ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರಿಗೆ ಕೊರೋನಾ ಪಾಸಿಟಿವ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.ಕೆಲವೇ ದಿನಗಳಲ್ಲಿ ಚೇತರಿಕೆಯಾಗಲಿರುವ ಕುರಿತು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.ಸ್ವತ: ಈಶ್ವರ ಭಟ್ ಅವರೇ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಬನ್ನೂರು ಗ್ರಾ.ಪಂ.ಸದಸ್ಯರಾಗಿ, ಜಯ ಕರ್ನಾಟಕದ ಪುತ್ತೂರು ತಾಲೂಕು ಉಪಾಧ್ಯಕ್ಷರಾಗಿ, ಕಡವ-ಶಿರಾಡಿ ದೈವಸ್ಥಾನದ ಉಪಾಧ್ಯಕ್ಷರಾಗಿ ಪಡ್ನೂರು,ಯರ್ಮುಂಜಪಳ್ಳ ಅಶ್ವತ್ಥಕಟ್ಟೆ ದೇವತಾ ಸಮಿತಿಯ ಗೌರವ ಅಧ್ಯಕ್ಷರಾಗಿ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಸದಸ್ಯರಾಗಿ, ಪುತ್ತೂರು ಕಿಲ್ಲೆ ಮೈದಾನದ ದೇವತಾ ಸಮಿತಿಯ ಸದಸ್ಯರಾಗಿ ಸೇರಿದಂತೆ ಧಾರ್ಮಿಕ,ರಾಜಕೀಯ, ಸಾಮಾಜಿಕವಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಪಂಜಿಗುಡ್ಡೆ ಈಶ್ವರ ಭಟ್ ಅವರು ಮೂರು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಕೊರೋನಾ ಪಾಸಿಟಿವ್ ವರದಿ ಬಂದಿತ್ತು.ಕೆಎಂಸಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ ಅವರು ವೈದ್ಯರ ಸೂಚನೆಯಂತೆ ಇದೀಗ ಮನೆಯಲ್ಲಿ ಐಸೋಲೇಷನ್‌ನಲ್ಲಿದ್ದಾರೆ.

ಮನೆ ಸೀಲ್‌ಡೌನ್: ಕೊರೋನಾ ಪಾಸಿಟಿವ್ ಪತ್ತೆಯಾಗಿರುವ ಕಾರಣ ಪಂಜಿಗುಡ್ಡೆ ಈಶ್ವರ ಭಟ್ ಅವರ ಮನೆಯನ್ನು ತಾಲೂಕು ಅಧಿಕಾರಿಗಳು ಜು.೨೦ರಂದು ಸಂಜೆ ಸೀಲ್‌ಡೌನ್ ಮಾಡಿದ್ದಾರೆ.ಬನ್ನೂರು ಗ್ರಾ.ಪಂ ಪಿಡಿಒ ಶಾಂತಾರಾಮ, ಕಂದಾಯ ನಿರೀಕ್ಷಕ ಜಯವಿಕ್ರಂ, ವಿ.ಎ.ಕಾಸ್ಯಪ್ಪ, ಗ್ರಾಮ ಸಹಾಯಕ ಬಾಲಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಮನೆಯವರ ಮಾಹಿತಿ ಪಡೆದು ಯಾರೂ ಮನೆಯಿಂದ ಹೊರಬಾರದೆ ಕೋವಿಡ್-೧೯ರ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.

ಮನೆ ಕಾರ್ಮಿಕರು ಕ್ವಾರಂಟೈನ್‌ಗೆ ಮನವಿ: ಪಡ್ನೂರು ಗ್ರಾಮದಲ್ಲಿ ಕೋವಿಡ್ ಪ್ರಕರಣ ಕಂಡು ಬಂದಲ್ಲಿ ಪೂರ್ಣ ರೀತಿಯ ಸಹಕಾರ ನೀಡುವ ಕುರಿತು ಬಿಜೆಪಿ, ಪರಿವಾರ ಸಂಘಟನೆಗಳ ಮೂಲಕ ಈಗಾಗಲೇ ತಂಡ ರಚನೆಯಾಗಿದ್ದು ಯಾವುದೇ ಸಮಯದಲ್ಲಿ ಸಹಕಾರಕ್ಕೆ ಸಿದ್ಧವಿದೆ.ಸೋಂಕಿತರ ಮನೆಗೆ ಕೃಷಿ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರು ಆದಷ್ಟು ಮನೆಯಲ್ಲೇ ಕ್ವಾರಂಟೈನ್ ಆಗಿ ಸಹಕರಿಸುವಂತೆ ಪರಿವಾರ ಸಂಘಟನೆಯ ಕಾರ್ಯಪಡೆಯ ನವೀನ್ ಪಡ್ನೂರು ವಿನಂತಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.