ಕೋವಿಡ್-19 ರೋಗಿಗಳಿಗೆ ನಿರಂತರ ಪೌಷ್ಠಿಕ ಆಹಾರ | ಇ ಫ್ರೆಂಡ್ಸ್ ವತಿಯಿಂದ ಕಾರುಣ್ಯದ ಸೇವೆ

Puttur_Advt_NewsUnder_1
Puttur_Advt_NewsUnder_1
  • ಅನಾರೋಗ್ಯ ಪೀಡಿತರಿಗೆ ಅನುಕಂಪ ಇತರರಿಗೆ ಮಾದರಿ – ಸಂಜೀವ ಮಠಂದೂರು
  • ಕೋವಿಡ್ ಆರಂಭದಲ್ಲೇ ಸಂಕಷ್ಟದವರಿಗೆ ಸಹಕಾರ – ಡಾ. ಸರ್ಫಾಜ್

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಿಯ ತನಕ ಕೊರೋನಾ ಸೋಂಕಿತರು ದಾಖಲಾಗಿರುತ್ತಾರೋ ಅಲ್ಲಿಯ ತನಕ ಪುತ್ತೂರಿನ ಇ ಫ್ರೆಂಡ್ಸ್ ವತಿಯಿಂದ ನಿರಂತರ ಹಣ್ಣು ಹಂಪಲುಗಳನ್ನೊಳಗೊಂಡ ಪೌಷ್ಠಿಕ ಆಹಾರ ನೀಡುವ ಯೋಜನೆ ಜು.23ರಂದು ಆರಂಭಗೊಂಡಿದ್ದು, ಶಾಸಕ ಸಂಜೀವ ಮಠಂದೂರು ಅದಕ್ಕೆ ಚಾಲನೆ ನೀಡಿದರು.

ಅನಾರೋಗ್ಯ ಪೀಡಿತರಿಗೆ ಅನುಕಂಪ ಇತರರಿಗೆ ಮಾದರಿ:
ಶಾಸಕ ಸಂಜೀವ ಮಠಂದೂರು ಅವರು ಕೋವಿಡ್ ರೋಗಿಗಳಿಗೆ ಇ ಫ್ರೆಂಡ್ಸ್‌ನಿಂದ ಕೊಡುವಂತಹ ಹಣ್ಣು ಹಂಪಲುಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿ ಹಸಿದವನಿಗೆ ಅನ್ನ ಕೊಡುವುದು ದೊಡ್ಡ ಧರ್ಮ. ಅದೇ ರೀತಿ ಅನಾರೋಗ್ಯ ಪೀಡಿತರಿಗೆ ಮಾನವೀಯತೆ ನೆಲೆಯಲ್ಲಿ ಸಹಕಾರ ನೀಡುವಂತಹ ಮಹತ್ವದ ಸೇವೆಯನ್ನು ಇ ಫ್ರೆಂಡ್ಸ್ ತಂಡ ಮಾಡಿರುವುದು ಮಾದರಿ ಕೆಲಸವಾಗಿದೆ. ಖಾಯಿಲೆ ಬಂದಾಗ ವೈದ್ಯರು ಚಿಕಿತ್ಸೆ ನೀಡುತ್ತಾರೆ. ದಾದಿಯರು ಸುಶ್ರುಶಕರು ಆರೈಕೆ ಮಾಡುತ್ತಾರೆ. ಆದರೆ ಇವತ್ತು ಕೋವಿಡ್ ರೋಗಿಯ ಆರೈಕೆ ಮಾಡುವ ಕಷ್ಟದ ಸಂದರ್ಭದಲ್ಲೂ ಆರೋಗ್ಯ ಇಲಾಖೆ ಉತ್ತಮ ಸೇವೆ ನೀಡುತ್ತಿದೆ. ಇದರ ಜೊತೆ ರೋಗಿಗಳಿಗೆ ಒಂದಷ್ಟು ಪೌಷ್ಠಿಕ ಆಹಾರ ತೆಗೆದುಕೊಂಡರೆ ರೋಗ ನಿರೋಧ ಶಕ್ತಿವೃದ್ಧಿಸಲು ಸಹಕಾರಿಯಾಗುತ್ತದೆ. ಇದನ್ನು ಮನಗಂಡು ಇ ಫ್ರೆಂಡ್ಸ್ ಸಮಾಜಮುಖಿ ಕೆಲಸ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದ ಅವರು ಇದೊಂದು ಖಾಯಿಲೆ ಪೀಡಿತರಿಗೆ ಅನುಕಂಪ ತೋರಿಸುವ ಕೆಲಸ ಆಗಿದೆ ಎಂದರು.

