ಕಳೆದ 4 ವರ್ಷಗಳಿಂದ ಕುದ್ಲೂರು ಗ್ರಾಮಸ್ಥರಿಗೆ ನೆಟ್‌ವರ್ಕ್ ಸಮಸ್ಯೆ | ಶಾಸಕರಿಗೆ ಹೇಳಿ ಸಾಕಾಯಿತು – ಪ್ರಧಾನಿಗೂ ಮನವಿ

Puttur_Advt_NewsUnder_1
Puttur_Advt_NewsUnder_1

ಆನ್‌ಲೈನ್ ಕ್ಲಾಸ್: ನೆಟ್‌ವರ್ಕ್‌ಗಾಗಿ ಗುಡ್ಡ ಹತ್ತಿದ ವಿದ್ಯಾರ್ಥಿಗಳು

[email protected] ಐ.ಕೆ ಪುತ್ತೂರು

ಪುತ್ತೂರು: ಕಡಬ ತಾಲೂಕಿನ ಸುಮಾರು 500ಕ್ಕೂ ಮಿಕ್ಕಿ ನಿವಾಸಿಗಳಿರುವ ಕುದ್ಲೂರು ಎಂಬಲ್ಲಿ ಕಳೆದ ನಾಲ್ಕೈದು ವರುಷಗಳಿಂದ ಯಾವುದೇ ಸಿಮ್‌ಗಳ ನೆಟ್‌ವರ್ಕ್ ಸಮಸ್ಯೆ ತಲೆದೋರಿದ್ದು, ಇದರಿಂದ ಊರವರು ಕೂಡಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಮನಗಂಡು ಸರಿದೋಗಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಸೇರಿ ಮನವಿಗಳನ್ನು ನೀಡಿದರು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸದಿರುವುದರಿಂದ ಮತ್ತಷ್ಟು ಆಕ್ರೋಶಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಉಪ್ಪಿನಂಗಡಿ- ಸುಬ್ರಹ್ಮಣ್ಯ ರಸ್ತೆಯ ಕೊಯಿಲ ಗ್ರಾಮ ಪಂಚಾಯಿತಿನ ವ್ಯಾಪ್ತಿಯಲ್ಲಿಬರುವ ನೆರ್ಟ್‌ವರ್ಕ್ ಸಮಸ್ಯೆಗೆ ಪರಿಹಾರವಾಗಿ ಹೊಸ ಟವರ್ ನಿರ್ಮಿಸುವಂತೆ ಪ್ರತಿ ವರ್ಷವೂ ಮನವಿಗಳನ್ನು ನೀಡಲಾಗುತ್ತಿದೆ, ಅಲ್ಲದೇ ತುರ್ತು ಸಂದರ್ಭದಲ್ಲಿ ನೆಟ್‌ವರ್ಕ್ ಸಿಗದೇ ಎಲ್ಲಿಗೂ ಕರೆಯೂ ಹೋಗುತ್ತಿಲ್ಲ, ಬರುತ್ತಿಲ್ಲ. ಇದೀಗ ಸರಕಾರ ಕೋವಿಡ್ 19 ವೈರಸ್‌ನಿಂದಾಗಿ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪರದಾಡುವಂತಹ ಸನ್ನೀವೇಶ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮೋದಿಯವರೆಗೂ ಮನವಿ:
ಯಾವುದೇ ಸಿಮ್‌ಗಳ ನೆಟ್‌ವರ್ಕ್ ಇಲ್ಲದಿರುವುದರಿಂದ ಊರಿನ ನಿವಾಸಿಗಳು ಸೇರಿ 2016ರಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಸಮಸ್ಯೆ ಕುರಿತಾಗಿ ಮನವಿಯನ್ನು ಸಲ್ಲಿಸಲಾಗಿತ್ತು. ಬಳಿಕ ಮನವಿಯನ್ನು ಪರಿಶೀಲಿಸಿ ಒಂದು ವಾರದಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ನಾಗರಿಕರಿಗೆ ಪ್ರತಿಕ್ರಿಯೆ ಬಂದಿತ್ತು. ಆದರೆ ಈವರೆಗೆ ಯಾವುದೇ ಒಂದು ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂಬುವುದು ಶೊಚನೀಯ.

