HomePage_Banner
HomePage_Banner
HomePage_Banner
HomePage_Banner

ಕೋವಿಡ್ 19 ‘ಆಂಟಿಬಾಡಿ ಟೆಸ್ಟ್’ (Covid Rapid AntibodyTest) ಚೇತನಾ ಆಸ್ಪತ್ರೆಯಲ್ಲಿ ಲಭ್ಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಚೇತನಾ ಆಸ್ಪತ್ರೆಯಲ್ಲಿ ಕೋವಿಡ್ 19ರ ರ್‍ಯಾಪಿಡ್ ಆಂಟಿಬಾಡಿ ಟೆಸ್ಟ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯ ಡಾ. ಜೆ.ಸಿ.ಅಡಿಗರವರು ತಿಳಿಸಿದ್ದಾರೆ.

ಕೋವಿಡ್ ಆಂಟಿಬಾಡಿ ಟೆಸ್ಟ್ ವ್ಯಕ್ತಿಯ ರಕ್ತದ ಮಾದರಿಯಿಂದ ಮಾಡುವ ELISA ಟೆಸ್ಟ್ ಆಗಿರುತ್ತದೆ. ಇದರಲ್ಲಿ 2 ವಿಧಗಳಿವೆ. IgM ಆಂಟಿಬಾಡಿ ಇದು ಕೋವಿಡ್ ಸೋಂಕು ತಗುಲಿ ಐದರಿಂದ ಏಳು ದಿನದ ಒಳಗೆ ಟೆಸ್ಟಿಗೆ ಸಿಗುತ್ತದೆ ಹಾಗೂ ಮೊದಲ ವಾರದಲ್ಲಿ ಶೇ.60ಜನರಲ್ಲಿ ಹಾಗೂ ಎರಡನೇ ವಾರದಲ್ಲಿ ಶೇ.90ಜನರಲ್ಲಿ ಟೆಸ್ಟಿಗೆ ಸಿಗುತ್ತದೆ. ಈ ಟೆಸ್ಟ್ ಪಾಸಿಟಿವ್ ಬಂದಲ್ಲಿ 100ರಷ್ಟು ಕೋವಿಡ್-19 ಇದೆಯೆಂದು ಹೇಳಬಹುದು ಹಾಗೂ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಲ್ಲಿ RTPCR ಮೂಲಕ ದೃಢ ಪಡಿಸುವುದು ಮುಖ್ಯವಾಗಿದೆ. ಇನ್ನು IgG ಆಂಟಿಬಾಡಿ ಟೆಸ್ಟ್ ಇದರಲ್ಲಿ ರೋಗಿಯ ರಕ್ತದಲ್ಲಿ ರೋಗನಿರೋಧಕ ಆಂಟಿಬಾಡಿಯನ್ನು ಸೂಚಿಸುತ್ತದೆ ಹಾಗೂ ಕೋವಿಡ್ ರೋಗಿಯು ಗುಣಮುಖರಾದಾಗ ಇದು ರಕ್ತದಲ್ಲಿ ಸಿಕ್ಕುತ್ತದೆ. IgG positive ಇದ್ದಲ್ಲಿ ರೋಗಿಗೆ ಕೋವಿಡ್ 19  ರೋಗ ನಿರೋಧಕ ಶಕ್ತಿ ಇದೆಯೆಂದು ಅರ್ಥ ಹಾಗೂ ಇದು ಯಾವುದೇ ಲಕ್ಷಣ ವಿಲ್ಲದೆ ಕೋವಿಡ್ ರೋಗಿಯಲ್ಲಿ ರೋಗ ಬಂದು ಹೋಗಿದೆ ಎಂದು ಸೂಚಿಸುತ್ತದೆ. ಈ ಟೆಸ್ಟ್ ಕೇವಲ ೩೦ ನಿಮಿಷದಲ್ಲಿ ಫಲಿತಾಂಶ ಸಿಗುತ್ತದೆ. ಇದರ ದರ 1500 ನಿಗದಿಮಾಡಲಾಗಿದೆ. ವೈದ್ಯಕೀಯ ಸಿಬ್ಬಂದಿಗಳಿಗೆ ರಿಯಾಯಿತಿ ಇದ್ದು ಟೆಸ್ಟಿಗೆ ಬರುವವರು ಮಾಸ್ಕ ಧರಿಸಿ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಫಲಿತಾಂಶಕ್ಕಾಗಿ ಅರ್ಧಗಂಟೆ ಕಾಯಬೇಕು. ಈ ಟೆಸ್ಟ್ ICMRನಿಂದ ದೃಢಪಟ್ಟಿದೆ ಎಂದು ಡಾ.ಜೆ.ಸಿ.ಅಡಿಗರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.