Breaking News

ಜು.21ರ ಕೊರೋನಾ ಅಪ್‌ಡೇಟ್ | ಪುತ್ತೂರು, ಕಡಬ ಉಭಯ ತಾಲೂಕಿನಲ್ಲಿ 9 ಕೊರೊನಾ ಪಾಸಿಟಿವ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ಉಭಯ ತಾಲೂಕಿನಲ್ಲಿ ಜು. 21ರಂದು 9 ಕೊರೋನಾ ಪ್ರಕರಣ ಪತ್ತೆಯಾಗಿದೆ.  ಪುತ್ತೂರು ನಗರ ಪೊಲೀಸ್ ಠಾಣೆಯ 35 ವರ್ಷದ ಮಹಿಳಾ ಪೊಲೀಸ್ ಸಿಬ್ಬಂದಿ, 51 ವರ್ಷದ ಪುರುಷ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮಹಿಳಾ ಸಿಬ್ಬಂದಿ ಸುಬ್ರಹ್ಮಣ್ಯ ಕೋವಿಡ್ ಆಸ್ಪತ್ರೆಗೆ ಮತ್ತು ಪುರುಷ ಸಿಬ್ಬಂದಿ ಸುಳ್ಯ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಪುತ್ತೂರು ಸರಕಾರಿ ಆಸ್ಪತ್ರೆಯ 44 ವರ್ಷದ ಮಹಿಳಾ ಸಿಬ್ಬಂದಿ, ನೆಹರೂನಗರ ನಿವಾಸಿ 54 ವರ್ಷದ ಪುರುಷ, ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಜತ್ತೂರು ಗ್ರಾಮದ 63 ವರ್ಷ ಪ್ರಾಯದ ಮಹಿಳೆ, ಈಶ್ವರಮಂಗಲ ನಿವಾಸಿ 54 ವರ್ಷದ ವ್ಯಕ್ತಿ ಮತ್ತು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಿಕ್ಕಮುಡ್ನೂರು ಗ್ರಾಮದ 40 ವರ್ಷದ ವ್ಯಕ್ತಿಯಲ್ಲಿ ಕೊರೊನಾ ದೃಡಪಟ್ಟಿದೆ. ಕಡಬ ತಾಲೂಕಿನ ಆಲಂಕಾರು ಗ್ರಾಮದ 55 ವರ್ಷ ವಯಸ್ಸಿನ ಪುರುಷ, ಕೋಡಿಂಬಾಳ ಗ್ರಾಮದ 45 ವರ್ಷ ವಯಸ್ಸಿನ ಪುರುಷರಲ್ಲಿ ಕೊರೊನಾ ದೃಡಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.