ಜನ ಶಿಕ್ಷಣ ಟ್ರಸ್ಟ್, ಸೆಲ್ಕೋ ಫೌಂಡೇಶನ್ ಸಹಭಾಗಿತ್ವದಲ್ಲಿ ಬನ್ನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಲಾರ್ ಮನೆ ಅಭಿಯಾನ

Puttur_Advt_NewsUnder_1
Puttur_Advt_NewsUnder_1
  • ಸ್ವಾಲಂಬನೆಯ ಬದುಕಿಗೆ ಸೌರಶಕ್ತಿಯೂ ಪೂರಕ – ಸಂಜೀವ ಮಠಂದೂರು

ಪುತ್ತೂರು: ಬನ್ನೂರು ಗ್ರಾಮವನ್ನು ಸ್ವಚ್ಛ, ಸೋಲಾರ್, ಹಸಿರು, ಜಲಾಮೃತ ಮಾದರಿ ಗ್ರಾಮ ಮಾಡುವ ದೃಷ್ಟಿಯಿಂದ ಜನ ಶಿಕ್ಷಣ ಟ್ರಸ್ಟ್ ಮಂಗಳೂರು ಮತ್ತು ಸೆಲ್ಕೋ ಸೋಲಾರ್ ಇದರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸೋಲಾರ್ ಮನೆ ಅಭಿಯಾನ ಕಾರ್ಯಕ್ರಮಕ್ಕೆ ಸಂಬಂಧಿಸಿ ಜು.೨೫ರಂದು ಸಂಪೂರ್ಣ ಸೋಲಾರ್ ಮನೆ ಕಾರ್ಯಕ್ರಮ ನಡೆಯಿತು.


ಸ್ವಾಲಂಬನೆಯ ಬದುಕಿಗೆ ಸೌರಶಕ್ತಿಯೂ ಪೂರಕ:
ಶಾಸಕ ಸಂಜೀವ ಮಠಂದೂರು ಅವರು ಸೋಲಾರ್ ಈಗಾಗಲೇ ಅಳವಡಿಸಲಾಗಿದ್ದ ಸೋಲಾರ್ ಮನೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಬನ್ನೂರು ಪಂಚಾಯತ್ ಬಳಿಯ ಹೊಟೇಲ್‌ನಲ್ಲಿ ಸೋಲಾರ್ ದೀಪ ಉದ್ಘಾಟಿಸಿ ಮಾತನಾಡಿ ಪ್ರಧಾನಿಯವರ ಸಂದೇಶಕ್ಕೆ ತಕ್ಕಂತೆ ಪೂರಕವಾಗಿ ಗ್ರಾಮೀಣ ಭಾಗದ ಜನರು ಸ್ವಾವಲಂಭಿ ಜೀವನಕ್ಕೆ ಸೌರಶಕ್ತಿಯೂ ಪೂರಕ ಕೆಲಸ ಮಾಡುತ್ತಿದೆ. ನೂರಕ್ಕೆ ನೂರು ಮನೆಗಳು ಸೋಲಾರ್ ಮನೆಗಳಾಗಲಿ ಎಂದು ಹಾರೈಸಿದರು. ರಾಜ್ಯ ಪ್ರಶಸ್ತಿ ವಿಜೇತೆ ಅಂಗನವಾಡಿ ಕಾರ್ಯಕರ್ತೆ ಅರುಣಾ ಅವರ ಕುಟುಂಬದ ಸಂಪೂರ್ಣ ಸೋಲಾರ್ ಮನೆ, ಪರಿಶಿಷ್ಟ ಜಾತಿಯ ಕೃಷ್ಣಪ್ಪ, ಸ್ವ ಉದ್ಯೋಗ ಪಾನ್‌ಪುರಿ ತಯಾರಿ ಘಟ, ಗ್ರಾ.ಪಂ ಸದಸ್ಯ ರತ್ನಾಕರ ಪ್ರಭು ಅವರ ಕ್ಯಾಂಟೀನ್‌ಗೆ ಅಳವಡಿಸಿದ ಸೋಲರ್ ಉದ್ಘಾಟಿಸಿದ ಶಾಸಕರು ನರೇಗಾ ತೋಟ ಆವರಣ ಗೋಡೆ ಸೋಲಾರ್, ಸ್ಮಾರ್ಟ್‌ಕ್ಲಾಸ್ ಸೌಲಭ್ಯ ಹೊಂದಿರುವ ಬೀರಿಗ ಮಾದರಿ ಅಂಗನವಾಡಿ, ಚಿಕ್ಕಮುಡ್ನೂರಿನಲ್ಲಿರುವ ಮೋಹಿನಿ ಗೌಡ ಅವರ ಕುಟುಂಬದ ಸ್ವ ಉದ್ಯೋಗ ಪಾನ್‌ಪುರಿ ತಯಾರಿ ಘಟಕವನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನ ಜಯಾನಂದ, ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಪಂಚಾಯತ್ ಸದಸ್ಯರಾದ ರತ್ನಾಕರ ಪ್ರಭು, ಜಿನ್ನಪ್ಪ, ಸೆಲ್ಕೊ ಸಂಸ್ಥೆಯ ಪುತ್ತೂರು ವಿಭಾಗದ ಹಿರಿಯ ವ್ಯವಸ್ಥಾಪಕ ಸಂಜಿತ್ ರೈ, ಸೆಲ್ಕೊ ಸೋಲಾರ್ ನ ಸುಧಾಕರ್, ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕರಾದ ಶೀನ ಶೆಟ್ಟಿ, ಕೃಷ್ಣಮೂಲ್ಯ, ಅಂಗನವಾಡಿ ಕಾರ್ಯಕರ್ತೆ ಅರುಣಾ, ಸೋಲಾರ್ ಮನೆ ಅಭಿಯಾನದ ಸದಸ್ಯರಾದ ಮಮತಾ, ಸಂಧ್ಯಾ, ಭಾರತಿ, ರೇಖಾ, ಆಶಾ ಕಾರ್ಯಕರ್ತರು  ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.