ಕೋವಿಡ್ ಆರಂಭದಲ್ಲೇ ಸಂಕಷ್ಟದವರಿಗೆ ಸಹಕಾರ:
ಇ ಫ್ರೆಂಡ್ಸ್‌ನ ಅಧ್ಯಕ್ಷ ಡಾ. ಸರ್ಫಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೋವಿಡ್ ಆರಂಭ ಆಗುವ ಸಂದರ್ಭ ಲಾಕ್‌ಡೌನ್‌ಗೆ ಮುಂಚೆಯೇ ಇ ಫ್ರೆಂಡ್ಸ್ ತಂಡ ಸಮಾಜದ ಸಂಕಷ್ಟದ ಜನರಿಗೆ ಸ್ಪಂಧನೆ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಿ, ನಿರ್ಗತಿಕರನ್ನು ಹುಡುಕಿ ಅವರಿಗೆ ಕಿಟ್ ಕೊಡುವ ಕೆಲಸ ಮಾಡಿದೆ. ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದ ಕೊರತೆ ಉಂಟಾದಾಗಲು ಎರಡು ಬಾರಿ ರಕ್ತದಾನ ಮಾಡಿದ್ದೇವೆ. ಮುಂದೆ ರಕ್ತದ ಕೊರತೆ ಆಗಬಾರದು ಎಂದು ಅದಕ್ಕಾಗಿ ನಮ್ಮ ವಾಟ್ಸಾಪ್ ಗ್ರೂಪ್ ಮಾಡಿ ಅದರ ಮೂಲಕ ರಕ್ತದಾನಕ್ಕೆ ಸಹಕಾರ ನೀಡುತ್ತಿದ್ದೇವೆ. ಸದಾ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ಪೂರ್ಣ ಸಹಕಾರ ನೀಡುವ ನಮ್ಮ ತಂಡ ಕೋವಿಡ್ ಸಂದರ್ಭದಲ್ಲಿ ಕೋವಿಡ್ ರೋಗಿಗಳ ಧೈರ್ಯ ತುಂಬುವ ಕೆಲಸಕ್ಕೆ ಆದ್ಯತೆ ನೀಡುವ ಮೂಲಕ ಸರಕಾರಿ ಅಸ್ಪತ್ರೆಯಲ್ಲಿ ಇರುವ ಕೊರೋನಾ ರೋಗಿಗಳಿಗೆ ನಿರಂತರ ಹಣ್ಣುಹಂಪಲುಗಳನ್ನು ನೀಡಲಾಗುತ್ತದೆ ಎಂದರು.

ಇ ಫ್ರೆಂಡ್ಸ್‌ನ ಕಾರ್ಯದರ್ಶಿ ರಿಯಾಝ್, ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಪುತ್ತೂರಾಯ, ಡಾ. ಜಯದೀಪ್, ಡಾ. ಜೈನಾಬಿ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು, ಇ ಫ್ರೆಂಡ್ಸ್‌ನ ಉಪಾಧ್ಯಾಕ್ಷ ಹಾರೀಫ್, ಸದಸ್ಯರಾದ ಇಮ್ತಿಯಾಜ್, ಇಸ್ಮಾಯಿಲ್, ಹಾರಿಪ್, ರಿಯಾಜ್, ಮುಝಾಮಿಲ್, ಇಕ್ಬಾಲ್, ರಜಾಕ್, ಶಾಕೀರ್, ಸೈಪ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.