ಗ್ರಾಮಸ್ಥರಿಗೆ ಸಂಕಷ್ಟ:
ಕುದ್ಲೂರು ಗ್ರಾಮಸ್ಥರಿಗೆ ದೈನಂದಿನದ ಸಂಪರ್ಕ ಹಾಗೂ ಅಂತರ್ಜಾಲ ವಿನಿಯೋಗಕ್ಕೆ ನೆಟ್‌ವರ್ಕ್ ಸಮಸ್ಯೆ ಉಂಟಾಗಿ ಇಡೀ ಊರೇ ಸ್ತಬ್ಧವಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ತೊಂದರೆ, ಸಮಸ್ಯೆಗಳು ಎದುರಾದರೆ ಇನ್ನೊಬ್ಬರನ್ನು ಸಂಪರ್ಕಿಸುವುದು ಬಹಳ ತ್ರಾಸದಾಯಕ ಕಾರ್ಯ. ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್‌ವರ್ಕ್‌ನ ಸಮಸ್ಯೆ ಇಲ್ಲದಂತೆ ಸಮರ್ಪಕವಾದ ಸೌಲಭ್ಯವನ್ನು ಒದಗಿಸುವುದರೊಂದಿಗೆ ಖಾಸಗಿ ನೆಟ್‌ವರ್ಕ್ ಕಂಪನಿಗಳು ಸಹಾಯಕ್ಕಾಗಿ ಮುಂದೇ ಬಂದ್ದಲ್ಲಿ ಸಮಸ್ಯೆಗೆ ಪರಿಹಾರ ಎಂದು ಗ್ರಾಮಸ್ಥರ ಅಭಿಪ್ರಾಯ.

ಶಾಸಕರೂ, ಜನಪ್ರತಿನಿಧಿಗಳು ಮೌನ:
ಸಮಸ್ಯೆಯನ್ನು ಕಂಡ ತಕ್ಷಣವೇ ಅದನ್ನು ಪರಿಹರಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ, ಈ ನಿಟ್ಟಿನಲ್ಲಿ ಈ ಊರಿನವರು ಶಾಸಕರಿಗೆ ಈವರೆಗೆ ೪ ಬಾರಿ ಮನವಿಗಳನ್ನು ಕೊಟ್ಟಾಗಿದೆ, ಸಂಬಂಧಿಸಿದ ಇಲಾಖಾ ಅಧಿಕಾರಿಗಳೂ, ಜನಪ್ರತಿನಿಧಿಗಳ ತೀರಾ ನಿರ್ಲಕ್ಷ್ಯವೇ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿಯೇ ನೆಟ್‌ವರ್ಕ್ ಸಮಸ್ಯೆಗೆ ನೇರ ಕಾರಣವಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಶೀಘ್ರವೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಊರವರು ಭರವಸೆಯಿಟ್ಟಿದ್ದಾರೆ.

ಆನ್‌ಲೈನ್ ಕ್ಲಾಸ್‌ಗೂ ಪೆಟ್ಟು:
ಭವಿಷ್ಯವನ್ನು ರೂಪಿಸಿಕೊಳ್ಳಲಿರುವ ವಿದ್ಯಾರ್ಥಿಗಳ ಜೀವನದಲ್ಲಿಯೂ ಈ ಸಮಸ್ಯೆ ಮುಳ್ಳಾಗಿ ಪರಿಣಾಮಿಸಿದೆ, ಕೋವಿಡ್ ೧೯ ನಿಂದಾಗಿ ಆನ್‌ಲೈನ್ ಶಿಕ್ಷಣವನ್ನು ಜಾರಿಗೆ ತಂದಿದೆ. ಆದರೆ ಈ ಗ್ರಾಮದಲ್ಲಿರುವ ನೆಟ್‌ವರ್ಕ್, ಅಂತರ್ಜಾಲ ಸಮಸ್ಯೆಯಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಚ್ಯುತಿ ಬರುತ್ತಿದೆ. ಆನ್‌ಲೈನ್ ತರಗತಿ ನಡೆಯುವಾಗ ನೆಟ್‌ವರ್ಕ್ ಆಡಚಣೆಯಿಂದಾಗಿ ಗುಡ್ಡೆ, ಮನೆಯ ಹಂಚಿ ಮೇಲೆ ಹೋಗಿ ಸಂಕಷ್ಟದ ತುದಿಯಲ್ಲಿ ಸಿಲುಕಿದ್ದಾರೆ.

