ಡೆಂಗ್ಯೂ ಜ್ವರ: ಬಿಜೆಪಿ ಮುಖಂಡ ವಿಠಲ ಭಟ್ ಮೂಡಾಜೆ ನಿಧನ

ಉಪ್ಪಿನಂಗಡಿ: ಹಿರಿಯ ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಂದಾಳು ಇಳಂತಿಲ ನಿವಾಸಿ ವಿಠಲ್ ಭಟ್ ಮೂಡಾಜೆ (54 ವ.) ಡೆಂಗ್ಯೂ ಜ್ವರದಿಂದಾಗಿ ಜು. ೨೦ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕಳೆದ ಸೋಮವಾರ ಡೆಂಗ್ಯೂ ಜ್ವರ ಕಾಣಿಸಿಕೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರಲ್ಲಿನ ಬಿಳಿ ರಕ್ತಕಣ ಕಡಿಮೆ ಆಗುತ್ತಾ ಬಂದು ಜ್ವರ ಮೆದುಲಿಗೆ ಹರಡಿಕೊಂಡು ಚಿಕಿತ್ಸೆಗೆ ಸ್ಪಂದಿಸದ ಇವರು ಜು.20ರಂದು ನಿಧನರಾದರು.

ಇಳಂತಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿರುವ ವಿಠಲ ಭಟ್ ಮೂಡಾಜೆಯವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದರು. ಕಳೆದ ಹದಿನೈದು ವರ್ಷಗಳಿಂದ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡು ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದರು.  ಕ್ರಿಯಾಶೀಲ ನಾಯಕತ್ವ ಗುಣವನ್ನು ಹೊಂದಿದ್ದ ಮೂಡಾಜೆಯವರು ರಾಮಕೃಷ್ಣ ಹೆಗಡೆ, ಯಡಿಯೂರಪ್ಪ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳ ಜೊತೆಯೂ ಹತ್ತಿರದ  ಒಡನಾಟವನ್ನು ಇರಿಸಿಕೊಂಡಿದ್ದರು.

ಹವ್ಯಕ ವಲಯ ಗುರಿಕ್ಕಾರ್ ಆಗಿಯೂ ಕಾರ್ಯನಿರ್ವಹಿಸಿದ್ದ ಇವರು, ಇಳಂತಿಲ ಗ್ರಾಮದ ಸರಕಾರಿ ಶಾಲಾ ಅಭಿವೃದ್ಧಿಯಲ್ಲಿ, ಗ್ರಾಮದ ಯುವಕ ಮಂಡಲದ ಸ್ಥಾಪನೆಯಲ್ಲಿ, ಭಜನಾ ಮಂದಿರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.  ಮೃತರು ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರನನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.