Breaking News

ಕೋವಿಡ್ -19 ಹಿನ್ನೆಲೆ: ಪೊಲೀಸ್ ಠಾಣೆ ಸ್ವಾಗತಗಾರ ಸಿಬ್ಬಂದಿಗೆ ಗಾಜಿನ ಕವಚ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಸೋಂಕು ಹರಡುವ ಭಯದ ವಾತಾವರಣದಲ್ಲಿ ಕೊರೋನಾ ವಾರಿಯರ್ಸ್ ಆಗಿರುವ ಪೊಲೀಸರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಠಾಣೆಯಲ್ಲಿ ಸ್ವಾಗತಗಾರ ಸಿಬ್ಬಂದಿಗೆ ಗಾಜಿನ ಕವಚನ ಅಳವಡಿಸಲಾಗಿದೆ.

ಸಾರ್ವಜನಿಕರು ಸೇರಿದಂತೆ ವಿವಿಧ ವಿಚಾರಣೆಗಳಿಗೆ ಸಂಬಂಧಿಸಿ ಠಾಣೆಗೆ ಆಗಮಿಸುವವರಿಗೆ ಸರಿಯಾದ ಮಾಹಿತಿ ನೀಡುವ ಸ್ವಾಗತಗಾರರು ತಮ್ಮ ಆರೋಗ್ಯ ಮತ್ತು ಠಾಣೆಗೆ ಬರುವವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಾಗತಗಾರ ಸಿಬ್ಬಂದಿ ಕುಳಿಕೊಳ್ಳುವ ಟೇಬಲ್‌ಗೆ ಗಾಜಿನ ಕವಚ ಅಳವಡಿಸಲಾಗಿದೆ. ಕೋವಿಡ್ ಗಂಟಲ ದ್ರವ ಸಂಗ್ರಹಕ್ಕೆ ಯಾವ ರೀತಿಯ ಕಿಯೋಸ್ಕ್ ಅಳವಡಿಸಲಾಗಿದೆಯೋ ಅದೇ ರೀತಿ ಗಾಜಿನ ಕವಚದ ಒಳಗೆ ಕುಳಿತಿರುವ ಪೊಲೀಸ್ ಸಿಬ್ಬಂದಿ ಸಾರ್ವಜನಿಕರ ದೂರು ಸ್ವೀಕರಿಸುವ ಮೂಲಕ ಕೊರೋನಾ ಮುನ್ನೆಚ್ಚರಿಕೆ ಕ್ರಮವನ್ನು ಠಾಣೆಯಲ್ಲಿ ಕೈಗೊಳ್ಳಲಾಗಿದೆ. ನಗರ ಪೊಲೀಸ್ ಠಾಣೆ ಮತ್ತು ಸಂಚಾರ ಪೊಲೀಸ್ ಠಾಣೆಯಲ್ಲಿ ಗಾಜಿನ ಕವಚ ಅಳವಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.