ಈ ಬಾರಿಯ ನಾಗರಪಂಚಮಿ ಅರ್ಚಕರಿಕೆ ಸೀಮಿತಗೊಳಿಸಿ ಮಾಡುವುದು – ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

Puttur_Advt_NewsUnder_1
Puttur_Advt_NewsUnder_1
  • ಲಾಕ್‌ಡೌನ್ ಒಂದೇ ಪರಿಹಾರವಲ್ಲ
  • ಆಧಾರ್ ಕಾರ್ಡ್ ತೋರಿಸಿದರೂ ಕೋವಿಡ್ ಚಿಕಿತ್ಸೆ ಉಚಿತ
  • ಪುತ್ತೂರು, ಸುಳ್ಯದಲ್ಲಿ ಕೊರೋನಾ ಸೋಂಕಿತರಿಗೆ ಹಾಸ್ಟೇಲ್
  • ತಪ್ಪು ಮಾಡಿದವರ ವಿರುದ್ಧ ಕ್ರಮ

ಪುತ್ತೂರು: ಕೋವಿಡ್-19 ಸೋಂಕು ಹರಡದಂತೆ ಈಗಾಗಲೇ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಧಾರ್ಮಿಕ ಚಟುವಟಿಕೆಗೆ ಸಂಬಂಧಿಸಿ ದೇವಳದಲ್ಲಿ ನಿಯಮಗಳನ್ನು ಪಾಲಿಸಲಾಗುತ್ತಿದ್ದು, ಮುಂದೆ ಬರುವ ನಾಗರಪಂಚಮಿಯಲ್ಲಿ ಸಾರ್ವಜನಿಕ ಗುಂಪು ಸೇರದಂತೆ ಕೇವಲ ಅರ್ಚಕರಿಗೆ ಸೀಮಿತಗೊಳಿಸಿ ಪೂಜಾಕಾರ್ಯಕ್ರಮ ಮಾಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯಾಗಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

ಅವರು ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದರು. ನಾಗರ ಪಂಚಮಿ ಸಂಬಂಧಪಟ್ಟಂತೆ ನಮ್ಮ ನಮ್ಮ ಮನೆಯೊಳಗೆ ನಾಗರಪಂಚಮಿ ಮಾಡಲು ನಾವು ಸ್ವತಂತ್ರರು. ಆದರೆ ನಾಗನ ಬನ, ದೇವಸ್ಥಾನಗಳಲ್ಲಿ ಸರ್ವ ಭಕ್ತರ ಪರವಾಗಿ ಅರ್ಚಕರು ಮತ್ತು ಸಹಾಯಕರು ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಆರೋಗ್ಯ ಇಲಾಖೆ ಮಾರ್ಗಸೂಚಿಯ ಪ್ರಕಾರ ಗುಂಪಾಗಿ ಸೇರಿದಂತೆ ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಭಾರಿಯ ನಾಗರಪಂಚಮಿಯನು ಅರ್ಚಕರಿಗೆ ಸೀಮಿತಗೊಳಿಸಲಾಗಿದೆ. ಭಕ್ತರು ಸಹಕಾರ ನೀಡುವಂತೆ ಅವರು ವಿನಂತಿಸಿದರು.

