Breaking News

ಉಪ್ಪಿನಂಗಡಿಯ ಪಂಜಾಳದಲ್ಲಿ “ಶಾಲಿವಾಹನ ಫ್ಯೂಯಲ್ಸ್” ಲೋಕಾರ್ಪಣೆ | ಅಡಿಕೆ, ಕೊಕ್ಕೋ ಬೆಳೆಗಾರನಿಂದ ಆಧುನಿಕತೆಯ ಹಸಿರೀಕರಣ-ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಜಾಳ ಎಂಬಲ್ಲಿ ನೇತ್ರಾವತಿ ನದಿ ಕಿನಾರೆಯ ಮಡಿಲಿನಲ್ಲಿ, ಪ್ರಾಕೃತಿಕ ಸೌಂದರ್ಯದೊಂದಿಗೆ ಆಕರ್ಷಿಸುತ್ತಿರುವ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡಿರುವ “ಶಾಲಿವಾಹನ ಫ್ಯೂಯಲ್ಸ್” ಸಂಸ್ಥೆ ಜು. ೨೪ರಂದು ಲೋಕಾರ್ಪಣೆಗೊಂಡಿತು.
ನೂತನ ಸಂಸ್ಥೆಯನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಾಮಾನ್ಯವಾಗಿ ಪೆಟ್ರೋಲ್ ಬಂಕ್‌ನ್ನು ಬೃಹತ್ ಉದ್ಯಮಿಗಳು, ಬಂಡವಾಳಶಾಹಿಗಳು ಮಾಡುವಂತದ್ದು ಸಹಜ. ಆದರೆ ಅಡಿಕೆ, ಕೊಕ್ಕೊ ಬೆಳೆಗಾರರಾಗಿ, ಪ್ರಗತಿಪರ ಕೃಷಿಕರಾಗಿದ್ದು ಇದೀಗ ಪೆಟ್ರೋಲ್ ಬಂಕ್ ಮಾಡಿ ವಿದ್ಯಾವಂತ ಯುವಕರಿಗೆ ಪ್ರೇರಣೆಯಾಗಿ ಆಧುನಿಕತೆಯ ಹಸಿರೀಕರಣ ಮಾಡಿದ್ದಾರೆ, ಇವರ ಉದ್ಯಮಕ್ಕೆ ಸರ್ವರೂ ಸಹಕಾರ ನೀಡಬೇಕು, ಆ ಮೂಲಕ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಮಾಲಕ ಚಂದ್ರಶೇಖರ ಭಟ್ ತಾಳ್ತಜೆ ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿ ಮಾತನಾಡಿ ನಮ್ಮ ಈ ಸಂಸ್ಥೆ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ ಅಧಿಕೃತ ವಿತರಣಾ ಸಂಸ್ಥೆಯಾಗಿದ್ದು, ಪರಿಶುದ್ಧತೆ ಮತ್ತು ಪ್ರಮಾಣದಲ್ಲಿ ಬದ್ಧತೆಯೊಂದಿಗೆ ಉಚಿತ ನೈಟ್ರೋಜಿನ್ ವ್ಯವಸ್ಥೆ ಹೊಂದಿರುತ್ತದೆ. ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ಭದ್ರತೆಗಾಗಿ ಸಿಸಿ. ಕೆಮರಾ ಅಳವಡಿಸಲಾಗಿದೆ. ಯುಪಿಐ., ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡು ಸೌಲಭ್ಯ ಇದ್ದು, ಶುದ್ಧೀಕರಿಸಿದ ಬಿಸಿ, ಸಾದಾ, ತಂಪಾದ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛ ಶೌಚಾಲಯ ಹೊಂದಿರುತ್ತದೆ ಮತ್ತು ಸೋಲಾರ್, ಜನರೇಟರ್, ವಿದ್ಯುತ್ ಈ ಮೂರೂ ಬಗೆಯ ಶಕ್ತಿ ಇರುವುದರಿಂದಾಗಿ ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ಸದಾ ನಗುಮೊಗದೊಂದಿಗೆ ದಿನದ ೨೪ ತಾಸು ಸೇವೆ ಲಭ್ಯ ಇರುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಉಪ್ಪಿನಂಗಡಿ ಪದ್ಮವಿದ್ಯಾ ಪೆಟ್ರೋಲ್ ಬಂಕ್ ಮಾಲಕ ಏಕವಿದ್ಯಾದರ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬೇಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಕುಂಬಾರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ, ಕಾರ‍್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ, ಉಪ್ಪಿನಂಗಡಿ ಸಹಕಾರಿ ಬೇಂಕ್ ಅಧ್ಯಕ್ಷ ಕೆ.ವಿ. ಪ್ರಸಾದ್ ಕಾಯರ್‌ಪಾಡಿ, ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಮಾಜಿ ನಿರ್ದೇಶಕ ಅಜೀಜ್ ಬಸ್ತಿಕ್ಕಾರ್, ಪುತ್ತೂರು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ. ನಿರ್ದೇಶಕ ಮೇದಪ್ಪ ಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತ ಕೃಷ್ಣ ಆಚಾರ್ಯ, ಮಾಜಿ ಸದಸ್ಯ ಎನ್. ಉಮೇಶ್ ಶೆಣೈ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ. ಅಬ್ದುಲ್ ರಹಿಮಾನ್, ರಾಮಚಂದ್ರ ಮಣಿಯಾಣಿ, ಮಾಜಿ ಸದಸ್ಯರುಗಳಾದ ಸುರೇಶ್ ಅತ್ರಮಜಲು, ಚಂದ್ರಶೇಖರ ಮಡಿವಾಳ, ಹರೀಶ್ ನಟ್ಟಿಬೈಲ್, ಬಜತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧನಂಜಯ ಬೆದ್ರೋಡಿ, ಉಪಾಧ್ಯಕ್ಷ ಗಣೇಶ್ ಕುಲಾಲ್, ಉಪ್ಪಿನಂಗಡಿ ವರ್ತಕ ಸಂಘದ ಮಾಜಿ ಅಧ್ಯಕ್ಷ ಯು.ಜಿ. ರಾಧಾ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ರಾಧಾಕೃಷ್ಣ ನಾಯಕ್, ಸುಂದರ ಗೌಡ, ಆಲಂಕಾರು ಭಾರತೀ ಶಾಲಾ ಸಮಿತಿ ಅಧ್ಯಕ್ಷ ಅತ್ರಿಜಾಲ್ ಕೃಷ್ಣ ಕುಮಾರ್, ಉದ್ಯಮಿಗಳಾದ ಕೆ.ಎಸ್. ಸತೀಶ್ ನೆಲ್ಯಾಡಿ, ಶ್ಯಾಮ್ ಪ್ರಸಾದ್, ಮಹೇಂದ್ರ ವರ್ಮ, ಶರತ್ ಪದ್ಮುಂಜ, ಪ್ರಕಾಶ್, ಕೃಷ್ಣರಾಜ್, ಜಯಂತ ಪೊರೋಳಿ, ಸ್ಥಳೀಯ ಪ್ರಮುಖರಾದ ಶ್ರೀಮತಿ ಉಷಾ ಮುಳಿಯ, ಶ್ರೀಮತಿ ಪಿ.ಜಿ. ಸವಿತಾ ಭಟ್, ನಝೀರ್ ಮಠ, ನಾಸಿರ್ ಮಠ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಶ್ರೀಮತಿ ಗೀತಾಲಕ್ಷ್ಮಿ ತಾಳ್ತಜೆ ಸ್ವಾಗತಿಸಿ, ವಂದಿಸಿದರು. ಅತುಲ ಕಾಶ್ಯಪ್, ಅಕ್ಷರ ಕಾಶ್ಯಪ್ ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು. ಡಾ. ತಾಳ್ತಜೆ ವಸಂತ ಕುಮಾರ್ ಕಾರ‍್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.