ಕುದ್ಲೂರು ಭಾಗದ ಗ್ರಾಮಸ್ಥರಿಗೆ ನೆಟ್‌ವರ್ಕ್‌ನ ಸಮಸ್ಯೆಗೆ ಶೀಘ್ರದಲ್ಲಿಯೇ ಪರಿಹಾರವನ್ನು ಒದಗಿಸುವ ಕಾರ್ಯದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಲ್ಲದೇ ಖಾಸಗಿ ನೆಟ್‌ವರ್ಕ್ ಕಂಪನಿಗಳ ಸಹಕಾರದಿಂದ ಕಾರ್ಯ ನಡೆಯಲಿದೆ. – ಎಸ್. ಅಂಗಾರ, ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ

ಕಳೆದ ಹಲವು ವರ್ಷಗಳಿಂದ ನಮ್ಮೂರ ಜನತೆ ನೆಟ್‌ವರ್ಕ್ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಮಕ್ಕಳ ವಿಧ್ಯಾಭ್ಯಾಸ, ಯುವ ಪೀಳಿಗೆಯ ಅಂತರ್ಜಾಲ ಸಂಪರ್ಕ ಎಲ್ಲವೂ ಕಡಿತಗೊಂಡದುದರಲ್ಲಿ ಅತೀವ ಖೇದವಿದೆ. ಈ ಊರಿಗೆ ಟವರ್ ಅಳವಡಿಸುವುದನ್ನು ಸವಾಲಾಗಿ ತೆಗೆದು ಕಾರ್ಯಪ್ರವೃತಿಗೆ ಇಳಿದಿದ್ದೇನೆ. ಇದಕ್ಕಾಗಿ ಹಳ್ಳಿಯಿಂದ ದಿಲ್ಲಿಗೆ ಹೋಗಬೇಕಾಗಿ ಬಂದರೂ ಸಾಧಿಸಿಯೇ ತೀರುತ್ತೇನೆ ಎಂಬ ಭರವಸೆಯಿದೆ. – ಎಂ.ಎಂ ಮಹ್ ರೂಫ್ ಆತೂರು, ಸಾಮಾಜಿಕ ಕಾರ್ಯಕರ್ತರು, ಕುದ್ಲೂರು

ನಮ್ಮೂರಲ್ಲಿ ನೆಟ್‌ವರ್ಕ್ ಸಮಸ್ಯೆ ತುಂಬಾ ಇದೆ. ಇದೀಗ ಲಾಕ್‌ಡೌನ್‌ನಿಂದಾಗಿ ಆನ್ ಲೈನ್ ತರಗತಿ ನಡೆಯುತ್ತಿರುವುದರಿಂದ ತುಂಬಾ ಸಮಸ್ಯೆ ಆಗುತ್ತಿದೆ. ನಾವು ಮೊಬೈಲ್ ಹಿಡ್ಕೊಂಡು ಗುಡ್ಡೆ, ಮನೆಯ ಹಂಚಿಗೆಲ್ಲಾ ಹತ್ತಿ ಪರದಾಡಿಕೊಂಡು ಕ್ಲಾಸ್ ಕೇಳುತ್ತಿದ್ದೇವೆ. ದಯವಿಟ್ಟು ನಮ್ಮ ವಿಧ್ಯಾಭ್ಯಾಸವನ್ನು ನೋಡ್ಕೊಂಡಾದ್ರೂ ನೆಟ್ ವರ್ಕ್ ಸಮಸ್ಯೆ ಬಗೆಹರಿಸಿಕೊಡಿ. – ಕೌಶಿಕ್, ವಿದ್ಯಾರ್ಥಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.