ ಸರಕಾರದ ಮಟ್ಟದಲ್ಲಿ ಅನುಷ್ಠಾನಕ್ಕೆ ಬರಲಿದ್ದು, ಈ ನಿಟ್ಟಿನಲ್ಲಿ ಪುತ್ತೂರಿನಲ್ಲೂ ಒಂದಷ್ಟು ಆಯುರ್ವೇದ ಔಷಧ ವಿತರಣೆ ಮಾಡಲು ಅವರ ಸಹೋದರರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಈಗಾಗಲೇ ಕೋವಿಡ್ -19 ಸೋಂಕಿತರಿಗೆ ಡಾ. ಗಿರೀಧರ್ ಕಜೆ ಅವರು ನೀಡಿದ ಔಷಧಿ ಪರಿಣಾಮಕಾರಿಯಾಗಿರುವ ಕುರಿತು ನಾನು ಅವರ ಕಬಕದ ಮನೆಗೆ ಭೇಟಿ ನೀಡಿ ಅವರ ಕಾರ್ಯಕ್ಕೆ ಮೆಚ್ಚುಗೆ ನೀಡಿದ್ದೇನೆ. ಅದೇ ರೀತಿ ಪುತ್ತೂರಿನ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅವರ ತಯಾರಿಸಿರುವ ಔಷಧಿಯು ಎಲ್ಲರಿಗೂ ತಲುಪುವುಂತೆ ಆಗಬೇಕೆಂದು ನಮ್ಮ ಪ್ರಯತ್ನಕ್ಕೆ ಅವರ ಸಹಕಾರ ಕೇಳಿಕೊಂಡಿದ್ದೇವೆ. ಈ ಕುರಿತು ಅವರ ಸಹೋದರ ಡಾ. ಶಶಿಧರ ಕಜೆ ವಾರದೊಳಗೆ ತಿಳಿಸುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಮತ್ತು ಡಾ. ಗಿರೀಧರ ಕಜೆ ಅವರ ತಂದೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.