Breaking News

ನಿಡ್ಪಳ್ಳಿ ಗ್ರಾಮ ಪಂಚಾಯತ್ ಕೊವಿಡ್-19 ಕಾರ್ಯಪಡೆ ಸಭೆ

Puttur_Advt_NewsUnder_1
Puttur_Advt_NewsUnder_1
ಕೊರೋನಾ ವೈರಸ್ ಬಗ್ಗೆ ಅಂಜಿಕೆ ಬೇಡ, ಆತ್ಮವಿಶ್ವಾಸ ಬೇಕು- ರಾಜಾರಾಮ
ನಿಡ್ಪಳ್ಳಿ:  ನಿಡ್ಪಳ್ಳಿ ಗ್ರಾಮ ಪಂಚಾಯತಿನಲ್ಲಿ ಕೊವಿಡ್-19 ಕಾರ್ಯಪಡೆ ಸಭೆ ಪಂಚಾಯತ್ ಆಡಳಿತಾಧಿಕಾರಿ ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ರಾಜಾರಾಮ ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅವರು ಮಾಹಿತಿ ನೀಡಿ ಕೊರೋನಾ ಸೋಂಕು ತಗುಲದಂತೆ ನಮ್ಮಲ್ಲಿ ಮುಂಜಾಗ್ರತೆ ಮುಖ್ಯ.ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ನಮ್ಮ ಪ್ರಮುಖ ಅಂಗಾಂಗಗಳನ್ನು ಸ್ವಚ್ಚತೆಯಿಂದ ಕಾಪಾಡಿಕೊಂಡು ಬಂದರೆ ವೈರಸ್ ತಗಲುವ ಸಾಧ್ಯತೆ ಕಡಿಮೆ. ಆದುದರಿಂದ ನಾವು ಅಂಜದೆ ಆತ್ಮವಿಶ್ವಾಸದಿಂದ ಧೈರ್ಯದಿಂದ ನಮ್ಮಲ್ಲಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸಲು ಎಲ್ಲರ ಸಹಕಾರ ಅಗತ್ಯ ಎಂದರು.ವೈರಸ್ ವಿರುದ್ಧ ಸದಾ ಹೋರಾಡುತ್ತಿರುವ ಅರೋಗ್ಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯಯರ ಸೇವೆ ಶ್ಲಾಘನೀಯ ಎಂದು ಹೇಳಿದ ಅವರು ಗ್ರಾಮ ಮಟ್ಟದಲ್ಲಿ ಯಾವುದೇ ಸಮಸ್ಯೆ ತೊಂದರೆ ಬಂದಲ್ಲಿ ನಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು. ಹೊರ ರಾಜ್ಯ ಅಥವಾ ಜಿಲ್ಲೆಗಳಿಂದ ಯಾರಾದರೂ ಹೊಸಬರು ಬಂದರೆ ಅವರ ಮೇಲೆ ನಿಗಾ ಇರಿಸಿ ಎಂದು ಹೇಳಿದರು.
ಸಹಕಾರಿ ಸಂಘದ ಸಹಾಯಕ ನಿಬಂಧಕ ಬಿ.ನಾಗೇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಸಂದ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು.ಕಾರ್ಯದರ್ಶಿ ಶಿವರಾಮ, ಕಿರಿಯ ಅರೋಗ್ಯ ಸಹಾಯಕಿ ಕುಸುಮಾವತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು,ಸಂಘ ಸಂಸ್ಥೆಗಳ ಸದಸ್ಯರು, ಸಿಬ್ಬಂದಿಗಳು ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.