ರಾಜ್ಯಮಟ್ಟದ ಆನ್‌ಲೈನ್ ನೃತ್ಯ ಸ್ಪರ್ಧೆ | ನೆಲ್ಯಾಡಿ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಕುಶಾಲಪ್ಪ ನಮ್ಮ ಕಲಾವಿದೆರ್ ಹಾಗೂ ಶ್ರವಣ್ ಶೆಟ್ಟಿ ನೆಲ್ಯಾಡಿ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇದರ ಕಲಾರತ್ನಗಳು ವಿವಿಧೆಡೆ ನಡೆದ ಆನ್‌ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ.


ರಾಜ್ಯಮಟ್ಟದಲ್ಲಿ ಪ್ರಥಮ:
ನವಪರ್ವ ಫೌಂಡೇಶನ್ ಬೆಂಗಳೂರು ಇವರು ನಡೆಸಿದ ’ಕನ್ನಡ ಬೃಂದಾವನ ಹೆಜ್ಜೆಗೊಂದು ಗೆಜ್ಜೆ’ ಆನ್‌ಲೈನ್ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ವೇತಾ ಮುಳಿಂಗಾರು ನೆಲ್ಯಾಡಿ, ಅರ್ಚನಾ ಎಸ್. ಸಂಪ್ಯಾಡಿ ಶಿಬಾಜೆ, ಕೃತಿಕಾ ಬಿ.ವಿ. ಉಡ್ಡೈರೆ ಅರಸಿನಮಕ್ಕಿ, ಸುದೀಕ್ಷಾ ವಿ ಆಲಂಪಾಡಿ ನೆಲ್ಯಾಡಿ, ಸನುಷಾ ಬೂಡುಮುಗೇರು ಅರಸಿನಮಕ್ಕಿ ಹಾಗೂ ಪ್ರಣಮ್ಯ ಡಿ ಪಡ್ಡಾಯಿಬೆಟ್ಟು ಅರಸಿನಮಕ್ಕಿ ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ ಗುರುಕುಲ ಕಲಾಮಂಡಳಿ ಯುನೈಟೆಡ್ ಕಿಂಗ್‌ಡಮ್ ಡ್ಯಾನ್ಸ್ ಕ್ರಿವ್ ಮಡಿಕೇರಿ ನಾಪೋಕ್ಲು ಇವರು ನಡೆಸಿದ ’ವೈರಸ್ ವಾರ್-೨೦೨೦’ ಭರತನಾಟ್ಯ ಶಾಸ್ತ್ರೀಯ ನೃತ್ಯ ಸ್ಪರ್ಧೆಯ ಕಿರಿಯ ವಿಭಾಗದಲ್ಲಿ ಸನುಷಾ ಪ್ರಥಮ, ಮಡಿಲು ಸಾಂಸ್ಕೃತಿಕ ಟ್ರಸ್ಟ್ ಮಂಗಳೂರು ಇವರು ನಡೆಸಿದ ಡ್ಯಾನ್ಸಿಂಗ್ ಸ್ಟಾರ್ ಸ್ಪರ್ಧೆಯಲ್ಲಿ ಅರ್ಚನಾ ಎಸ್.ದ್ವಿತೀಯ, ಜೆಸಿಐ ಮಂಗಳೂರು ಲಾಲ್‌ಬಾಗ್ ಘಟಕ ಆಯೋಜಿಸಿದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ಸನುಷಾ ಪ್ರಥಮ, ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೆಶಿವಾಲಯ ಇವರು ನಡೆಸಿದ ’ನೆಟ್ ಸ್ಟಾರ್’ ನೃತ್ಯ ಸ್ಪರ್ಧೆಯಲ್ಲಿ ಸನುಷಾ ತೃತೀಯ ಸ್ಥಾನ, ಎಆರ್‌ಡಿಸಿ ಗೋಣಿಕೊಪ್ಪಳ್ ಕೊಡಗು ಇವರು ನಡೆಸಿದ ಮಾನ್ಸೂನ್ ಮೂವ್ಸ್ ಸೀಸನ್-೧ ಸ್ಪರ್ಧೆಯಲ್ಲಿ ಅಪ್ ಕಮಿಂಗ್ ಡ್ಯಾನ್ಸರ್ ಎಂಬ ಗೌರವವನ್ನು ಅರ್ಚನಾ ಎಸ್.