Breaking News

ನೆಲ್ಯಾಡಿ: ಅಕ್ರಮ ಮದ್ಯ ಮಾರಾಟ ಇಬ್ಬರು ಆರೋಪಿಗಳ ಬಂಧನ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಅಕ್ರಮವಾಗಿ ಸಂಚಾರಿ ಮದ್ಯದಂಗಡಿಯನ್ನು ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ಅವರಿಂದ 70 ಬಾಟ್ಲಿ ವಿವಿಧ ಬ್ರ್ಯಾಂಡ್‌ನ ಮದ್ಯಗಳನ್ನು ವಶಪಡಿಸಿಕೊಂಡ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.
ಜು.20ರಂದು ಸಂಜೆ ನಿತ್ಯದ ಗಸ್ತು ನಿರತ ಉಪ್ಪಿನಂಗಡಿ ಎಸೈ ಈರಯ್ಯ ಡಿ ಎನ್.ರವರು ಖಚಿತ ಮಹಿತಿ ಮೇರೆಗೆ ಕಡಬ ತಾಲೂಕು ನೆಲ್ಯಾಡಿ – ಕುಂಡಡ್ಕ ರಸ್ತೆಯಲ್ಲಿ ಕೌಕ್ರಾಡಿ ಗ್ರಾಮದ ನಿವಾಸಿಗಳಾದ ಚಂದ್ರಶೇಖರ (32ವ.) ಮತ್ತು ದಿನೇಶ ಯಾನೆ ಕಾಟಿ (31) ಎಂಬಿಬ್ಬರು ಬೈಕೊಂದರಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಮದ್ಯದ ಬಾಟ್ಲಿಗಳನ್ನು ತುಂಬಿಸಿಟ್ಟು ಮಾರಾಟಕ್ಕೆ ಮುಂದಾಗಿರುವುದನ್ನು ಪತ್ತೆ ಹಚ್ಚಿದರು. ಪರಿಶೀಲಿಸಿದಾಗ ವಿವಿಧ ಬ್ರ್ಯಾಂಡಿನ ತಲಾ 180 ಎಂ ಎಲ್ ಪ್ರಮಾಣದ 70 ಬಾಟ್ಲಿಗಳು ಕಂಡು ಬಂದಿತ್ತು. ಎಲ್ಲೆಡೆ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದರೂ ಅಕ್ರಮವಾಗಿ ಬೈಕೊಂದರಲ್ಲಿ ಸಂಚಾರಿ ಮದ್ಯದಂಗಡಿಯನ್ನು ನಡೆಸುತ್ತಿದ್ದ ಆರೋಪಿಗಳಿಬ್ಬರನ್ನೂ ಮಾಲು ಸಹಿತ ಬಂಧಿಸಿ ಅವರಿಂದ ಬೈಕನ್ನೂ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲದ ಮದ್ಯ 5564 ರೂ., ಮೌಲ್ಯದ್ದಾಗಿದ್ದು, ಬೈಕಿನ ಮೌಲ್ಯ 55ಸಾವಿರ ಎಂದು ಅಂದಾಜಿಸಲಾಗಿದೆ. ಹಾಗೂ ಆರೋಪಿಗಳ ಬಳಿ ಇದ್ದ ನಗದು ಹಣ 225೦ನ್ನು ವಶಪಡಿಸಿಕೊಂಡಿರುವ ಪೊಲೀಸರು ವಶಪಡಿಸಿಕೊಂಡ ವಸ್ತು ಹಾಗೂ ನಗದಿನ ಒಟ್ಟು ಮೌಲ್ಯ 62,815 ರೂಪಾಯಿ ಎಂದು ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.