ನಿಯಮ ಉಲ್ಲಂಘನೆ: ಮೂರು ಅಂಗಡಿ ಮಾಲಕರಿಗೆ ದಂಡ ವಿಧಿಸಿದ ಸವಣೂರು ಗ್ರಾ.ಪಂ

ಪುತ್ತೂರು: ಕೊರೊನಾ ಕರಿಛಾಯೆ ತೀವ್ರಗೊಳ್ಳುತ್ತಿರುವುದರಿಂದ ದ.ಕ.ಜಿಲ್ಲಾಡಳಿತ ವಿಧಿಸಿದ ಲಾಕ್‌ಡೌನ್ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಮೂರು ಅಂಗಡಿ‌ ಮಾಲಕರಿಗೆ ದಂಡ ವಿಧಿಸಿದ ಕುರಿತು ಸವಣೂರಿನಲ್ಲಿ ವರದಿಯಾಗಿದೆ.
ಲಾಕ್‌ಡೌನ್ ಹಾಗೂ ಕೊರೊನಾ ಮುಂಜಾಗೃತ ಕ್ರಮಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಸವಣೂರು ಸುತ್ತಮುತ್ತ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲಾಗಿತ್ತು.ಅಲ್ಲದೆ ನಿಯಮ ಮೀರಿದರೆ ದಂಡ‌ ವಿಧಿಸುವ ಕುರಿತೂ ಎಚ್ಚರಿಕೆ ನೀಡಲಾಗಿತ್ತು.
ಆದಾಗ್ಯೂ ನಿಯಮ ಮೀರಿದ ಮೂರು ಅಂಗಡಿಗಳ‌ ಮಾಲಕರಿಗೆ ಸವಣೂರು ಗ್ರಾ.ಪಂ.ಅಧಿಕಾರಿಗಳು ದಂಡ ವಿಧಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.