ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಕೊರೊನಾ ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
  • ಹೊರಗಿನಿಂದ ಬಂದವರ ಮಾಹಿತಿ ನೀಡಿ – ಗ್ರಾ.ಪಂ. ಆಡಳಿತಾಧಿಕಾರಿ ಭರತ್ ಬಿ.ಎಂ.

ಕಡಬ: ನೂಜಿಬಾಳ್ತಿಲ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಕಾರ್ಯಪಡೆ ಸಭೆ ಜು.21ರಂದು ನಡೆಯಿತು. ಗ್ರಾ.ಪಂ. ಆಡಳಿತಾಧಿಕಾರಿ ಭರತ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೊನಾ ಜಾಗೃತಿಗಾಗಿ ಸೂಕ್ತ ಮುನ್ನೆಚ್ಚರಿಕೆ ಅಗತ್ಯವಿದೆ. ಆದ್ದರಿಂದ ಹೊರ ದೇಶ, ರಾಜ್ಯ, ಜಿಲ್ಲೆಗಳಿಂದ ಬದ ವ್ಯಕ್ತಿಗಳ ಮಾಹಿತಿ ನೀಡಿ ಅವರನ್ನು ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಬೇಕೆಂದರು.

ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್ ಚಂದನದಲ್ಲಿ ಪ್ರಸಾರವಾಗುವ ಸೇತುಬಂಧ ಕಾರ್ಯಕ್ರಮದ ಕುರಿತು ಚರ್ಚಿಸಿ, ಎಲ್ಲಾ ಮಕ್ಕಳು ಭಾಗವಹಿಸುವಂತೆ ಶಿಕ್ಷಕರು ತಿಳಿಸುವಂತೆ ಸೂಚಿಸಿದರು.

ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮಾತನಾಡಿ, ಹೋಂ ಕ್ವಾರಂಟೈನ್ ನಲ್ಲಿರುವವರನ್ನು ಹೊರಗೆ ಸುತ್ತಾಡದಂತೆ ಕಾರ್ಯಪಡೆಯವರು ನಿರ್ದೇಶನ ನೀಡಬೇಕೆಂದರು. ತಾ.ಪಂ. ಸದಸ್ಯ ಗಣೇಶ್ ಕೈಕುರೆ, ಗ್ರಾ.ಪಂ. ನಿಕಟಪೂರ್ವ ಸದಸ್ಯರಾದ ತೋಮಸ್ ಕೆ.ಜೆ., ಪಿ.ಯು.ಸ್ಕರಿಯಾ, ರಾಮಚಂದ್ರ ಎಸ್., ಹರೀಶ್ ಎನ್., ರಜಿತಾ ಕೆ., ಸಿ.ಆರ್.ಪಿ. ಗೋವಿಂದ ನಾಯ್ಕ್, ಮುಖ್ಯ ಶಿಕ್ಷಕರಾದ ಮೇದಪ್ಪ ಗೌಡ, ತಿರುಮಲೇಶ್ವರಿ, ಎಲಿಯಮ್ಮ ಪಿ.ಸಿ., ಪದ್ಮಶ್ರೀ, ಕಿರಿಯ ಆರೋಗ್ಯ ಸಹಾಯಕಿ ಮಧುರ, ಧಯಾಕಿರಣ, ಅಂಗನವಾಡಿ ಕಾರ್ಯಕರ್ತೆಯರಾದ ಅಮೀನಾ ಕೆ., ಸಾರಮ್ಮ, ಪ್ರಫುಲ್ಲ ರೈ, ಸುಮಿತ್ರಾ, ಏಲಿಯಮ್ಮ, ಆಶಾ ಕಾರ್ಯಕರ್ತೆಯರಾದ ಲೀಲಾವತಿ, ಸುಧಾ, ಮರಿಯಮ್ಮ, ಶಿಲ್ಪಾ, ಜಯಂತಿ, ಗ್ರಾಮ ಸಹಾಯಕ ದುಗ್ಗಣ್ಣ, ಗ್ರಾ.ಪಂ. ಕಾರ್ಯದರ್ಶಿ ಗುರುವ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ‌ ಸಿಬಂಧಿಗಳು ಉಪಸ್ಥಿತರಿದ್ದರು. ಪಿಡಿಒ ಆನಂದ ಎ. ಸ್ವಾಗತಿಸಿ, ವಂದಿಸಿ ಮಾಹಿತಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.