ಹಿಂಜಾವೇಯಿಂದ 100 ಅಶಕ್ತ ಕುಟುಂಬಗಳಿಗೆ ಅಗತ್ಯ ಆಹಾರ ಕಿಟ್‌ಗಳ ವಿತರಣೆ

Puttur_Advt_NewsUnder_1
Puttur_Advt_NewsUnder_1
  • ಏಕಕಾಲದಲ್ಲಿ ವಿವಿಧ ಗ್ರಾಮ ಸಮಿತಿಯಿಂದ ನಡೆಯುವ ಕಾರ್ಯಕ್ರಮಕ್ಕೆ ಪುತ್ತೂರಿನಲ್ಲಿ ಚಾಲನೆ
  • ಸಮಾಜಕ್ಕೆ ಸಂಘಟನೆಯಿಂದ ಉತ್ತಮ ಸಂದೇಶ- ಯು.ಪೂವಪ್ಪ
  • ಕಟ್ಟಕಡೆಯ ವ್ಯಕ್ತಿಗೂ ಶಕ್ತಿ ತುಂಬುವ ಕೆಲಸ -ಅರುಣ್ ಕುಮಾರ್ ಪುತ್ತಿಲ
  • ಹಿಂಜಾವೇ ತನ್ನ ಕರ್ತವ್ಯವೆಂದು ಮಾಡುವ ಸೇವೆ – ಪ್ರಕಾಶ್ಚಂದ್ರ ರೈ

ಪುತ್ತೂರು: ಲಾಕ್‌ಡೌನ್ ಆರಂಭದಿಂದಲೂ ಸಂಕಷ್ಟದಲ್ಲಿರುವವರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿರುವ ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ವತಿಯಿಂದ 2ನೇ ಹಂತದ ಲಾಕ್‌ಡೌನ್ ಸಂದರ್ಭ 100 ಅಶಕ್ತ ಕುಟುಂಬಗಳಿಗೆ ಅಗತ್ಯ ಆಹಾರ ಕಿಟ್‌ಗಳ ವಿತರಣೆ ಕಾರ್ಯ ಆರಂಭಗೊಂಡಿದ್ದು, ಎಲ್ಲಾ ಗ್ರಾಮ ಸಮಿತಿಗಳಲ್ಲಿ ಏಕ ಕಾಲದಲ್ಲಿ ನಡೆಯುವ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಜು.21 ರಂದು ಬೆಳಿಗ್ಗೆ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಚಾಲನೆ ನೀಡಲಾಯಿತು.

ಸಮಾಜಕ್ಕೆ ಸಂಘಟನೆಯಿಂದ ಉತ್ತಮ ಸಂದೇಶ:
ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿಯು ಪೂವಪ್ಪ ಅವರು ಆಹಾರ ಕಿಟ್ ವಿತರಣೆಯ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ಕೋವಿಡ್ -19 ಸಮಯದಲ್ಲಿ ಸಂಘಟನೆ ಅನಿವಾರ್ಯವಾಗಿದೆ. ಸಂಘಟನೆ ಮೂಲಕ ಸಂಕಷ್ಟದಲ್ಲಿರುವವರಿಗೆ ಮಾಡುವ ಸೇವಾ ಕಾರ್ಯ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದೆ ಎಂದರು.

ಕಟ್ಟಕಡೆಯ ವ್ಯಕ್ತಿಗೂ ಶಕ್ತಿ ತುಂಬುವ ಕೆಲಸ:
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಂತನೆಯಂತೆ ಸಂಘಟನೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿ ತುಂಬುವ ಕೆಲಸ ಹಿಂಜಾವೇಯಿಂದ ನಡೆಯುತ್ತಿದೆ. ಪ್ರಾರಂಭದಲ್ಲಿ ಕೋವಿಡ್-19ನಿಂದ ಮೃತಪಟ್ಟವರ ಅಂತ್ಯಸಂಸ್ಕಾರದಲ್ಲೂ ಸಹಕಾರ ನೀಡಿದ ಸಂಘಟನೆ ಇತ್ತೀಚಿಗಿನ ದಿನದಲ್ಲಿ ತುರ್ತು ರಕ್ತದ ಕೊರತೆಯ ಸಂದರ್ಭದಲ್ಲೂ ಸಂಘಟನೆ ಮೂಲಕ ರಕ್ತದಾನ ಮಾಡಲಾಗಿದೆ ಎಂದ ಅವರು ಇದೀಗ 2ನೇ ಅವಧಿಯ ಲಾಕ್‌ಡೌನ್ ಸಂದರ್ಭ ಪ್ರಥಮ ಹಂತದಲ್ಲಿ ಗ್ರಾಮ ಸಮಿತಿಯ ಮೂಲಕ ಕಿಟ್ ವಿತರಣೆ ನಡೆಯುತ್ತಿದ್ದು, ಮುಂದೆ 2ನೇ ಹಂತದಲ್ಲೂ ಕಿಟ್ ವಿತರಣೆ ಮಾಡಲಾಗುತ್ತದೆ ಎಂದರು.

ಹಿಂಜಾವೇ ತನ್ನ ಕರ್ತವ್ಯವೆಂದು ಮಾಡುವ ಸೇವೆ:
ಅಧ್ಯಕ್ಷತೆ ವಹಿಸಿದ್ದ ಹಿಂದೂಜಾಗರಣಾ ವೇದಿಕೆ ಪುತ್ತೂರು ನಗರ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಅವರು ಮಾತನಾಡಿ ಸಂಕಷ್ಟದಲ್ಲಿ ಇರುವವರಿಗೆ ಚೈತನ್ಯ ತುಂಬುವ ಕೆಲಸ ಹಿಂಜಾವೇ ತನ್ನ ಕರ್ತವ್ಯ ಎಂದು ಮಾಡುತ್ತಿದೆ ಎಂದು ಹೇಳಿದರು. ಪದ್ಮಶ್ರೀ ಸೋಲಾರ್ ಸಿಸ್ಟಮ್ಸ್‌ನ ಮಾಲಕ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಮಾತನಾಡಿ ಸಮಾಜದಲ್ಲಿ ಯಾರಿಗೂ ಆಹಾರದ ಕೊರತೆ ಆಗಬಾರದೆಂಬ ನಿಟ್ಟಿನಲ್ಲಿ ಸಂಘಟನೆ ಮೂಲಕ ಉತ್ತಮ ಕೆಲಸ ಕಾರ್ಯ ನಡೆಯುತ್ತಿದೆ ಎಂದರು. ನಗರಸಭೆ ಸದಸ್ಯ ಮನೋಹರ್ ಕಲ್ಲಾರೆ ಸಮಾಜಮುಖಿ ಕಾರ್ಯಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. ಹಿಂಜಾವೆ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ, ನಗರ ಅಧ್ಯಕ್ಷ ಪುಷ್ಪರಾಜ್ ದಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂಜಾವೇ ಪುತ್ತೂರು ತಾಲೂಕು ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ ಸ್ವಾಗತಿಸಿ, ಪ್ರಚಾರ ಪ್ರಮುಖ್ ಮನೋಜ್ ಉಡ್ಯಂಗಲ ವಂದಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.