ಕಡಬ, ಉಪ್ಪಿನಂಗಡಿ, ಪುತ್ತೂರು ನಗರ, ತಿಂಗಳಾಡಿ, ನೆಲ್ಯಾಡಿ, ಸರ್ವೆ ಆರೋಗ್ಯ ಕೇಂದ್ರಗಳ ವ್ಯಾಪ್ತಿ ‘ಹೈ ರಿಸ್ಕ್‌ ಏರಿಯಾ’

Puttur_Advt_NewsUnder_1
Puttur_Advt_NewsUnder_1

ಕೊರೋನಾ ವಾರಿಯರ್ಸ್ ತಂಡದಿಂದ ಮನೆಭೇಟಿ ಪಲ್ಸ್‌  ಓಕ್ಸಿ ಮೀಟರ್ ಪರೀಕ್ಷೆಗೆ ಸಿದ್ಧತೆ

ಪುತ್ತೂರು: ಎರಡಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿರುವ ಪುತ್ತೂರು ಮತ್ತು ಕಡಬ ತಾಲೂಕಿನ ಆರು ಆರೋಗ್ಯ ಕೇಂದ್ರಗಳ ವ್ಯಾಪ್ತಿಯನ್ನು ಕೊರೊನಾ ಸೋಂಕು ಪ್ರಕರಣಗಳ ಹೈ ರಿಸ್ಕ್ ಏರಿಯಾ ಎಂದು ಗುರುತಿಸಲಾಗಿದ್ದು, ಈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಕೊರೋನಾ ವಾರಿಯರ್ಸ್ ತಂಡ ಭೇಟಿ ಮಾಡಿ ’ಪಲ್ಸ್ ಓಕ್ಸಿ ಮೀಟರ್’ ಪರೀಕ್ಷೆ ನಡೆಸಲಿದ್ದು ಈಗಾಗಲೇ ಕೊರೋನಾ ವಾರಿಯರ್ಸ್ ಕಾರ್ಯಪ್ರವೃತ್ತರಾಗಿದ್ದಾರೆ.


ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿ ಸರಣಿ ಪರೀಕ್ಷಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕಡಬ ಸಮುದಾಯ ಆರೋಗ್ಯ ಕೇಂದ್ರ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ, ಪುತ್ತೂರು ನಗರ, ತಿಂಗಳಾಡಿ, ನೆಲ್ಯಾಡಿ, ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯನ್ನು ಹೈ ರಿಸ್ಕ್ ಏರಿಯಾ ಎಂದು ಗುರುತಿಸಲಾಗಿದೆ. ಇಲ್ಲಿ ಎರಡಕ್ಕಿಂತ ಹೆಚ್ಚಿನ ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಡಾ. ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಎರಡು ಸಮುದಾಯ ಆರೋಗ್ಯ ಕೇಂದ್ರ ಮತ್ತು ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸರಣಿ ಸಭೆಗಳನ್ನು ನಡೆಸಿ ತಪಾಸಣಾ ಅಭಿಯಾನ ಆರಂಭಿಸಲಾಗಿದೆ. ಇದಕ್ಕಾಗಿ ಪುತ್ತೂರು, ಕಡಬ ತಾಲೂಕಿಗೆ ೧೬೯ ಪಲ್ಸ್ ಓಕ್ಸಿ ಮೀಟರ್ ಬಂದಿದೆ. ಮುಂದಿನ ಒಂದು ವಾರ ಕಾಲ ನಿರಂತರವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿಯವರು ತಿಳಿಸಿದ್ದಾರೆ. ಮನೆ ಮನೆ ಭೇಟಿ ಸಂದರ್ಭದಲ್ಲಿ ಅಲ್ಲಿರುವವರಲ್ಲಿ ಉಸಿರಾಟದ ಸಮಸ್ಯೆ, ಜ್ವರ ಮತ್ತಿತರ ಲಕ್ಷಣಗಳನ್ನು ಕೇಳಿ ತಿಳಿದುಕೊಂಡು ಪಲ್ಸ್ ಓಕ್ಸಿ ಮೀಟರ್ ಪರೀಕ್ಷೆಗೆ ಒಳಪಡಿಸಲಾಗುವುದು. ಈ ನಿಟ್ಟಿನಲ್ಲಿ ಯಾರಿಗೂ ಯಾವುದೇ ಗೊಂದಲ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಂಕಿತರಾಗಿದ್ದರೆ ಗಂಟಲು ದ್ರವ ಮಾದರಿ ಸಂಗ್ರಹ:
ಕೊರೋನಾ ಹೈ ರಿಸ್ಕ್ ಏರಿಯಾದ ೬ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಕೊರೋನಾ ವಾರಿಯರ್ಸ್ ತಂಡ ಭೇಟಿ ನೀಡಲಿದೆ. ಪ್ರತೀ ತಂಡದಲ್ಲಿ ಒಬ್ಬರು ಅಂಗನವಾಡಿ ಕಾರ್ಯಕರ್ತೆ ಮತ್ತು ಒಬ್ಬರು ಆಶಾ ಕಾರ್ಯಕರ್ತೆ ಇರಲಿದ್ದಾರೆ. ಇವರು ತಮ್ಮ ಜತೆಯಲ್ಲಿನ ಪಲ್ಸ್ ಓಕ್ಸಿ ಮೀಟರ್ ಮೂಲಕ ಮನೆ ಮನೆ ಭೇಟಿ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಇರುವವರನ್ನು ಉಸಿರಾಟ ಪರೀಕ್ಷೆಗೆ ಒಳಪಡಿಸುತ್ತಾರೆ. ಪಲ್ಸ್ ಓಕ್ಸಿ ಮೀಟರ್ ಮೂಲಕ ಉಸಿರಾಟದ ಏರಿಳಿತವನ್ನು ಪರೀಕ್ಷಿಸಿ ವ್ಯಕ್ತಿಗೆ ಉಸಿರಾಟದ ಸಮಸ್ಯೆ ಇದ್ದಲ್ಲಿ ಕೊರೋನಾ ಲಕ್ಷಣ ಎಂದು ದಾಖಲಿಸಿ, ಅವರನ್ನು ಮುಂದಿನ ಹಂತದ ಪರೀಕ್ಷೆಗೆ ಶಿಫಾರಸ್ಸು ಮಾಡುತ್ತಾರೆ. ಮುಂದಿನ ಹಂತದಲ್ಲಿ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಅದರಲ್ಲಿ ಪಾಸಿಟಿವ್ ಬಂದಲ್ಲಿ ಮಾತ್ರ ಕೊರೋನಾ ಪೀಡಿತರು ಎಂದು ಗುರುತಿಸಲಾಗುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.