ಆಮ್ಲಜನಕ ಕೊಡುವ ಅಶ್ವತ್ಥ ಗಿಡ ನೆಡುವ ಕಾರ್ಯಕ್ರಮ | ಶ್ರೀರಾಮ ಗೆಳೆಯರ ಬಳಗದಿಂದ ಪ್ರಕೃತಿ ಉಳಿಸುವ ಕೆಲಸ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರಕೃತಿಗೆ ಆಮ್ಲಜನಕ ಕೊಡುವ ಅಶ್ವಥ ಗಿಡ ನೆಡುವ ಮತ್ತು ಅದಕ್ಕೆ ಕಟ್ಟೆ ಕಟ್ಟುವುದರ ಮೂಲಕ ಶ್ರೀರಾಮ ಗೆಳೆಯರ ಬಳಗ ಮುಂಡೂರು ಗ್ರಾಮದ ಪುತ್ತಿಲ ಇದರ ಸದಸ್ಯರು ಮಾದರಿಯಾಗಿದ್ದಾರೆ.

ಪ್ರತಿ ವರುಷ ಸುಮಾರು 100ಗಿಡಗಳನ್ನು ನೆಟ್ಟು ಅದನ್ನು ಸರಿಯಾಗಿ ನೋಡಿಕೊಂಡು ರಕ್ಷಣೆ ಮಾಡುವ ಜವಾಬ್ದಾರಿ ಮಾಡ್ತಾ ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವ ಕೆಲಸ ಕಾರ್ಯಕ್ರಮ ಗೆಳೆಯರ ಬಳಗದಿಂದ ನಡೆಯುತ್ತಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಕಳೆದ ವರ್ಷ ನೆಟ್ಟ ಅಶ್ವತ್ಥ ಗಿಡಕ್ಕೆ ಕಟ್ಟೆ ಕಟ್ಟುವ ಕೆಲಸ ನಡೆದಿದ್ದು, ಒಂದಷ್ಟು ಗಿಡಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಯುವಕ ಕಟ್ಟೆ ಕಟ್ಟುವ ಕೆಲಸಕ್ಕೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಬಂಡಾರಿ ಯವರು ಮೆಚ್ಚುಗೆ ಸೂಚಿಸಿದ್ದು, ಯುವಕರೆಲ್ಲ ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡಕೊಳ್ಳಬೇಕೆಂದು ಹೇಳಿದರು. ಸರಕಾರದ ಎಲ್ಲಾ ಯೋಜನೆ ಯಶಸ್ವಿಯಾಗಬೇಕಾದರೆ ಯುವ ಜನತೆ ಅದರ ವಿಷಯ ಅರ್ಥ ಮಾಡಿಕೊಂಡಾಗ ಮಾತ್ರ ಸಾಧ್ಯ ಎಂದರು ಕಟ್ಟೆ ರಚನೆಗೆ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ, ಬಾಲಕೃಷ್ಣ ಪೂಜಾರಿ, ವಸಂತ ರೈ, ಜಯರಾಮ ಗೌಡ, ಶ್ರೀಧರ ಪುತ್ತಿಲ ಮತ್ತು ಶ್ರೀರಾಮ್ ಗೆಳೆಯರ ಬಳಗ ಸದಸ್ಯರು ಸಹಕಾರ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.