Breaking News

ಇನ್‌ಸ್ಟಾಗ್ರಾಂ ಲವ್..! ಪ್ರಿಯತಮನ ಹುಡುಕಿಕೊಂಡು ಬಂದ ಯುವತಿ ಕ್ಷಣಾರ್ಧದಲ್ಲಿ ನಾಪತ್ತೆ..!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆಕೆ ಮತ್ತು ಆತನದ್ದು ಇನ್ಸ್ಟಾಗ್ರಾಂ ಲವ್.. ಅದು ಹೇಗೆ ಲವ್ ಸುರುವಾಯಿತು ಎಂಬುದು ಆಕೆಗೂ ಗೊತ್ತಿಲ್ಲವಂತೆ. ಏನೋ ಕಾರಣಕ್ಕೆ ಆಕೆಯ ಇನ್ಸ್ಟ್ರಾಗ್ರಾಂ ವರ್ಕ್ ಆಗುತ್ತಿಲ್ಲ. ಆಕೆ ಬಳಿ ಆತನ ಮೊಬೈಲ್ ನಂಬರ್ ಇಲ್ಲ. ಆದರೆ ಆತನ ಊರು ಎಲ್ಲಿ ಎಂಬುದು ಆಕೆಗೆ ಗೊತ್ತಿದ್ದು ತನ್ನ ಲವರ್‌ನನ್ನು ಹುಡುಕಿಕೊಂಡು ಆಕೆ ಲಾಕ್ ಡೌನ್ ಟೈಮಲ್ಲೂ ಕುಂಬ್ರಕ್ಕೆ ಬಂದ ಘಟನೆ ಜು.22ರಂದು ಬೆಳಿಗ್ಗೆ ನಡೆದಿದೆ.

ಸುಮಾರು 11.30 ರ ವೇಳೆ ಕುಂಬ್ರಕ್ಕೆ ಬಂದ ಆಕೆ ನಾನು ಮಂಗಳೂರಿನ ಬಜ್ಪೆಯಿಂದ ಬಂದಿದ್ದೇನೆ. ನನ್ನ ಇನ್ಸ್ಟ್ರಾಗ್ರಾಂ ಕೆಟ್ಟು ಹೋಗಿದೆ. ನನ್ನ ಸ್ನೇಹಿತನನ್ನು ಹುಡುಕಿಕೊಂಡು ಬಂದಿದ್ದೇನೆ ಸಹಾಯ ಮಾಡಿ ಎಂದು ಕುಂಬ್ರದಲ್ಲಿದ್ದ ಕೆಲವರಲ್ಲಿ ಹೇಳಿದ್ದಾಳೆ. ಆಕೆಯ ಮನೋಸ್ಥಿತಿಯನ್ನು ಅರಿತ ಯುವಕರು ಆಕೆಯ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಆದರೆ ವಿಚಾರಣೆ ವೇಳೆ ಆಕೆ ಅಸ್ಪಷ್ಟವಾಗಿ ಮಾಹಿತಿ ನೀಡುತ್ತಿದ್ದಳು. ನಿನ್ನ ತಂದೆ ತಾಯಿ ಇಲ್ಲವೇ ಎಂದು ಕೇಳಿದಾಗ ತಂದೆ ಇಲ್ಲ ತಾಯಿ ಮಾತ್ರ ಇರುವುದು ಎಂದು ಹೇಳಿದ ಆಕೆಯ ಬಳಿ ತನ್ನ ತಾಯಿಯ ಮೊಬೈಲ್ ನಂಬರ್ ಕೊಡುವಂತೆ ಕೇಳಿದಾಗ ಆಕೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಬಳಿಕ ಆಕೆ ಎಲ್ಲಿ ಹೋಗುತ್ತಿದ್ದಾಳೆ ಎಂದು ಪರಿಶೀಲನೆ ಮಾಡುವ ವೇಳೆ ಆಕೆ ಕುಂಬ್ರ ಪೇಟೆಗೆ ತಲುಪಿದವಳು ಬಳಿಕ ನಾಪತ್ತೆಯಾಗಿದ್ದಾಳೆ. ಆಕೆ ತನ್ನ ಸ್ನೇಹಿತ ಅಥವಾ ಪ್ರಿಯತಮನ ಜೊತೆ ತೆರಳಿದ್ದಾಳೋ ಎಂಬುದು ಸ್ಪಷ್ಟವಾಗಿಲ್ಲ..

ಲಾಕ್‌ಡೌನ್ ನಿಂದಾಗಿ ಊರಿಗೇ ಊರೇ ಬಾಗಿಲು ಮುಚ್ಚಿದಾಗ ಯುವತಿಯು ಇನ್ಸ್ಟ್ರಾಗ್ರಾಂ ಪರಿಚಯವಾದ ಸ್ನೇಹಿತನನ್ನು ಹುಡುಕಿಕೊಂಡು ಬಂದು ಕುಂಬ್ರ ಪೇಟೆಗೆ ಹೋದವಳು ಎಲ್ಲಿಗೆ ಹೋದಳು ಎಂಬುದೇ ಜನರ ಕುತೂಹಲಕ್ಕೆ ಕಾರಣವಾಯಿತು….

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.