ಪುತ್ತೂರು ಅಬಕಾರಿ ಸಿಬ್ಬಂದಿ  ಕೋಡಿಂಬಾಳ ನಿವಾಸಿ ಮೃತ್ಯು- ಮೃತಪಟ್ಟ ಬಳಿಕ ಕೋವಿಡ್ ವರದಿ ಪಾಸಿಟಿವ್

Puttur_Advt_NewsUnder_1
Puttur_Advt_NewsUnder_1

ಕಡಬ: ಪುತ್ತೂರಿನಲ್ಲಿ ಅಬಕಾರಿ ಸಿಬ್ಬಂದಿಯಾಗಿದ್ದ ಕೋಡಿಂಬಾಳ ದ ನಿವಾಸಿ 59 ವರ್ಷದ ವ್ಯಕ್ತಿ ಮೃತಪಟ್ಟಿದ್ದು,  ಅವರು  ಮೃತಪಟ್ಟ ಬಳಿಕ ಅವರ ಕೋವಿಡ್  ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.
ಜು.23ರಂದು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದು ಅವರು ಜು.25 ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೀಗ ಮೃತರ ಕೋವಿಡ್ ವರದಿ  ಪಾಸಿಟಿವ್ ಬಂದಿದೆ. ಪ್ರಸ್ತುತ ಕೋಡಿಂಬಾಳ ನಿವಾಸಿಯಾಗಿರುವ ಇವರು ಪುತ್ತೂರು ಅಬಕಾರಿ ಇಲಾಖೆಯ ಕೂರ್ನಡ್ಕದಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದಲ್ಲಿ ಗಾರ್ಡ್ ಆಗಿದ್ದು ಕೆಲ ದಿನಗಳ ಹಿಂದೆ ಪುತ್ತೂರಿನ ತನ್ನ ವಸತಿ ಗೃಹದಲ್ಲಿ ಕುಸಿದು ಬಿದ್ದಿದ್ದರು, ಬಳಿಕ ಅವರನ್ನು ಅವರ ಸಹೋದರ ಮಂಗಳೂರು ಆಸ್ಪತ್ರೆ ಗೆ ದಾಖಲಿಸಿದ್ದರು. ಇದೀಗ ಅವರು ಮೃತಪಟ್ಟಿದ್ದಾರೆ. ಮೃತಪಟ್ಟ ಬಳಿಕ ಅವರ ಕೋವಿಡ್ ವರದಿಯಲ್ಲಿ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕದ ಮೇರೆಗೆ ಕೋಡಿಂಬಾಳ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.