ಗುರುವಾರದಿಂದ ದಕ್ಷಿಣ ಕನ್ನಡ ಜಿಲ್ಲೆ ಅನ್‌ಲಾಕ್ – ಸಚಿವ ಕೋಟ ಸ್ಪಷ್ಟನೆ

ಪುತ್ತೂರು: ಜುಲೈ 23ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಇರುವುದಿಲ್ಲ. ಎಂದಿನಂತೆ ವ್ಯವಹಾರ ವ್ಯಾಪಾರ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಕೋಟ ಸ್ಪಷ್ಟಪಡಿಸಿದ್ದಾರೆ.

 

ಜುಲೈ 23 ಬೆಳಿಗ್ಗೆ 5 ಗಂಟೆಯವರೆಗೆ ಲಾಕ್‌ಡೌನ್ ಜಾರಿಯಲ್ಲಿತ್ತು. ಮುಖ್ಯಮಂತ್ರಿಗಳ ನಿರ್ದೇಶನದಂತೆ ನಾಳೆ ಸಂಜೆಗೆ ಲಾಕ್‌ಡೌನ್ ಕೊನೆಗೊಳ್ಳಲಿದೆ. ಜುಲೈ 23 ಬೆಳಗ್ಗಿನಿಂದ ದೈನಂದಿನ ವ್ಯಾಪಾರ ವ್ಯವಹಾರ ಜನ ಸಂಚಾರ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ‌.

ಜಿಲ್ಲೆಯಲ್ಲಿ ಜುಲೈ 23 ರ ನಂತರವೂ ಲಾಕ್‌ಡೌನ್ ಮುಂದುವರಿಯಲಿದೆ ಎಂಬ ಅನುಮಾನ ಎಲ್ಲೆಡೆ ಕಾಡಿತ್ತು. ಆದರೆ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ಯಾವುದೇ‌ ಕಾರಣಕ್ಕೆ ರಾಜ್ಯದಲ್ಲಿ ಇನ್ನುಮುಂದೆ ಲಾಕ್‌ಡೌನ್ ಇರಲ್ಲ. ಬದಲಾಗಿ ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೆ ಕೋವಿಡ್ ತಡೆಗಟ್ಟಲು ಇರುವ ಮಾರ್ಗ ಎಂಬುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಲಾಕ್‌ಡೌನ್ ಬಗ್ಗೆ ಜನರಲ್ಲಿ ಇದ್ದ ಗೊಂದಲ ಪರಿಹಾರವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.