ಜಾಲ್ಸೂರು ಶಾಖಾಧಿಕಾರಿಯಿಂದ ಕಿರಿಯ ಪವರ್‌ಮ್ಯಾನ್‌ಗೆ ಬೆದರಿಕೆ | ಪುತ್ತೂರು ಮೆಸ್ಕಾಂ ಕಚೇರಿಯಲ್ಲಿ ನ್ಯಾಯಕ್ಕಾಗಿ ಜಮಾಯಿಸಿದ ಪವರ್‌ಮೆನ್‌ಗಳು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೆಸ್ಕಾಂ ಜಾಲ್ಸೂರು ಶಾಖಾಧಿಕಾರಿಯೊಬ್ಬರು ಮೆಸ್ಕಾಂ ಕಿರಿಯ ಪವರ್‌ಮ್ಯಾನ್ ಒಬ್ಬರಿಗೆ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಮೆಸ್ಕಾಂ ಪವರ್‌ಮೆನ್‌ಗಳು ಕವಿಪ್ರನಿ ನೌಕರರ ಸಂಘದ ಮೂಲಕ ಜು. 24ರಂದು ಪುತ್ತೂರು ಮೆಸ್ಕಾಂ ಕಾರ್ಯನಿವಾಹಕ ಇಂಜಿನಿಯರ್ ಕಚೇರಿ ಮುಂದೆ ನ್ಯಾಯಕ್ಕಾಗಿ ಜಮಾಯಿಸಿದ ಮತ್ತು ಘಟನೆಯ ಕುರಿತು ಸರಿಯಾದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.


ಜಾಲ್ಸೂರು ಶಾಖಾಧಿಕಾರಿಯವರಾದ ಕೆ.ವಿ.ಪ್ರಸಾದ್ ಅವರು ನನಗೆ ಬೆದರಿಕೆ ಒಡ್ಡಿದ್ದಾರೆ ಎಂದು ಕಿರಿಯ ಪವರ್‌ಮ್ಯಾನ್ ಫಿರೋಜಪ್ಪ ನಾಟೀಕಾರ ಅವರು ದೂರಿದ್ದಾರೆ. ನಾನು ಕಳೆದ ನಾಲ್ಕೈದು ವರ್ಷಗಳಿಂದ ಜಾಲ್ಸೂರು ಶಾಖೆಯಲ್ಲಿ ಕಿರಿಯ ಪವರ್‌ಮ್ಯಾನ್ ಆಗಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಜು.೧೫ರಂದು ನಡೆದ ಕವಿಪ್ರನಿ ನೌಕರರ ಸಂಘದ ೨೧ನೇ ತ್ರೈಮಾಸಿಕ ಮಹಾ ಅಧಿವೇಶನದ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ ವೇಳೆ ನನ್ನ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಅರುಣಾ ಶೆಟ್ಟಿ ಎಂಬವರು ಅವಿರೋಧವಾಗಿ ಆಯ್ಕೆಗೊಂಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಜಾಲ್ಸೂರು ಶಾಖಾಧಿಕಾರಿ ಕೆ.ವಿ. ಪ್ರಸಾದ್ ಅವರು ನನಗೆ ದೂರವಾಣಿ ಕರೆ ಮಾಡಿ ಅವಾಚ್ಯವಾಗಿ ನಿಂಧಿಸಿದ್ದಾರೆ. ಜು.೨೩ರಂದು ಸಂಜೆ ಸುಳ್ಯ ಶಾಖೆಯ ಅರುಣ ಶೆಟ್ಟಿ ಮತ್ತು ಬಾಲಸುಬ್ರಹ್ಮಣ್ಯ ಅವರು ನನ್ನ ವಾಸದ ಮನೆಗೆ ಬಂದು ನನಗೆ ಮೌಖಿಕವಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಇದರಿಂದಾಗಿ ನನ್ನ ಪತ್ನಿ ಮಾನಸಿಕವಾಗಿ ಕುಗ್ಗಿದ್ದು, ನಮಗೆ ಕೆಲಸವೇ ಬೇಡ, ಊರೇ ಬೇಡ ಎಂದು ತೀರ್ಮಾಣಿಸಿದ್ದಾರೆ. ಹಾಗಾಗಿ ನನಗೆ ನ್ಯಾಯ ಕೊಡಿಸುವಂತೆ ಅವರು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅವರು ನೀಡುವ ದೂರಿನ ಕುರಿತಂತೆ ಅವರಿಗೆ ಬೆಂಬಲವಾಗಿ ಬನ್ನೂರಿನಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಸುಮಾರು ನೂರಕ್ಕೂ ಅಧಿಕ ಪವರ್‌ಮೆನ್‌ಗಳು ಜಮಾಯಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.