ಪಿಯುಸಿ ಫಲಿತಾಂಶ: ಸರ್ಕಾರಿ ಪ.ಪೂ.ಕಾಲೇಜು ಬೆಟ್ಟಂಪಾಡಿ, ವಿಜ್ಞಾನ ಶೇ90.5, ವಾಣಿಜ್ಯ ಶೇ.92

Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ : ಕಳೆದ ಮಾರ್ಚ್ ಮತ್ತು ಜೂನ್ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಟ್ಟಂಪಾಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ- 575 ಅಂಕಗಳಿಸಿದ ಕಾರ್ತಿಕ್ ಕುಮಾರ್ ಪ್ರಥಮ
ಪರೀಕ್ಷೆಗೆ ಹಾಜರಾದ 136 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 59 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 33 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಕಾರ್ತಿಕ್ ಕುಮಾರ್ ಟಿ 575 ಅಂಕ (ಶೇ. 96) ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ. ಈತನು ಲೆಕ್ಕ ಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ 100 ಕ್ಕೆ 100ಅಂಕ ಗಳಿಸಿರುತ್ತಾನೆ. ಇವರು ಪಡ್ರೆ ಗ್ರಾಮದ ತೊಂಬಡ್ಕದ ದಿ.ಶ್ರೀ ಧರ್ಣಪ್ಪ ಮತ್ತು ಶ್ರೀಮತಿ ಪುಷ್ಪಲತಾ ದಂಪತಿಗಳ ಸುಪುತ್ರ. ವಿಜ್ಞಾನ ವಿಭಾಗದ ಕು. ಹೀತಾಶ್ರೀ ಕೆ.ಬಿ. 555 ಅಂಕ (ಶೇ.92.5%) ಅಂಕಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾಳೆ. ಈಕೆ ಪೇರಿಗೇರಿ, ಕನ್ನಯ ಗ್ರಾಮದ ಶ್ರೀ ಬೆಳಿಯಪ್ಪ ಗೌಡ ಮತ್ತು ಶ್ರೀಮತಿ ಲಲಿತಾ ದಂಪತಿಗಳ ಸುಪುತ್ರಿಯಾಗಿದ್ದಾಳೆ.

ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಹಾಜರಾದ 21 ವಿದ್ಯಾರ್ಥಿಗಳಲ್ಲಿ 1 ವಿಶಿಷ್ಠ ಶ್ರೇಣಿ, 14 ಪ್ರಥಮ, 04 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ 90 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಹಾಜರಾದ 75 ವಿದ್ಯಾರ್ಥಿಗಳಲ್ಲಿ 8 ವಿಶಿಷ್ಠ ಶ್ರೇಣಿ, 35- ಪ್ರಥಮ, 22 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ 92 ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ ಹಾಜರಾದ 40 ವಿದ್ಯಾರ್ಥಿಗಳಲ್ಲಿ 10- ಪ್ರಥಮ, 07 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ 52 ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಕು. ಆಯಿಷತ್ ಸಬಾನ ಕೆ (540), ಅನುಷಾ ಪಿ. (524), ನಾಝ್ಮಬಾನು ಕೆ (522), ಶಿಲ್ಪಾ ಎನ್. (519), ಲಿಖಿತಾ ಕೆ. (518) , ಆಯಿಷತ್ ರಿಫಾನ (517) ಹಾಗೂ ಫಾತಿಮತ್ ರಮ್ಲಾ (510) ಅಂಕಗಳನ್ನು ಗಳಿಸಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು, ಕಾಲೇಜು ಅಭಿವೃದ್ಧಿ ಸಮಿತಿಯವರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.