HomePage_Banner
HomePage_Banner
HomePage_Banner

ಚೇತನಾ ಆಸ್ಪತ್ರೆಯಲ್ಲಿ ಕೋವಿಡ್ `Anty Body Test’ ಆರಂಭ

Puttur_Advt_NewsUnder_1
Puttur_Advt_NewsUnder_1
  • ಆಯುರ್ವೇದ ಮದ್ದು ಕಂಡುಹಿಡಿಯಲಾಗಿದೆ ಎಂಬುದು ಸುಳ್ಳು – ಡಾ. ಜೆ.ಸಿ. ಅಡಿಗ

ಪುತ್ತೂರು: ಕೋವಿಡ್ 19ರ ರ್‍ಯಾಪಿಡ್ `Anty Body Test’ ಇಲ್ಲಿನ ಚೇತನಾ ಆಸ್ಪತ್ರೆಯಲ್ಲಿ ಜು.22ರಿಂದ ಆರಂಭವಾಗಿದೆ. ಟೆಸ್ಟ್ ಬಗ್ಗೆ ವಿವರಣೆ ನೀಡಿರುವ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ. ಜೆ.ಸಿ. ಅಡಿಗರವರು `ಕೋವಿಡ್ Anty Body Test ವ್ಯಕ್ತಿಯ ರಕ್ತದ ಮಾದರಿಯಿಂದ ಮಾಡುವ ELISA ಟೆಸ್ಟ್ ಆಗಿರುತ್ತದೆ. IgM Anty Body ಇದು ಕೋವಿಡ್ ಸೋಂಕು ತಗುಲಿ ಐದರಿಂದ ಏಳು ದಿನದ ಒಳಗೆ ಟೆಸ್ಟಿಗೆ ಸಿಗುತ್ತದೆ ಹಾಗೂ ಮೊದಲ ವಾರದಲ್ಲಿ ಶೇ.60 ಜನರಲ್ಲಿ ಹಾಗೂ ಎರಡನೇ ವಾರದಲ್ಲಿ ಶೇ.90 ಜನರಲ್ಲಿ ಟೆಸ್ಟಿಗೆ ಸಿಗುತ್ತದೆ. ಈ ಟೆಸ್ಟ್ ಪಾಸಿಟಿವ್ ಬಂದಲ್ಲಿ 100ರಷ್ಟು ಕೋವಿಡ್-19 ಇದೆಯೆಂದು ಹೇಳಬಹುದು ಹಾಗೂ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಲ್ಲಿ RTPCR ಮೂಲಕ ದೃಢ ಪಡಿಸುವುದು ಮುಖ್ಯವಾಗಿದೆ. IgM Anty Body Test ಇದರಲ್ಲಿ ರೋಗಿಯ ರಕ್ತದಲ್ಲಿ ರೋಗನಿರೋಧಕ Anty Bodyಯನ್ನು ಸೂಚಿಸುತ್ತದೆ ಹಾಗೂ ಕೋವಿಡ್ ರೋಗಿಯು ಗುಣಮುಖರಾದಾಗ ಇದು ರಕ್ತದಲ್ಲಿ ಸಿಕ್ಕುತ್ತದೆ. IgG positive ಇದ್ದಲ್ಲಿ ರೋಗಿಗೆ ಕೋವಿಡ್ 19 ರೋಗ ನಿರೋಧಕ ಶಕ್ತಿ ಇದೆಯೆಂದು ಅರ್ಥ ಹಾಗೂ ಇದು ಯಾವುದೇ ಲಕ್ಷಣವಿಲ್ಲದೆ ಕೋವಿಡ್ ರೋಗಿಯಲ್ಲಿ ರೋಗ ಬಂದು ಹೋಗಿದೆ ಎಂದು ಸೂಚಿಸುತ್ತದೆ. ಈ ಟೆಸ್ಟ್ ICMR ನಿಂದ ದೃಢಪಟ್ಟಿದೆ’ ಎಂದರು.

ಆಯುರ್ವೇದ ಮದ್ದು ಸುಳ್ಳು
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು `ಕೋವಿಡ್‌ಗೆ ಆಯುರ್ವೇದ ಸಹಿತ ಯಾವುದೇ ವಿಧಾನದಲ್ಲಿ ಈವರೆಗೆ ಮದ್ದು ಕಂಡುಹಿಡಿಯಲಾಗಿಲ್ಲ. ಅದೆಲ್ಲಾ ಸುಳ್ಳು’ ಎಂದು ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಧರಿಸುವಿಕೆ, ಸೋಪ್ ಅಥವಾ ಸ್ಯಾನಿಟಸ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೇ ಕೊರೊನಾ ತಡೆಗಟ್ಟಲು ಇರುವ ಮದ್ದು’ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಕೋವಿಡ್ ಚಿಕಿತ್ಸೆಗೆ ಲಕ್ಷಾಂತರ ವೆಚ್ಚ ಯಾಕೆ ?
ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಕೇಳಿ ಬರುತ್ತಿದೆ. ಕೋವಿಡ್‌ಗೆ ಸರಿಯಾದ ಔಷಧಿ ಇನ್ನೂ ಇಲ್ಲದಿದ್ದರೂ ಇಷ್ಟೊಂದು ಖರ್ಚು ಯಾಕೆ ಎಂಬುದಾಗಿ ಹಲವರು ಪ್ರಶ್ನಿಸುತ್ತಾರೆ. ಆದರೆ ಕೋವಿಡ್ ಸೋಂಕಿತ ರೋಗಿಯನ್ನು ಪರೀಕ್ಷಿಸುವ ವೈದ್ಯರಿಂದ ಹಿಡಿದು ದಾದಿಯರೂ ಸಾವಿರಾರು ರೂಪಾಯಿ ವೆಚ್ಚದ ಪಿಪಿಇ ಕಿಟ್ ಮತ್ತಿತರ ಸಾಧನಗಳನ್ನು ಮರುಉಪಯೋಗವಾಗದ ರೀತಿಯಲ್ಲಿ ಬಳಸಬೇಕಾಗುತ್ತದೆ. ಹೀಗಾಗಿ ಓರ್ವ ರೋಗಿಗೆ ಇಷ್ಟೊಂದು ಖರ್ಚು ಕಂಡುಬರುತ್ತದೆ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕಾಗಿದೆ ಎಂದು ಅಡಿಗರು ಹೇಳಿದರು. ಲ್ಯಾಬ್ ಇನ್‌ಚಾರ್ಜ್ ನೋಯಲ್ ಡಿ’ಸೋಜ ಮತ್ತು ಸಿಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.