ಕೊರೋನಾ ಸೋಂಕಿತ ಮೃತ ವೃದ್ಧೆಯ ಅಂತ್ಯ ಸಂಸ್ಕಾರ

Puttur_Advt_NewsUnder_1
Puttur_Advt_NewsUnder_1

ಶಾಸಕರ ವಾರ್‌ರೂಮ್ ಮೂಲಕ ಬಿಜೆಪಿ ಪರಿವಾರ ಸಂಘಟನೆ ಸಹಕಾರ

ಪುತ್ತೂರು: ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರಕ್ಕೆ ಶಾಸಕರ ವಾರ್‌ರೂಮ್ ಮೂಲಕ ಬಿಜೆಪಿ ಪರಿವಾರ ಸಂಘಟನೆ ಈಗಾಗಲೇ ಸಿದ್ದತೆ ಮಾಡಿಕೊಂಡಿದ್ದು ಜು.೨೧ರಂದು ಮೃತಪಟ್ಟ ಚಿಕ್ಕಮುಡ್ನೂರು ಗ್ರಾಮದ ಕೊರೋನಾ ಸೋಂಕಿತ ವೃದ್ಧೆಯ ಮೃತ ದೇಹವನ್ನು ಬಿಜೆಪಿ ಪರಿವಾರ ಸಂಘಟನೆಯ ಸಹಕಾರದೊಂದಿಗೆ ರಾತ್ರಿ ಇಲ್ಲಿನ ಚಿಕ್ಕಪುತ್ತೂರು ಮಡ್ಯಲಕಟ್ಟೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಕೋವಿಡ್ -೧೯ ಸೋಂಕಿನಿಂದ ಮೃತಪಟ್ಟ ವೃದ್ಧೆಯ ಪುತ್ರ ಅಂತ್ಯ ಸಂಸ್ಕಾರ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರ ವಾರ್ ರೂಮ್‌ನಿಂದ ಅಂತ್ಯಸಂಸ್ಕಾರ ನಡೆಸಲು ಸಹಕಾರ ನೀಡುವ ನಿಟ್ಟಿನಲ್ಲಿ ಸಿದ್ಧಗೊಂಡ ತಂಡದ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ರಾಮಚಂದ್ರ ಘಾಟೆ ಸಹಕಾರ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ವಿ.ಎ ಸುನಿಲ್, ಡಾ. ಝರೀನಾ, ಕಿರಿಯ ಆರೋಗ್ಯ ಸಹಾಯಕಿ ದಮಯಂತಿ, ಇಲಾಖೆಯ ಭರತ್ ಉಪಸ್ಥಿತರಿದ್ದರು. ಕೋವಿಡ್ ನಿಯಮ ಪಾಲಿಸಿಕೊಂಡು ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರು ಗಂಡ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಕೊರೋನಾದಿಂದ ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರದ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಸೇವಾ ಕಾರ್ಯ ನಡೆಸಲು ಬಿಜೆಪಿ ಮತ್ತು ಪರಿವಾರ ಕಾರ್ಯಕರ್ತರ ತಂಡವೊಂದು ಸಿದ್ದಗೊಂಡಿದೆ. ಈಗಾಗಲೇ ಅನಾತ ವೃದ್ದೆಯೊಬ್ಬರ ಮೃತದೇಹದ ಅಂತ್ಯಕ್ರಿಯೆನ್ನು ಮಾಡಲಾಗಿತ್ತು. ಇದೀಗ ಇನ್ನೋರ್ವ ವೃದ್ದೆಯೊಬ್ಬರ ಮೃತದೇಹದ ಅಂತ್ಯ ಕಾರ್ಯಕ್ಕೆ ಸಹಕಾರ ನೀಡಿದ್ದೇವೆ. -ಪಿ.ಜಿ.ಜಗನ್ನಿವಾಸ ರಾವ್

ಕೊರೋನಾದಿಂದ ಒಂದಷ್ಟು ಜನ ಭಯಭೀತರಾಗಿದ್ದಾರೆ. ಭಯದ ವಾತಾವರಣಕ್ಕಿಂತ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುವ ನಿಟ್ಟಿನಲ್ಲಿ ಕೊರೋನಾಕ್ಕೆ ಬಲಿಯಾದವರ ಶವ ಸಂಸ್ಕಾರದಂತಹ ಪುಣ್ಯ ಕಾರ್ಯ ಮಾಡಲು ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರ ನೇತೃತ್ವ ಮತ್ತು ಗ್ರಾಮಾಂತರದಲ್ಲಿ ಗ್ರಾಮ ಸಮಿತಿಯ ನೇತೃತ್ವದಲ್ಲಿ ತಂಡ ಸಿದ್ಧಗೊಂಡಿದೆ. –ಸಂಜೀವ ಮಠಂದೂರು, ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.