ಬೆಟ್ಟಂಪಾಡಿ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭ | ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸೀಮಿತ ಶುಲ್ಕದಲ್ಲಿ ಪದವಿ ವ್ಯಾಸಂಗ ಮಾಡಲು ಸುವರ್ಣವಕಾಶ

Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿಯಲ್ಲಿ ಬಿ.ಎ,. ಬಿ.ಎಸ್ಸಿ, ಬಿ.ಕಾಂ. ಬಿ.ಎಸ್.ಡಬ್ಲ್ಯೂ, ಬಿಬಿಎ ಮುಂತಾದ ಕೋರ್ಸುಗಳಿಗೆ ಪ್ರವೇಶ ಪ್ರಕ್ರೀಯೆ ಆರಂಭವಾಗಿದೆ. ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅರ್ಜಿ ನಮೂನೆ ಮತ್ತು ಮಾಹಿತಿ ಪತ್ರಗಳಿಗಾಗಿ ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ವಿದ್ಯಾರ್ಥಿಗಳು ಇವುಗಳನ್ನು www.gfgc.kar.nic.in/bettampady ಎಂಬ ಕಾಲೇಜಿನ ವೆಬ್‌ಸೈಟಿನಿಂದಲೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ವಿಳಾಸವನ್ನು ತಿಳಿಸಿದಲ್ಲಿ ಅಂಚೆ ಮೂಲಕವೂ ಅರ್ಜಿ ನಮೂನೆಯನ್ನು ಉಚಿತವಾಗಿ ಕಳುಹಿಸಿಕೊಡಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಪಿಯುಸಿ ಅಂಕಪಟ್ಟಿಯ ದಾಖಲೆಯ ಪ್ರತಿಯೊಂದಿಗೆ ಜುಲೈ ತಿಂಗಳ 31ರ ಒಳಗಾಗಿ ಕಾಲೇಜಿಗೆ ಸಲ್ಲಿಸಲು ಸೂಚಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಬೆಟ್ಟಂಪಾಡಿಯ ಸುಂದರ ಗ್ರಾಮೀಣ ಪ್ರದೇಶದಲ್ಲಿರುವ ಈ ಕಾಲೇಜು ಪದವಿ ವ್ಯಾಸಂಗಕ್ಕೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿವೆ. ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯಗಳಿರುವ ಬಿ.ಎಸ್ಸಿ ತರಗತಿಗಳಿಗೂ ಅವಕಾಶವನ್ನು ಕಲ್ಪಿಸಿದೆ. ಬಿ.ಎಸ್.ಡಬ್ಲ್ಯೂ, ಬಿಬಿಎ ಯಂತಹ ವೃತ್ತಿ ಕೌಶಲ್ಯ  ಬೆಳೆಸುವ ಕೋರ್ಸುಗಳಿಗೂ ಅವಕಾಶವಿದೆ. ಕಳೆದ ಬಾರಿ ಬಿಬಿಎ ವಿಭಾಗದಲ್ಲಿ ರ್‍ಯಾಂಕ್ ಗಳಿಸಿದ ಸಾಧನೆಯನ್ನೂ ಕಾಲೇಜು ಮಾಡಿದೆ. ಸರ್ಕಾರ ನಿಗದಿ ಪಡಿಸಿದ ಶುಲ್ಕಗಳನ್ನಷ್ಟೇ ಪಾವತಿಸಬೇಕಾಗಿರುವುದರಿಂದ ಗ್ರಾಮೀಣ ಪ್ರದೇಶದ ಹಿಂದುಳಿದ ಜನರ ಮಕ್ಕಳ ಶೈಕ್ಷಣಿಕ ಬದುಕಿಗೆ ಆಶಾಕಿರಣವಾಗಿದೆ. ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯು ಕಾಲೇಜಿನ ಅಭಿವೃದ್ಧಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ಸಕ್ರೀಯವಾಗಿ ಹಮ್ಮಿಕೊಳ್ಳುತ್ತಿದೆ.

ಒಂದು ಕಾಲದಲ್ಲಿ ಸರಕಾರಿ ಕಾಲೇಜು ಅಂದರೆ ಅಲ್ಲಿ ಯಾವ ಸೌಲಭ್ಯಗಳೂ ಇರುವುದಿಲ್ಲ ಎನ್ನುವ ಭಾವನೆ ಜನರಲ್ಲಿತ್ತು. ಆದರೆ ಬೆಟ್ಟಂಪಾಡಿ ಸರಕಾರಿ ಪದವಿ ಕಾಲೇಜು ಗ್ರಾಮೀಣ ಪ್ರದೇಶದಲ್ಲಿದ್ದರೂ ಸೌಲಭ್ಯಗಳ ಕ್ರೋಢೀಕರಣದಲ್ಲಿ ಹೈಟೆಕ್ ಕಾಲೇಜುಗಳಿಗೆ ಸರಿಸಮಾನವಾಗಿದೆ. ಒಂದು ಕಡೆ ಬೆಟ್ಟದ ತುದಿಯ ಪ್ರಶಾಂತ ವಾತಾವರಣ, ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾದ ಪೂರಕ ಸೌಲಭ್ಯಗಳು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲುಪಡೆದಿವೆ.

ವಿಶೇಷತೆಗಳು :

  • ಯುಜಿಸಿಯಿಂದ 2 (ಎಫ್) 12(ಬಿ) ಮಾನ್ಯತೆ
  • ನ್ಯಾಕ್ (NAAC) ನಿಂದ `ಬಿ’ ಗ್ರೇಡ್ ಮನ್ನಣೆ
  • ಶಿಕ್ಷಣ ಇಲಾಖೆಯಿಂದ ಎಜ್ಯುಸ್ಯಾಟ್, ಸ್ಮಾರ್ಟ್‌ಕ್ಲಾಸ್
  • ಸುಸಜ್ಜಿತ ಗ್ರಂಥಾಲಯ ಹಾಗೂ ಪ್ರಯೋಗಾಲಯಗಳು
  • ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್
  • ನಿರಂತರ ಇಂಟರ್‌ನೆಟ್ ಸೌಲಭ್ಯ
  • ವಿವಿಧ ಇಲಾಖೆಗಳಿಂದ ದೊರೆಯುವ ಸ್ಕಾಲರ್‌ಶಿಪ್‌ಗಳು

ಹೆಚ್ಚಿನ ವಿವರಗಳಿಗೆ 9448887348 ಅಥವಾ 9845598194 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.