Breaking News

ನಿಟ್ಟುಸಿರು ಬಿಡಲಾರಂಭಿಸಿದ ಜಿಲ್ಲೆಯ ಜನತೆ – ಇಳಿಮುಖವಾಗುತ್ತಿದೆ ಕೊರೊನಾ ಸೋಂಕು ಪಾಸಿಟಿವ್ ಪ್ರಕರಣಗಳು

Puttur_Advt_NewsUnder_1
Puttur_Advt_NewsUnder_1

ಜು.20ರಂದು 89 ಮಂದಿಗೆ ಪಾಸಿಟಿವ್‌ ಪತ್ತೆ

  • ಕೋವಿಡ್ ಪರೀಕ್ಷೆಗೆ ಕಳುಹಿಸಲಾದ ಮಾದರಿ 29072
  • ಪಾಸಿಟಿವ್ 3685
  • ನೆಗೆಟಿವ್‌ 25387
  • ಆಸ್ಪತ್ರೆಯಿಂದ ಬಿಡುಗಡೆಗೊಂಡವರು 1548
  • ಮೃತಪಟ್ಟವರು 82
  • ಸಕ್ರಿಯ ಪ್ರಕರಣ 2055

ಪುತ್ತೂರು: ತಾಲೂಕಿನ ನಾಲ್ಕು ಮಂದಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಜು.20ರಂದು 89 ಮಂದಿಗೆ ಕೊರೋನಾ ಸೋಂಕು ಕಂಡು ಬಂದಿದೆ.ಕಳೆದ ಕೆಲವು ದಿನಗಳಿಂದ ಏರಿಕೆ ಕಂಡು ಬರುತ್ತಿದ್ದ ಸೋಂಕಿತ ಪ್ರಕರಣಗಳ ಸಂಖ್ಯೆ ಇದೀಗ ನೂರಕ್ಕಿಂತ ಕೆಳಗಿಳಿದಿರುವುದು ಜಿಲ್ಲೆಯ ಜನತೆಗೆ ತುಸು ನೆಮ್ಮದಿಯನ್ನು ತಂದಿದೆ.ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಂದು ವಾರದವಧಿಯ ಲಾಕ್‌ಡೌನ್ ಜಾರಿಗೊಳಿಸಿದ ಬಳಿಕ ಐದನೇ ದಿನದಂದು ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ 2 ತಿಂಗಳ ಮಗು ಸೇರಿದಂತೆ ಮತ್ತೆ ಐವರು ಸೋಂಕಿತರು ಸಾವಿಗೀಡಾಗಿರುವುದರಿಂದ ಆತಂಕ ಮುಂದುವರಿದಿದೆ.ಕೊರೋನಾದಿಂದಾಗಿ ಜಿಲ್ಲೆಯಲ್ಲಿ ಈ ತನಕ ಒಟ್ಟು 82 ಮಂದಿ ಸಾವಿಗೀಡಾಗಿದ್ದಾರೆ.ಸೊಂಕಿತರ ಸಂಖ್ಯೆ 3685 ಕ್ಕೆ ಏರಿಕೆಯಾಗಿದೆ.

ಇಂದು ದಾಖಲಾದ 89 ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 11, ಐಎಲ್‌ಐ 45, ಎಸ್‌ಎಆರ್‌ಐ-16, ವಿದೇಶ ಪ್ರಯಾಣ 2 ಪ್ರಕರಣಗಳಾಗಿದ್ದು 11 ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ.ಇಂದು ಜಿಲ್ಲೆಯಲ್ಲಿ 57 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಈ ತನಕ ಒಟ್ಟು 1548 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.2055 ಸಕ್ರಿಯ ಕೊರೋನಾ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಐವರ ಸಾವು:
ಜಿಲ್ಲೆಯಲ್ಲಿ 5 ಮಂದಿ ಕೊರೋನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ಮಂಗಳೂರು ನಿವಾಸಿಯಾಗಿದ್ದ 55 ವರ್ಷದ ವ್ಯಕ್ತಿ ಜು.15ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು ಅಧಿಕ ರಕ್ತದೊತ್ತಡ, ಡಯಾಬಿಟಿಸ್, ಮೂತ್ರಪಿಂಡದ ಕಾಯಿಲೆ ಹಾಗೂ ಸೋಂಕಿನಿಂದ ಬಳಲುತ್ತಿದ್ದ ಅವರು ಜು.19ರಂದು ಸಾವಿಗೀಡಾಗಿದ್ದಾರೆ.ಮಂಗಳೂರು ನಿವಾಸಿ 63 ವರ್ಷ ಪ್ರಾಯದ ವ್ಯಕ್ತಿ ಜು.18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜು.18ರಂದು ಸಾವಿಗೀಡಾಗಿದ್ದಾರೆ.ಅವರು ಮೂತ್ರಪಿಂಡ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಮತ್ತು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಸುಮಾರು 42 ವರ್ಷ ಪ್ರಾಯದ ಬೆಳ್ತಂಗಡಿ ನಿವಾಸಿ ಜು.17ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದವರು ಜು.19ರಂದು ಸಾವಿಗೀಡಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯವರಾಗಿದ್ದ 65 ವರ್ಷ ಪ್ರಾಯದ ಗಂಡಸು ಹಾಗೂ ಬಂಟ್ವಾಳದ 2 ತಿಂಗಳ ಮಗುವೊಮದು ಜು.18ರಂದು ಸಾವಿಗೀಡಾಗಿದೆ.ತೀವ್ರ ಜ್ವರ, ವಾಂತಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನು ಜು.17ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇದೊಂದು ವಿಶೇಷ ಪ್ರಕರಣವಾಗಿದ್ದ ಹಿನ್ನೆಲೆಯಲ್ಲಿ ಮಗುವಿನ ಮರಣದ ತನಿಖೆಯ ಬಗ್ಗೆ 7 ಜನ ತಜ್ಞರ ಸಮಿತಿ ವಿಚಾರಣೆ ನಡೆಸಿ ವರದಿ ನೀಡಿದ್ದು, ಮಗುವಿನ ಜನನದ 17ನೆ ದಿನದ ನಂತರ ಶಿಶುವಿಗೆ ಆಗಾಗ್ಗೆ ವಾಂತಿಯಿದ್ದಿರುವುದು ಕಂಡು ಬಂದಿದೆ.ಜು.16ರಂದು ಜ್ವರ, ವಾಂತಿ, ರಾತ್ರಿಯಲ್ಲಿ ಉಸಿರುಕಟ್ಟುವಿಕೆ ಲಕ್ಷಣಗಳು ಕಂಡು ಬಂದಿದ್ದ ಕಾರಣ ಜು.17ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವು ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.