ಲಾಕ್‌ಡೌನ್ ಒಂದೇ ಪರಿಹಾರವಲ್ಲ:
ಲಾಕ್‌ಡೌನ್ ನಾಳೆ ಮುಗಿಯುತ್ತದೆ. ಆದರೆ ನಮ್ಮಲ್ಲಿ ಅನೇಕ ಜನಪ್ರತಿನಿಧಿಗಳು, ಸಾರ್ವಜನಿಕ ವಲಯದಲ್ಲಿ ಇನ್ನೂ 14 ದಿನಗಳ ಕಾಲ ಲಾಕ್‌ಡೌನ್ ಮುಂದುವರಿಸುವಂತೆ ಸಲಹೆ ನೀಡುತ್ತಿದ್ದಾರೆ. ಆದರೆ ನಾನು ಹೇಳುವ ಪ್ರಕಾರ ಲಾಕ್‌ಡೌನ್ ಒಂದೇ ಪರಿಹಾರವಲ್ಲ. ಹಾಗಾಗಿ ಇವತ್ತು ಸಂಜೆಯೊಳಗೆ ಮತುಕತೆ ನಡೆಸಿ ಅಂತಿಮ ತೀರ್ಮಾಣವನ್ನು ಮುಖ್ಯಮಂತ್ರಿಗಳು ನೀಡಲಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಆಧಾರ್ ಕಾರ್ಡ್ ತೋರಿಸಿದರೂ ಕೋವಿಡ್ ಚಿಕಿತ್ಸೆ ಉಚಿತ:
ಕೊರೋನಾ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿ ಜಿಲ್ಲೆಯಲ್ಲಿ 9 ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾದ ಕೊರೋನಾ ಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಳನ್ನು ಈಗಾಗಲೇ ಮಾಡಲಾಗಿದೆ. ಆಯಷ್ಮಾನ್ ಭಾರತ್ ಹೊಂದಾಣಿಕೆಯಲ್ಲಿ ಯಾರೆ ಆದರೂ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಚಿಕಿತ್ಸೆ ಪಡೆಯಬಹುದು. ಎಪಿಎಲ್, ಬಿಪಿಎಲ್ ಅಥವಾ ಕನಿಷ್ಠ ಆಧಾರ್ ಕಾರ್ಡ್ ಇದ್ದರೆ ಸಾಕು ಉಚಿತ ಚಿಕಿತ್ಸೆ ನೀಡಲಾಗುವುದು. ಜೊತೆಗೆ ಜಿಲ್ಲೆಗೆ 25 ಸಾವಿರ ಪರೀಕ್ಷಾ ಕಿಟ್‌ಗಳನ್ನು ಮತ್ತು 50 ವೆಂಟಿಲೇಟರ್ ಹಾಗೂ ಪಿಪಿಇ ಕಿಟ್‌ಗಳನ್ನು ಕೂಡಾ ಕೊಡಿಸಲಾಗುತ್ತಿದೆ ಎಂದರು.

ಪುತ್ತೂರು, ಸುಳ್ಯದಲ್ಲಿ ಕೊರೋನಾ ಸೊಂಕಿತರಿಗೆ ಹಾಸ್ಟೇಲ್:
ಪುತ್ತೂರು ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಕೊರೋನಾ ಚಿಕಿತ್ಸೆಗೆ ಬೇಕಾದ ಯೋಜನೆ ಮಾಡಲು ಇಲ್ಲಿನ ಶಾಸಕರು ಮಾಹಿತಿ ನೀಡಿದ್ದಾರೆ. ಹಾಗಾಗಿ ಈ ಭಾಗದ ಖಾಸಗಿ ಆಸ್ಪತ್ರೆ ಅಥವಾ ಹಾಸ್ಟೇಲ್ ಮೂಲಕ ಸರಕಾರಿ ಆರೋಗ್ಯ ಸೇವೆ ಸಿಗುವಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಕೊರೋನಾ ಪೀಡಿತರಿಗೆ ಯಾವುದೇ ಸಮಸ್ಯೆಗಳಿಲ್ಲದೆ ರೋಗಮುಕ್ತರಾಗಲು ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

 

ತಪ್ಪು ಮಾಡಿದವರ ವಿರುದ್ಧ ಕ್ರಮ:
ನೆಲ್ಯಾಡಿಯ ಗರ್ಭಿಣಿಯೊಬ್ಬರು ಚಿಕಿತ್ಸೆಗಾಗಿ ದಿನಪೂರ್ತಿ ಸರಕಾರಿ ಆಸ್ಪತ್ರೆಗಳಿಗೆ ಅಲೆದಾಡಿದ ಪ್ರಕರಣಕ್ಕೆ ಸಂಬಂಧಿಸಿ ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಇಲ್ಲಿ ಯಾರು ತಪ್ಪಿತಸ್ಥರೋ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಈ ಸಂದರ್ಭದಲ್ಲಿ ಸುಳ್ಯವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.