Breaking News

ಕೆದಂಬಾಡಿ ಶ್ರೀ ಶಿರಾಡಿ ಭಕ್ತವೃಂದದಿಂದ ಶ್ರಮದಾನ, ಸಸಿ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆದಂಬಾಡಿ ಗ್ರಾಮದ ಶ್ರೀ ಶಿರಾಡಿ ಭಕ್ತವೃಂದದ ವತಿಯಿಂದ ಶ್ರಮದಾನ ನಡೆಯಿತು. ಗ್ರಾಮದ ಕೊಡಂಕಿರಿ, ಕುಕ್ಕುಂಜೋಡು, ಮುಂಡಾಲ, ಕಲ್ಲಾಪು ಸಂಪರ್ಕಿಸುವ ಜಿಲ್ಲಾಪಂಚಾಯತ್ ರಸ್ತೆಯ ಇಕ್ಕೆಲಗಳಲ್ಲಿ ಪೊದೆ ತುಂಬಿದ್ದು ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿತ್ತು. ಇದನ್ನು ಭಕ್ತವೃಂದದ ಸದಸ್ಯರು ಹಾಗೂ ಊರವರ ಸಹಾಯದಿಂದ ಶ್ರಮದಾನದ ಮೂಲಕ ಪೊದರು ತೆಗೆದು ಸ್ವಚ್ಛ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಭಕ್ತವೃಂದದ ವತಿಯಿಂದ ಎರಡನೆಯ ಬಾರಿಗೆ ವನಮಹೋತ್ಸವವನ್ನು ಆಚರಿಸಲಾಯಿತು. ಗ್ರಾಮಸ್ಥರಿಗೆ ಸಸಿ ವಿತರಣೆ ಕಾರ್ಯಕ್ರಮ ಬೋಳೋಡಿ ಅಂಗನವಾಡಿ ವಠಾರದಲ್ಲಿ ನಡೆಯಿತು. ಪೆರ್ಲಂಪಾಡಿ ಅರಣ್ಯಾಧಿಕಾರಿ ಸತ್ಯನ್ ರವರು ಹಲವು ಬಗೆಯ ಸಸಿಗಳನ್ನು ನೀಡಿದ್ದರು. ಭಕ್ತ ವೃಂದದ ಗೌರವ ಅಧ್ಯಕ್ಷ ರಾಮ ಕೃಷ್ಣ ರೈ ಕುಕ್ಕುಂಜೋಡು, ಅಧ್ಯಕ್ಷ ಜಗದೀಶ್ ಅಮೀನ್ ಮಾರುತಿಪುರ, ಮಾಜಿ ಅಧ್ಯಕ್ಷ ಮೋಹನ್ ಗೌಡ ಮುಂಡಾಲ, ಚಂದ್ರ ನಲಿಕೆ ಇದ್ಪಾಡಿ,ಪ್ರಮುಖರಾದ ಸೂರ್ಯ ಭಟ್ ಕಲ್ಲಾಪು, ಜಯರಾಮ ಗೌಡ ಮುಂಡಾಲ, ಸುರೇಶ ಪೂಜಾರಿ ಇದ್ಪಾಡಿ, ಮಿಥುನ್ ರೈ ಮುಂಡಾಲ, ಅವಿನಾಶ್ ಬೋಳೋಡಿ, ಕಿರಣ್ ಬೋಳೋಡಿ, ರಾಜೇಶ್ ರೈ ಬಲ್ಲಮಜಲು, ಗೌತಮ್ ರೈ ಮುಂಡಾಲ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.