ರವರು ಪಡೆದುಕೊಂಡಿದ್ದಾರೆ. ಕಲಾರತ್ನಗಳಿಗೆ ಅಕ್ಷಯ್ ಎಚ್.ಬಿ.ಪುತ್ತೂರು, ನಾಟ್ಯ ವಿದೂಷಿ ಹಿಮಾ ಹೊನ್ನಪ್ಪ ಗೌಡ, ಸುಮಂತ್ ಆಚಾರ್ಯ ಪೂಂಜಾಲ್‌ಕಟ್ಟೆಯವರು ನೃತ್ಯ ನಿರ್ದೇಶನ ನೀಡಿದ್ದರು. ಕಿರಣ್ ಮುರಳಿ ಮುರಳಿ ಬ್ರದರ‍್ಸ್ ಪುತ್ತೂರು ಇವರು ಸಹ ನಿರ್ದೇಶನ ನೀಡಿದ್ದರು. ನೆಲ್ಯಾಡಿಯ ಯತಿ ಸ್ಟುಡಿಯೋದ ಯತೀಶ್ ಶೆಟ್ಟಿಯವರು ನೃತ್ಯ ಸ್ಪರ್ಧೆಯ ವಿಡಿಯೋ ಚಿತ್ರೀಕರಣ ಮಾಡಿದ್ದರು. ಶ್ರೀ ಕ್ಷೇತ್ರ ಓಟ್ಲ ಬ್ರಹ್ಮಬೈದೆರ್ ಗರಡಿ ಶಿಶಿಲ, ಅನಿಲ್ ರೈ ಹಾರ್ಪಳ, ಪ್ರಕಾಶ್ ರಾಮನಗರ ಸಹಕಾರ ನೀಡಿದ್ದರು.

ಮಕ್ಕಳ ಭಾವಚಿತ್ರ ಸ್ಪರ್ಧೆ:
ಸಂಸ್ಕೃತ ಸಿರಿ ಹಾಗೂ ಆಮಂತ್ರಣ ಇವರು ಆಯೋಜಿಸಿದ ರಾಜ್ಯಮಟ್ಟದ ಮಕ್ಕಳ ಭಾವಚಿತ್ರ ಸ್ಪರ್ಧೆಯಲ್ಲಿ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ಕಲಾರತ್ನಗಳಾದ ೮ ವರ್ಷದ ಮಕ್ಕಳ ಭಾವಚಿತ್ರ ಸ್ಪರ್ಧೆಯಲ್ಲಿ ಸಾನ್ವಿ ಹೊಸ ಮಜಲು ನೆಲ್ಯಾಡಿ, ಹಿಮಾನಿ ರಾಮನಗರ ಬಲ್ಯ, ೭ ವರ್ಷದ ಮಕ್ಕಳ ಭಾವಚಿತ್ರ ಸ್ಪರ್ಧೆಯಲ್ಲಿ ಕೆ.ಎಲ್.ಪ್ರಥಮ್ ರೈ ಕೇಳ್ಕ ರಾಮಕುಂಜ, ಆತ್ಮೀ ಜೆ.ಶೆಟ್ಟಿ ಗೋಳಿತ್ತೊಟ್ಟು, ೪ ವರ್ಷದ ಮಕ್ಕಳ ಭಾವಚಿತ್ರ ಸ್ಪರ್ಧೆಯಲ್ಲಿ ಸನ್ನಿಧಿ ಬೂಡುಮುಗೇರು ಅರಸಿನಮಕ್ಕಿಇ, ೩ ವರ್ಷದ ಮಕ್ಕಳ ಭಾವಚಿತ್ರ ಸ್ಪರ್ಧೆಯಲ್ಲಿ ಕೆ.ಎಲ್.ಪ್ರಣಾಮ್ ರೈ ಕೇಳ್ಕ ರಾಮಕುಂಜ ಹಾಗೂ ದೃಶ್ಯ ಹೊಸಮಜಲು ನೆಲ್ಯಾಡಿ, ೨ ವರ್ಷದ ಮಕ್ಕಳ ಭಾವಚಿತ್ರ ಸ್ಪರ್ಧೆಯಲ್ಲಿ ಆವನಿ ಎಸ್.ಶೆಟ್ಟಿ ನೆಲ್ಯಾಡಿ ಇವರು ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.