Breaking News

ಗೋ ಸಾಗಾಟದ ಹೆಸರಿನಲ್ಲಿ ಸಂಘಪರಿವಾರದಿಂದ ಅಶಾಂತಿ ಸೃಷ್ಠಿಸಲು ಯತ್ನ-ಪಿ.ಎಫ್.ಐ ಆರೋಪ | ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಿ-ಜಾಬಿರ್ ಅರಿಯಡ್ಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದನ ಸಾಗಾಟದ ಹೆಸರಿನಲ್ಲಿ ಮತ್ತು ಇನ್ನಿತರ ಸಣ್ಣ ಪುಟ್ಟ ವಿಚಾರಗಳನ್ನಿಟ್ಟುಕೊಂಡು ಸಂಘ ಪರಿವಾರ ಜಿಲ್ಲೆಯಲ್ಲಿ ನಿರಂತರವಾಗಿ ಅಶಾಂತಿ ಸೃಷ್ಠಿಸಲು ಪ್ರಯತ್ನಿಸುತ್ತಿದ್ದು ಪೊಲೀಸ್ ಇಲಾಖೆ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ಆಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ಗೋ ಸಾಗಾಟಗಾರರ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸುತ್ತಿರುವ ಘಟನೆಗಳು ಮಿತಿ ಮೀರುತ್ತಿದ್ದರೂ ಇವರ ವಿರುದ್ಧ ಜಿಲ್ಲಾಡಳಿತ ಸಮರ್ಪಕವಾಗಿ ಕ್ರಮ ಕೈಗೊಳ್ಳದೇ ಇರುವುದರಿಂದ ಆರೋಪಿಗಳಿಗೆ ಕಾನೂನಿನ ಭಯ ಇಲ್ಲದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಲು ಕಾರಣವಾಗುತ್ತಿದೆ.
ಮಂಗಳೂರಿನ ಉರ್ವ, ಸುಳ್ಯದ ದುಗ್ಗಲಡ್ಕ, ಕನಕಮಜಲು ಸೇರಿದಂತೆ ಹಲವು ಕಡೆ ಈ ಹಿಂದೆ ನಡೆದ ಹಲವಾರು ಘಟನೆಗಳೇ ಇದಕ್ಕೆ ಜ್ವಲಂತ ಉದಾಹರಣೆ ಯಾಗಿದೆ. ಒಂದು ವೇಳೆ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಂಡಿದ್ದಲ್ಲಿ ಇಂತಹಾ ಘಟನೆಗಳು ಮರುಕಳಿಸುತ್ತಿರಲಿಲ್ಲ. ಸಮಾಜದ ಸ್ವಾಸ್ಥ್ಯ ಕೆಡಿಸಲು ಶ್ರಮಿಸುವ ಸಂಘಪರಿವಾರದ ಗೂಂಡಾಗಿರಿ ವರ್ತನೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಪೋಲೀಸ್ ಇಲಾಖೆ ಶ್ರಮಿಸದೇ ಇರುವುದರಿಂದ ಇಂತಹ ಕಾನೂನು ಬಾಹಿರ ಘಟನೆಗಳು ಪುನರಾವರ್ತನೆಯಾಗುತ್ತಲೇ ಇದೆ ಎಂದು ಅವರು ತಿಳಿಸಿದ್ದಾರೆ.
ಸಂಘಪರಿವಾರದ ಗೂಂಡಾಗಿರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳು ಮನವಿ, ಪ್ರತಿಭಟನೆ ನಡೆಸಿದ್ದರೂ ಪೋಲಿಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳದೇ ಇರುವುದು ಸಂಶಯಕ್ಕೀಡಾಗಿದ್ದು ಪರೋಕ್ಷವಾಗಿ ಪೋಲಿಸ್ ಇಲಾಖೆಯ ಬೆಂಬಲ ಸಿಕ್ಕಿದಂತಾಗಿದೆ.
ಆದ್ದರಿಂದ ದನ ಸಾಗಾಟಗಾರರ ಮೇಲೆ ಮತ್ತು ಸಣ್ಣಪುಟ್ಟ ವಿಚಾರಗಳನ್ನು ಹಿಡಿದು ದಾಳಿ ನಡೆಸುವ ಸಂಘಪರಿವಾರದ ಕಾರ್ಯಕರ್ತರ ವಿರುದ್ಧವಾಗಿ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಬೇಕು ಇಲ್ಲದೇ ಇದ್ದಲ್ಲಿ ಇದರ ವಿರುದ್ಧ ಹೋರಾಟಕ್ಕೆ ನಮ್ಮ ಸಂಘಟನೆ ಸಿದ್ದವಾಗಿದೆ. ಎಂದು ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷ ಜಾಬಿರ್ ಅರಿಯಡ್ಕ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪುತ್ತೂರಿನಲ್ಲಿ ಲಾರಿಗಳನ್ನು ತಡೆದದ್ದು ಖಂಡನೀಯ: ಮಂಡ್ಯದಿಂದ ಪುತ್ತೂರಿನ ಸರಕಾರಿ ಸ್ವಾಯತ್ತ ಸಂಸ್ಥೆಯೊಂದಕ್ಕೆ ಜು.24ರಂದು ಸಕ್ರಮವಾಗಿ ಎಲ್ಲಾ ದಾಖಲೆಗಳೊಂದಿಗೆ ತರುತ್ತಿದ್ದ ಜಾನುವಾರು ತುಂಬಿದ್ದ ಮೂರು ಲಾರಿಗಳನ್ನು ಸಂಘಪರಿವಾರದ ಕಾರ್ಯಕರ್ತರು ಕಾನೂನು ಬಾಹಿರವಾಗಿ ನಿಲ್ಲಿಸಿ ಗೂಂಡಾಗಿರಿ ನಡೆಸಲು ಪ್ರಯತ್ನಿಸಿರುವುದು ಖಂಡನಾರ್ಹ, ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಕೆಲವು ಸಾರ್ವಜನಿಕರು ಸ್ಥಳದಲ್ಲೇ ಜಮಾಯಿಸಿರುವುದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಆದರೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕಾಗಿದ್ದ ಪೋಲಿಸರು ಲಾರಿ ಚಾಲಕ ಕೇಸ್ ನೀಡಿದರೆ ಮಾತ್ರ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿ ನುಣುಚಿಕೊಂಡದ್ದು ಸರಿಯಾದ ಕ್ರಮವಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದು ಜಾಬಿರ್ ಅರಿಯಡ್ಕ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.