ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಒಬ್ಬಂಟಿ | ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಪಳ್ಳತ್ತಡ್ಕದ ಮೋನಪ್ಪ

Puttur_Advt_NewsUnder_1
Puttur_Advt_NewsUnder_1

✍️  ಸಿಶೇ ಕಜೆಮಾರ್
ಪುತ್ತೂರು: ಕಿತ್ತು ತಿನ್ನುವ ಬಡತನದ ಮಧ್ಯೆ ತನ್ನ ಎರಡೂ ಕಿಡ್ನಿಗಳ ತೊಂದರೆಯಿಂದ ಬಳಲುತ್ತಿರುವ ಒಬ್ಬಂಟಿಗೆ ಈಗ ಆರ್ಥಿಕ ಸಹಾಯ ಬೇಕಾಗಿದೆ. ಇವರು ಕೆಯ್ಯೂರು ಗ್ರಾಮದ ಪಳ್ಳತ್ತಡ್ಕ ನಿವಾಸಿ 59 ವರ್ಷದ ಮೋನಪ್ಪ. ಕಳೆದ 7 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಇವರಿಗೆ ಊರವರೇ ಆಸರೆಯಾಗಿದ್ದಾರೆ. ಡಯಾಲಿಸ್‌ಗೆ ಹಣವಿಲ್ಲದೆ ಪರದಾಡುತ್ತಿರುವ ಇವರು ದಾನಿಗಳ ನೆರವನ್ನು ಯಾಚಿಸಿದ್ದಾರೆ.


ಪಳ್ಳತ್ತಡ್ಕದಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿರುವ ಇವರಿಗೆ 2014ರಿಂದ ಕಿಡ್ನಿ ಸಮಸ್ಯೆ ಉಂಟಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು ಸಾಲ ಮಾಡಿ ಚಿಕಿತ್ಸೆ ಮಾಡಿಸಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.ಕುಟುಂಬಸ್ಥರು ಇದ್ದರೂ ಯಾರು ನೋಡುವುದಿಲ್ಲ ಎನ್ನುವ ಮೋನಪ್ಪರು ನೆರೆಹೊರೆಯ ಕೆಲವು ಮಂದಿ ಸಹಾಯ ಮಾಡುತ್ತಿದ್ದಾರೆ ಎನ್ನುತ್ತಾರೆ.
ವಾರದಲ್ಲಿ ಎರಡೂ ಬಾರಿ ಡಯಾಲಿಸ್ ಮಾಡಬೇಕಾದ ಪರಿಸ್ಥಿತಿ ಇದ್ದು ಆಸ್ಪತ್ರೆಗೆ ಹೋಗಿ ಬರಲು ಇವರಿಗೆ ಸಾಧ್ಯವಾಗುತ್ತಿಲ್ಲ. ಕಣ್ಣು ಸರಿಯಾಗಿ ಕಾಣುತ್ತಿಲ್ಲ ನಡೆದಾಡಲು ಕಷ್ಟವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸ್ಥಳೀಯ ಜಯಂತ ಪೂಜಾರಿ ಕೆಂಗುಡೇಲು ಎಂಬವರು ನನ್ನನ್ನು ಅವರ ಕಾರಿನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬಂದು ಬಿಡುತ್ತಿದ್ದಾರೆ. ದಿನಸಿ ಸಾಮಾಗ್ರಿ ಮತ್ತು ಆರ್ಥಿಕವಾಗಿಯೂ ಸಹಾಯ ಮಾಡುತ್ತಿದ್ದಾರೆ ಎನ್ನುತ್ತಾರೆ. ಅದೇ ರೀತಿ ಲಾಕ್‌ಡೌನ್ ಸಮಯದಲ್ಲಿ ಸ್ಥಳೀಯ ರಫೀಕ್ ಎಂಬವರು ಕೂಡ ಆರ್ಥಿಕ ಸಹಾಯ ಮತ್ತು ದಿನಸಿ ಸಾಮಾಗ್ರಿಗಳನ್ನು ನೀಡಿ ಸಹಾಯ ಮಾಡಿದ್ದಾರೆ ಎನ್ನುತ್ತಾರೆ.
ಸರಕಾರದಿಂದ ಈವರೇಗೆ ಯಾವುದೇ ಆರ್ಥಿಕ ಸಹಾಯ ಬಂದಿಲ್ಲ. ಆಸ್ಪತ್ರೆಯ ಬಿಲ್ ಕಳುಹಿಸಿದರು ಯಾವುದೇ ಪ್ರಯೋಜನ ಆಗಿಲ್ಲ ಎನ್ನುವ ಇವರು ವಾರಕ್ಕೆ ಎರಡು ಬಾರಿ ಡಯಾಲಿಸ್ ಮಾಡಬೇಕಾಗಿರುವುದರಿಂದ ತುಂಬಾ ಖರ್ಚು ಇದೆ. ಆದ್ದರಿಂದ ದಾನಿಗಳ ಸಹಾಯವನ್ನು ಯಾಚಿಸಿದ್ದಾರೆ. ಯಾರಾದರೂ ದಾನಿಗಳು ಸಹಾಯ ಮಾಡುವುದಾದರೆ ಅವರ ಬ್ಯಾಂಕ್ ಖಾತೆ ಲಕ್ಷೀ ವಿಲಾಸ್ ಬ್ಯಾಂಕ್ ಪುತ್ತೂರು, ಅಕೌಂಟ್ ನಂಬರ್ 0553305000000584 ಐಎಫ್‌ಸಿ ಕೋಡ್-ಎಲ್‌ಎವಿಬಿ 0000553 ಗೆ ಧನ ಸಹಾಯ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮತ್ತು ಅವರನ್ನು ಸಂಪರ್ಕಿಸಲು ಮೊ.8970165584ಗೆ ಕರೆ ಮಾಡಬಹುದಾಗಿದೆ.

2014ರಿಂದ ನಾನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನಾನು ತೀರಾ ಬಡವನಾಗಿದ್ದು ತುತ್ತು ಅನ್ನಕ್ಕೂ ಕಷ್ಟಪಡುತ್ತಿದ್ದೇನೆ. ಪ್ರಸ್ತುತ ನನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದೇನೆ. ಸ್ಥಳೀಯ ಜಯಂತ ಪೂಜಾರಿ ಕೆಂಗುಡೇಲುರವರು ನನ್ನನ್ನು ಆಸ್ಪತ್ರೆಗೆ ಡಯಾಲಿಸ್‌ಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಡೆದಾಡಲು ಕಷ್ಟವಾಗುತ್ತಿದ್ದು, ಕಣ್ಣು ಕೂಡ ಸರಿಯಾಗಿ ಕಾಣುತ್ತಿಲ್ಲ. ದಯವಿಟ್ಟು ಯಾರಾದರೂ ದಾನಿಗಳು ನನಗೆ ಆರ್ಥಿಕ ಸಹಾಯ ಮಾಡಬೇಕಾಗಿ ಪ್ರಾರ್ಥಿಸುತ್ತಿದ್ದೇನೆ. ಮೋನಪ್ಪ ಪಳ್ಳತ್ತಡ್ಕ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.